ಎಲ್ಲಾ ನಿಯೋಜಿತ ಶಿಕ್ಷಕರ ವಿವರ ಕೇಳಿದ ಆಯುಕ್ತ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾನೂನುಬಾಹಿರ ಕ್ರಮಗಳಿಂದ ಬೇಸತ್ತಿರುವ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಳಿನ್‌ ಅತುಲ್‌ ಅವರು, ಬೋಧಕೇತರ ಕೆಲಸಕ್ಕೆ ನಿಯೋಜಿತರಾದ ಎಲ್ಲಾ ಶಿಕ್ಷಕರ ವಿವರಗಳನ್ನು ಸಲ್ಲಿಸುವಂತೆ ಡಿಡಿಪಿಐ ಅವರಿಗೆ ತಾಕೀತು ಮಾಡಿದ್ದಾರೆ.

ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಅಮಾನತಾದ ನಂತರ, ವಿಚಾರಣೆ ಬಾಕಿ ಇರಿಸಿ ʼಸಿʼ ವಲಯಕ್ಕೆ ವರ್ಗಾಯಿಸಬೇಕಿದ್ದ ಹುಲಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸೈಯದ್‌ ಅಬ್ದುಲ್‌ ರೆಹಮಾನ್‌ ಅವರನ್ನು ಕಾನೂನುಬಾಹಿರವಾಗಿ ʼಎʼ ವಲಯಕ್ಕೆ ಸೇರಿದ ಶಾಲೆಗೆ ವರ್ಗಾಯಿಸಲಾಗಿತ್ತು...ಮುಂದೆ ಓದಿ

ಸಿಪಿಐ ಉದಯರವಿ ವಿರುದ್ಧ ಮಾಜಿ ಸಚಿವ ತಂಗಡಗಿ ನೇರ ಆರೋಪ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕನಕಗಿರಿ ಕ್ಷೇತ್ರ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ; ಇದರಲ್ಲಿ ಶಾಸಕ ಬಸವರಾಜ ಧಡೆಸುಗೂರು, ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಗಂಗಾವತಿ ಗ್ರಾಮೀಣ ಠಾಣೆ ಸಿಪಿಐ ಉದಯರವಿ ಅವರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಮಾಜಿ ಶಾಸಕ ಶಿವರಾಜ ತಂಗಡಗಿ ಮಾಡಿದ್ದಾರೆ.

(ಸುದ್ದಿಗೋಷ್ಠಿಯ ವಿಡಿಯೋ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ)

https://drive.google.com/file/d/1qrl9cEiI06LORKusyL7qa_t7uN7lCvpX/view?usp=sharing..ಮುಂದೆ ಓದಿ

ತಪ್ಪು ತಿದ್ದಿಕೊಂಡ ಕೊಪ್ಪಳ ಡಿಡಿಪಿಐ

ವಿಜಯ ಪರ್ವ ಫಲಶೃತಿ | ಕೊಪ್ಪಳ

ಅಮಾನತಾಗಿದ್ದ ಶಿಕ್ಷಕನೊಬ್ಬನನ್ನು ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020 ರ ಅಡಿ ʼಸಿʼವಲಯ ಬಿಟ್ಟು ʼಎʼ ವಲಯಕ್ಕೆ ವರ್ಗಾಯಿಸಿದ್ದ ಕೊಪ್ಪಳ ಡಿಡಿಪಿಐ ತಮ್ಮ ಆದೇಶ ಬದಲಿಸಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಹುಲಗಿಯ ಸರಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಸೈಯದ್‌ ಅಬ್ದುಲ್‌ ರೆಹಮಾನ್‌ ಅವರನ್ನು ಈಗ ʼಎʼ ವಲಯದಿಂದ ʼಸಿʼ ವಲಯಕ್ಕೆ ಮರು ವರ್ಗಾವಣೆ ಮಾಡಿದ್ದಾರೆ...ಮುಂದೆ ಓದಿ

ಸಿಪಿಐ ಉದಯರವಿ ದೂರವಾಣಿ ವಿವಾದ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆ ಗಂಗಾವತಿಯ ಗ್ರಾಮೀಣ ಸಿಪಿಐ ಉದಯರವಿ ಅವರು ಕೊಪ್ಪಳ ನಗರದ ನಿವಾಸಿ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಪೂಜಾರ ಅವರಿಗೆ ಮಾಡಿರುವ ದೂರವಾಣಿ ಕರೆ ಸಾಕಷ್ಟು ವಿವಾದ ಮೂಡಿಸಿದೆ.

ಜೂನ್‌ 1 ಮಧ್ಯಾಹ್ನ 1.03 ಕ್ಕೆ ಮಲ್ಲಿಕಾರ್ಜುನ ಪೂಜಾರ್‌ ಅವರಿಗೆ ಕರೆ ಮಾಡಿರುವ ಉದಯರವಿ ಅವರು ತಮ್ಮ ಪರಿಚಯ ಹೇಳಿಕೊಂಡು, ಗಂಗಾವತಿಯ ಗ್ರಾಮೀಣ ಸಿಪಿಐ ಠಾಣೆಗೆ ಬರುವಂತೆ ಸೂಚಿಸುತ್ತಾರೆ...ಮುಂದೆ ಓದಿ

ವಿರೋಧದ ನಡುವೆಯೇ ಮಕ್ಕಳ ಸಮೀಕ್ಷೆಗೆ ಶಿಕ್ಷಕರ ನಿಯೋಜನೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೋವಿಡ್‌ ಮೂರನೇ ಅಲೆ ತಡೆಯುವ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಮಕ್ಕಳ ಸಮೀಕ್ಷೆ ಅದೇ ಕೋವಿಡ್‌ ಉಲ್ಬಣಗೊಳ್ಳಲು ಕಾರಣವಾಗಬಹುದಾದ ಭೀತಿ ತಲೆದೋರಿದೆ. ಶಿಕ್ಷಕರ ವಿರೋಧದ ನಡುವೆಯೇ ಸಮೀಕ್ಷೆ ಕಾರ್ಯದ ವೇಳಾಪಟ್ಟಿ ಬಿಡುಗಡೆಯಾಗಿದೆ.

ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇಲ್ಲದ ಇಂತಹ ಸಮೀಕ್ಷೆಗೆ ಶಿಕ್ಷಕರಷ್ಟೇ ಅಲ್ಲ, ವಿಧಾನ ಪರಿಷತ್‌ ಸದಸ್ಯ ಶಶಿಲ್‌ ನಮೋಶಿ ಕೂಡಾ ವಿರೋಧ ವ್ಯಕ್ತಪಡಿಸಿದ್ದರು.… ..ಮುಂದೆ ಓದಿ

ಗವಿಮಠ‌ ಕೋವಿಡ್ ಆಸ್ಪತ್ರೆಗೆ ಎನ್ಆರ್ ಐ ನೆರವು

ವಿಜಯಪರ್ವ ಸುದ್ದಿ |ಕೊಪ್ಪಳ

ಇಲ್ಲಿನ ಗವಿಮಠ ಕೋವಿಡ್ ಆಸ್ಪತ್ರೆಗೆ ಬ್ರೀತ್ ಇಂಡಿಯಾ ಅಭಿಯಾನದಡಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸೇರಿ ಮೆಡಿಕಲ್ ಉಪಕರಣಗಳು ದೇಣಿಗೆ ನೀಡಲಾಯಿತು. ಅಭಿಯಾನದ ಸ್ವಯಂ ಸೇವಕರು ಮೆಡಿಕಲ್ ಉಪಕರಣಗಳನ್ನು ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಹಸ್ತಾತರಿಸಿದರು.

ಈ ವೇಳೆ ಮಾತನಾಡಿದ ಅಭಿಯಾನದ ಕಾರ್ಯಕರ್ತ ಹರ್ಷ ಮಾತನಾಡಿ, ಅನಿವಾಸಿ ಭಾರತೀಯರೇ ಹೆಚ್ಚಿರುವ ಐ ಕ್ಯಾಟ್ ಪೌಂಡೇಷನ್, ಸೊಸೈಟಿ ಆಫ್ ಎಮರ್ಜನ್ಸಿ ಮೆಡಿಸಿನ್ ಇಂಡಿಯಾ ಹಾಗೂ ಅವಿರತ ಭಾರತ ಸಂಸ್ಥೆಗಳ ಸಹಯೋಗದಲ್ಲಿ ಬ್ರೀತ್ ಇಂಡಿಯಾ ಎಂಬ ಘೋಷವಾಕ್ಯದಡಿ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡಲಾಗುತ್ತಿದೆ.… ..ಮುಂದೆ ಓದಿ

ಶಿಕ್ಷಕರಿಗೆ ಜೀವಭೀತಿ ತಂದ ಮಕ್ಕಳ ಸಮೀಕ್ಷೆ ಕಾರ್ಯ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೋವಿಡ್‌ ಎರಡನೇ ಅಲೆಯಲ್ಲಿ ರಾಜ್ಯದ 268 ಶಿಕ್ಷಕರು ಜೀವ ಕಳೆದುಕೊಂಡಿದ್ದಾರೆ ಎನ್ನುತ್ತದೆ ಟೈಮ್ಸ್‌ ಆಫ್‌ ಇಂಡಿಯಾ ಆಂಗ್ಲಪತ್ರಿಕೆಯ ಮೇ 13 ರ ವರದಿ.

ಈ ಕುರಿತು ನಿಖರ ಅಂಕಿಅಂಶಗಳು ಈಗಲೂ ಲಭ್ಯವಿಲ್ಲ. ಇದರ ಮಧ್ಯೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ. ಪಾಟೀಲ್‌ ನಿರ್ದೇಶನದ ಮೇರೆಗೆ ಹೊರಡಿಸಲಾಗಿರುವ ಆದೇಶವೊಂದು ಜಿಲ್ಲೆಯ ಶಿಕ್ಷಕರ ಜೀವಕ್ಕೆ ಎರವಾಗುವ ಅಪಾಯ ತಂದಿದೆ...ಮುಂದೆ ಓದಿ

ರಾಜ್ಯದ 16 ಡಿವೈಎಸ್ಪಿ ವರ್ಗಾವಣೆ; ವೆಂಕಟಪ್ಪ ನಾಯಕ ಮೇಲುಗೈ

ವಿಜಯಪರ್ವ ಸುದ್ದಿ | ಕೊಪ್ಪಳ
ರಾಜ್ಯಾದ್ಯಂತ ಒಟ್ಟೂ 16 ಡಿವೈಎಸ್ಪಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕರ್ನಾಟಕ ಲೋಕಾಯುಕ್ತದ ಕೆ.ವಿ.ಶ್ರೀನಿವಾಸ ಬೆಂಗಳೂರಿನ ಜಯನಗರ, ಅರುಣ್ ನಾಗೇಶಗೌಡ ಯಶವಂತಪೂರ, ವಿ.ಎಲ್.ರಮೇಶ ಕೆಹಿಎಫ್, ಕೆ.ಎಂ.ಸತೀಶ‌ ಬೀದರ್, ಬಸವೇಶ್ವರ ಚಿಂಚೊಳ್ಳಿ, ಮಲ್ಲೇಶ ದೊಡ್ಡಮನಿ ರಾಯಚೂರು ಉಪ‌ವಿಭಾಗ, ಈ.ಶಾಂತವೀರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಎಸ್.ವಿಜಯ ಪ್ರಸಾದ ಉಡುಪಿ‌ ಜಿಲ್ಲೆ ಕಾರ್ಕಳ, ಶಾಂತಮಲ್ಲಪ್ಪ ಸಿಐಡಿ, ಎಸ್.ಟಿ.ಶ್ರೀನಿವಾಸರೆಡ್ಡಿ… ..ಮುಂದೆ ಓದಿ

ಅಮಾನತಾಗಿದ್ದ ಶಿಕ್ಷಕನಿಗೆ ʼಎʼ ವಲಯಕ್ಕೆ ವರ್ಗಾವಣೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ತಾನು ಕೆಲಸ ನಿರ್ವಹಿಸುತ್ತಿದ್ದ ಶಾಲೆಯಲ್ಲಿಯೇ ಶಿಕ್ಷಕಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ ಸಿಕ್ಕಿಬಿದ್ದು ಅಮಾನತಾಗಿದ್ದ ಶಿಕ್ಷಕನನ್ನು, ಇಲಾಖಾ ವಿಚಾರಣೆ ಕಾಯ್ದಿರಿಸಿ, ನಿಯಮಬಾಹಿರವಾಗಿ ʼಎʼ ವಲಯಕ್ಕೆ ವರ್ಗಾವಣೆ ಮಾಡಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.

ಕಾಮದಾಟ ಆಡಲು ಹೋಗಿ ದಾಖಲೆ ಸಮೇತ ಸಿಕ್ಕಿಬಿದ್ದ ಸೈಯದ್‌ ಅಬ್ದುಲ್‌ ರೆಹಮಾನ್‌ ಹಾಗೆ ವರ ಪಡೆದ ಮುಖ್ಯ ಶಿಕ್ಷಕನಾಗಿದ್ದರೆ, ಇಂತಹ ಕಾನೂನುಬಾಹಿರ ಕೆಲಸಗಳನ್ನು ಮಾಡಲೆಂದೇ ಕೊಪ್ಪಳದ ಡಿಡಿಪಿಐ ಪ್ರಭಾರ ವಹಿಸಿಕೊಂಡಿದ್ದ ಎಂ.ಎಸ್.‌..ಮುಂದೆ ಓದಿ

ಕತ್ತರಿಸಿಟ್ಟ ಈರುಳ್ಳಿ ಅಪಾಯಕಾರಿ…

ವಿಜಯ ಪರ್ವ ಸುದ್ದಿ | ಕೊಪ್ಪಳ

1919 ರಲ್ಲಿ ಫ್ಲೂ ರೋಗವು ನಾಲ್ಕು ಕೋಟಿ ಜನರ ಮರಣಕ್ಕೆ ಕಾರಣವಾಯಿತು.

ಇಂತಹ ಫ್ಲೂ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಏನು ಮಾಡಬಹುದು ಎಂಬ ಕುತೂಹಲದಿಂದ ಕೆಲವು ವೈದ್ಯರು ಸದರಿ ಕಾಯಿಲೆಯಿಂದ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿಯಾದರು.

ಇವರೆಲ್ಲರೂ ಫ್ಲೂ ಕಾಯಿಲೆ ತಗಲದೇ ಇದ್ದವರಾಗಿದ್ದು, ಆರೋಗ್ಯವಂತರಾಗಿದ್ದುದನ್ನು ವೈದ್ಯರು ಗಮನಿಸಿದರು. ಅವರಿಗೆ ಫ್ಲೂ ತಗಲದೇ ಇರುವುದಕ್ಕೆ ಏನು ಮಾಡಿದರೆಂದು ಕೇಳಿದಾಗ ಬಂದ ಉತ್ತರ ಇದು:

ಸಿಪ್ಪೆಯನ್ನು ಸುಲಿಯದೇ ಇದ್ದ ಈರುಳ್ಳಿಯನ್ನು ಇಟ್ಟ ಒಂದೊಂದು ತಟ್ಟೆಯನ್ನು ಮನೆಯ ಎಲ್ಲಾ ಕೋಣೆಗಳಲ್ಲಿ ಇಡಲಾಗಿತ್ತು ಎಂದು ಆ ಮನೆಯ ರೈತನ ಹೆಂಡತಿ ಉತ್ತರಿಸಿದಳು...ಮುಂದೆ ಓದಿ