ದಲಿತ ಯುವಕನಿಗೆ ಬೆದರಿಕೆ ಒಡ್ಡಿದ ಪ್ರಕರಣ | ಸಿಪಿಐ ಉದಯರವಿ ತಪ್ಪಿತಸ್ಥ: ವರದಿ

ವಿಜಯ ಪರ್ವ | ಕೊಪ್ಪಳ

ಕೊನೆಗೂ ನಿಷ್ಪಕ್ಷಪಾತ ವರದಿಯೊಂದು ಕೊಪ್ಪಳ ಜಿಲ್ಲೆಯ ಪೊಲೀಸ್‌ ಇಲಾಖೆಯಿಂದ ಬಂದಿದೆ. ಕೊಪ್ಪಳದ ದಲಿತ ಸಂಘಟಕ ಮಲ್ಲಿಕಾರ್ಜುನ್‌ ಪೂಜಾರ್‌ ಅವರಿಗೆ ದೂರವಾಣಿಯಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ತಪ್ಪಿತಸ್ಥ ಎಂದು ಘೋಷಿಸಲಾಗಿದೆ. ಸದರಿ ಪ್ರಕರಣ ಕುರಿತು ವಿಜಯ ಪರ್ವ ವಿಸ್ತೃತವಾಗಿ ವರದಿ ಮಾಡಿತ್ತು. 

ಇದೇ ಜೂನ್‌ 1 ಮಧ್ಯಾಹ್ನ 1.03 ಕ್ಕೆ ಮಲ್ಲಿಕಾರ್ಜುನ ಪೂಜಾರ್‌ ಅವರಿಗೆ ಕರೆ ಮಾಡಿದ್ದ ಉದಯರವಿ ಅವರು ತಮ್ಮ ಪರಿಚಯ ಹೇಳಿಕೊಂಡು, ಗಂಗಾವತಿಯ ಗ್ರಾಮೀಣ ಸಿಪಿಐ ಠಾಣೆಗೆ ಬರುವಂತೆ ಸೂಚಿಸುತ್ತಾರೆ...ಮುಂದೆ ಓದಿ

ಶಿಕ್ಷಕ ಕಾಸಿಂ ಅಕ್ರಮ ನಿಯೋಜನೆ ರದ್ದು: ʼವಿಜಯ ಪರ್ವʼ ವರದಿಗಳ ಫಲಶೃತಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ಶಿಕ್ಷಕರನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡುವ ದಂಧೆಗೆ ಕಡಿವಾಣ ಹಾಕಿದೆ ಸರಕಾರ.

ಇದರ ಅಂಗವಾಗಿ ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಕೊಪ್ಪಳ ನಗರದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆಯ (ಪ್ರೌಢಶಿಕ್ಷಣ) ಸರಕಾರದ ಆಧೀನ ಕಾರ್ಯದರ್ಶಿಗಳು ಆಗಸ್ಟ್‌ 6 ರಂದು ಹೊರಡಿಸಿರುವ ಆದೇಶದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಲಕ್ಷ ರೂಪಾಯಿ ಎಗರಿಸಿದ ಚಾಲಾಕಿ ಕಳ್ಳ: ಸಿಸಿಟಿವಿಯಲ್ಲಿ ದಾಖಲು

ವಿಜಯ ಪರ್ವ ಸುದ್ದಿ | ಕೊಪ್ಪಳ

ಚಾಲಾಕಿ ಕಳ್ಳನೊಬ್ಬ ಕ್ಷಣಾರ್ಧದಲ್ಲಿ ರೂ.1.05 ಲಕ್ಷ ನಗದನ್ನು ಬೈಕ್‌ ಡಿಕ್ಕಿಯಿಂದ ಎಗರಿಸಿದ ಘಟನೆ ನಗರದ ಕಾವೇರಿ ಪೆಟ್ರೋಲ್‌ ಬಂಕ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಡೀ ಘಟನೆ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುದ್ದು, ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಶ್ರಮಿಸುತ್ತಿದ್ದಾರೆ.

ಲಾಚನಕೇರಿಯ ಚನ್ನಪ್ಪಗೌಡ ತಂದಿ ಹನುಮನಗೌಡ ಪಾಟೀಲ್‌ ಎಂಬ ರೈತ, ತಮ್ಮ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಿ, ಅಲ್ಲಿ ನೀಡಿದ್ದ ಚೆಕ್‌ ಅನ್ನು ಕೆನರಾ ಬ್ಯಾಂಕ್‌ನಲ್ಲಿ ನಗದೀಕರಿಸಿದ್ದರು...ಮುಂದೆ ಓದಿ

ಓಡಿಹೋದ ಅನುಮಾನಾಸ್ಪದ ವ್ಯಕ್ತಿ; ಪಿಸ್ತೂಲ್‌ ಹಿಡಿದು ಬೆನ್ನತ್ತಿದ ಎಸ್‌ಪಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಇಂದು ವಾಹನಗಳ ದಾಖಲಾತಿ ಪರಿಶೀಲನೆ ಕಸರತ್ತು ಪೊಲೀಸರ ದೊಡ್ಡ ಕಾರ್ಯಾಚರಣೆಗೆ ಕಾರಣವಾಗಿದೆ.

ಮಾಮೂಲು ದಾಖಲಾತಿ ಪರಿಶೀಲನೆ ವೇಳೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಹೀಗಾಗಿ ಕಳೆದ ನಾಲ್ಕೈದು ಗಂಟೆಗಳಿಂದ ಪೊಲೀಸರು ಸುತ್ತಮುತ್ತಲಿನ ಹೊಲಗಳಲ್ಲಿ  ತೀವ್ರ ಶೋಧ ನಡೆಸಿದ್ದಾರೆ.

ಖುದ್ದು ಎಸ್‌ಪಿ ಟಿ...ಮುಂದೆ ಓದಿ

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ವಿರುದ್ಧ ಲೋಕಾಯುಕ್ತ, ED, ಸ್ಪೀಕರ್‌, ಹೈಕೋರ್ಟ್‌ಗೆ ದೂರು

ವಿಜಯ ಪರ್ವ ಸುದ್ದಿ | ಕೊಪ್ಪಳ

ಗಂಗಾವತಿ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಹೊಸ ಸಂಕಷ್ಟಗಳು ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ. ಶಾಸಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕೇಳಿಬಂದಿರುವ ಮೊಟ್ಟೆ ಹಗರಣವನ್ನು ತನಿಖೆಗೆ ಒಳಪಡಿಸುವಂತೆ ಇಂದು ಹೊಸ ದೂರುಗಳು ದಾಖಲಾಗಿವೆ.

ಗಂಗಾವತಿಯ ರೈತ ಮುಖಂಡರಾದ ಶರಣಗೌಡ ಪಾಟೀಲ ಕೆಸರಟ್ಟಿ ಮತ್ತು ಶರಣಪ್ಪ ಕೊತ್ವಾಲ್‌ ಅವರು ಈ ಕುರಿತು ವಿಧಾನಸಭೆ ಸ್ಪೀಕರ್‌, ಹೈಕೋರ್ಟ್‌ ರಿಜಿಸ್ಟ್ರಾರ್‌, ಜಾರಿ ನಿರ್ದೇಶನಾಲಯ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಇಂದು ದೂರು ಸಲ್ಲಿಸಿದ್ದಾರೆ...ಮುಂದೆ ಓದಿ

ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ; 12 ಟನ್ ನಿಷೇಧಿತ ಆಫ್ರಿಕನ್ ಕ್ಯಾಟ್ ಫೀಶ್ ವಶ

ವಿಜಯಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಡಿವೈಎಸ್ಪಿ ಗೀತಾ ಬೇನಹಾಳ ನೇತೃತ್ವದಲ್ಲಿ ದಾಳಿ ಮಾಡಿರುವ ಪೊಲೀಸರು 12 ಟನ್ ನಿಷೇಧಿತ ಆಫ್ರಿಕನ್ ಕ್ಯಾಟ್ ಫೀಶ್ ಸಾಗಿಸುತ್ತಿದ್ದ ಲಾರಿ ಶನಿವಾರ ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ತಾಲೂಕು ಬೂದಗುಂಪಾ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಡಿವೈಎಸ್ಪಿ ಗೀತಾ ಅವರ ನೇತೃತ್ವದಲ್ಲಿ ಪೋಲೀಸ್ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಆಂಧ್ರ ಪ್ರದೇಶದ ನೆಲ್ಲೂರುನಿಂದ ಮಹಾರಾಷ್ಟ್ರದ ಚಿಂತಾಮಣಿಗೆ ಮೀನುಗಳನ್ನು ಸಾಗಿಸಲಾಗುತ್ತಿತ್ತು.… ..ಮುಂದೆ ಓದಿ

ಮದ್ಯ ಅಕ್ರಮ ಸಾಗಣೆ; ಅಳವಂಡಿ ಪೊಲೀಸರ ದಾಳಿ – ಮದ್ಯ, ನಗದು ವಶ

ವಿಜಯಪರ್ವ ಸುದ್ದಿ‌ | ಕೊಪ್ಪಳ

ತಾಲೂಕಿನ ಕವಲೂರು ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 22,666 ಮೌಲ್ಯದ ಮದ್ಯ ಹಾಗೂ ರೂ. 1,78,000 ನಗದು ಹಣವನ್ನು ಅಳವಂಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕವಲೂರು ಗ್ರಾಮದಲ್ಲಿ ಒಂದು ಟಾಟಾ ಇಂಡಿಕಾ ಕಾರಿನಲ್ಲಿ ಅಕ್ರಮವಾಗಿ ಮದ್ಯ ಹಾಗೂ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಪಿಎಸ್ಐ ಮಾರ್ತಂಡಪ್ಪ, ಎಚ್.ಸಿ.… ..ಮುಂದೆ ಓದಿ

ಕೊಪ್ಪಳ ಪೊಲೀಸರಿಗೆ ಸಿಕ್ಕಿಬಿದ್ದ ಬೈಕ್ ಕಳ್ಳ

ವಿಜಯ ಪರ್ವ ಸುದ್ದಿ | ಕೊಪ್ಪಳ

ಬೈಕುಗಳನ್ನು ಕಳ್ಳತನ ಮಾಡಿಕೊಂಡು ಶೋಕಿ ಮಾಡುತ್ತಿದ್ದ ಖದೀಮನೊಬ್ಬ ಕೊಪ್ಪಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಗದಗ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಪಿಎಸ್ಐ ಮಹಾಂತಪ್ಪ ಮೇಟಿ ಅವರು ಗದಗ ಕಡೆಯಿಂದ ಬರುತ್ತಿದ್ದ ವಾಹನ ಸವಾರನೊಬ್ಬನಿಗೆ ಬೈಕ್ ನಿಲ್ಲಿಸುವಂತೆ ಕೈಸನ್ನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ವಿಚಲಿತನಾದ ಬೈಕ್ ಸವಾರ ಬೈಕ್ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾನೆ...ಮುಂದೆ ಓದಿ

ಲಂಚ ಆರೋಪಿ ಲಕ್ಷ್ಮೀ ತುಳಸಿ ಕೊಪ್ಪಳದ ನೋಂದಣಾಧಿಕಾರಿ ಕಚೇರಿಗೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ಉಪನೋಂದಣಾಧಿಕಾರಿ ಲಕ್ಷ್ಮೀ ತುಳಸಿ ಅವರನ್ನು ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ.

ಸದರಿ ಲಕ್ಷ್ಮೀ ತುಳಸಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ಬಾಕಿ ಇರುವುದರಿಂದ, ಅವರನ್ನು ನಾನ್-ಎಕ್ಸಿಕ್ಯೂಟಿವ್‌ ಹುದ್ದೆಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಆರೋಪದ ಹಿನ್ನೆಲೆ
ವಕೀಲ ಸಂತೋಷ್​ ಪಾಟೀಲ್‌‌ ಎಂಬುವರು ಮನೆ ಕಟ್ಟುವುದಕ್ಕಾಗಿ ಸಾಲ ಪಡೆಯಲು ಬ್ಯಾಂಕ್​ಗೆ ಹೋಗಿದ್ದರು.
..ಮುಂದೆ ಓದಿ

ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಕರಡು ಸಿದ್ಧ

ವಿಜಯ ಪರ್ವ ಸುದ್ದಿ | ಕೊಪ್ಪಳ

ಎಲ್ಲವೂ ಅಂದುಕೊಂಡ ವೇಗದಲ್ಲಿ ನಡೆದಿದ್ದೇ ಆದಲ್ಲಿ, ಬಹು ನಿರೀಕ್ಷಿತ ಆನ್‌ಲೈನ್‌ ಜೂಜಾಟ ಹಾಗೂ ತತ್ಸಂಬಂಧಿ ಚಟುವಟಿಕೆಗಳಿಗೆ ನಿಷೇಧ ಹೇರಲು ರಾಜ್ಯ ಸರಕಾರ ಮುಂದಾಗಲಿದೆ.

ಆನ್‌ಲೈನ್‌ ಜೂಜು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿಯಮಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದಾವಣಗೆರೆಯ ಡಿ.ಆರ್‌. ಶಾರದಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದರು...ಮುಂದೆ ಓದಿ