2020ರಲ್ಲೇ‌ ಗ್ರಾಪಂ ಚುನಾವಣೆ ನಡೆಸಬೇಕಿದೆ; ಸರ್ಕಾರಕ್ಕೆ ರಾಜ್ಯ ಚುನಾವಣೆ ಆಯೋಗ ಖಡಕ್ ಪತ್ರ

ವಿಜಯಪರ್ವ ‌ಸುದ್ದಿ, ಬೆಂಗಳೂರು
ಎಸ್ಒಪಿ‌ (ಸ್ಟ್ಯಾಂಡರ್ಡ್ ‌ಆಪರೇಟಿಂಗ್‌‌ ಪ್ರೊಸಿಜರ್) ಅಳವಡಿಸಿಕೊಂಡು 2020ರ ಒಳಗಾಗಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ, ರಾಜ್ಯ ‌ಚುನಾವಣೆ ಆಯೋಗ ಖಡಕ್ ಉತ್ತರ ನೀಡಿದೆ.‌

ರಾಜ್ಯದಲ್ಲಿ ‌ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಬೇಕು ಎಂದು ರಾಜ್ಯ ‌ಸರ್ಕಾರ‌‌, ದಿನಾಂಕ: 13-10-2020 ರಂದು ಬರೆದ ಪತ್ರಕ್ಕೆ ಆಯೋಗ‌ ಪ್ರತಿಕ್ರಿಯೆ ನೀಡಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ‌ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣೆ ನಡೆಸುವುದು ಆಯೋಗದ ಸಂವಿಧಾನಿಕ ಕರ್ತವ್ಯವಾಗಿದೆ.… ..ಮುಂದೆ ಓದಿ

ಕೋವಿಡ್19 ಸೋಂಕಿತ ಸಾವು; ಗ್ರಾಮಸ್ಥರು, ಆರೋಗ್ಯ ಸಿಬ್ಬಂದಿ ಅಮಾನವೀಯತೆ

ವಿಜಯಪರ್ವ ಸುದ್ದಿ, ಕನಕಗಿರಿ
ಈವರೆಗೂ ಕೋವಿಡ್19 ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದನ್ನ ಗಮನಿಸಿದ್ದೇವೆ. ಈಗ ಸೋಂಕಿನ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಹಾಗೆಯೇ ಸೋಂಕಿತರ ಶವಗಳ ಅಮಾನವೀಯ ಸಂಸ್ಕಾರ ಪ್ರಕರಣಗಳು ಕಂಡು ಬರುತ್ತಿವೆ.

ಇಂಥದೊಂದು ಪ್ರಕರಣ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಳ್ಳಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟು ಕಳೆದ ಮೂರ್ನಾಲ್ಕು ದಿನಗಳಿಂದ ಹೋಮ್ ಐಸೋಲೇಷನ್‌ನಲ್ಲಿ ಇದ್ದರು.… ..ಮುಂದೆ ಓದಿ

ಕೊಪ್ಪಳದಲ್ಲಿ ಜಿಟಿಜಿಟಿ‌ ಮಳೆ; ಶವ ಸಂಸ್ಕಾರಕ್ಕೂ ಪರದಾಟ!

ವಿಜಯಪರ್ವ ಸುದ್ದಿ, ಕೊಪ್ಪಳ

ಕಳೆದೆರಡು ದಿನದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಕೊಪ್ಪಳ ಗವಿಮಠ ಹಿಂಭಾಗದ ರುದ್ರ ಭೂಮಿಯಲ್ಲಿ‌ ಶವ ಸಂಸ್ಕಾರಕ್ಕೆ ಪರದಾಡುವಂತಾಗಿದೆ.

ಕೊಪ್ಪಳದ ಗೌರಿಅಂಗಳ ಪ್ರದೇಶದ ನಿವಾಸಿಯೊಬ್ಬರು ಕೋವಿಡ್-19‌ನಿಂದ ಮೃತಪಟ್ಟಿದ್ದು, ಕುಟುಂಬಸ್ಥರು ಶವಸಂಸ್ಕಾರಕ್ಕೆ ಶುಕ್ರವಾರ ಪರದಾಡಿದ್ದಾರೆ. ಆರೋಗ್ಯ‌ ಇಲಾಖೆ ಸಿಬ್ಬಂದಿ ಸರ್ಕಾರದ ನಿಯಮ, ಮಾರ್ಗಸೂಚಿ ಅಂತೆ ಶವ ರುದ್ರಭೂಮಿಗೆ ತಂದಿದ್ದಾರೆ. ಮಳೆ ನೀರಿನ ಹರಿವಿಗೆ ಸಮರ್ಪಕ ಮಾರ್ಗವಿದ್ದರೆ ಶವಸಂಸ್ಕಾರಕ್ಕೆ ತೊಂದರೆ ಆಗುತ್ತಿರಲಿಲ್ಲವೇನೋ?… ..ಮುಂದೆ ಓದಿ

ಕೋವಿಡ್19 ಆಸ್ಪತ್ರೆಯಲ್ಲಿ ಕರೋನ ಸೋಂಕಿತ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ

ವಿಜಯಪರ್ವ ಸುದ್ದಿ, ಕೊಪ್ಪಳ
ನಗರದ ಕೋವಿಡ್19 ಆಸ್ಪತ್ರೆಯಲ್ಲಿ ಕರೋನ ಸೋಂಕಿತ ಯುವಕ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಚಿಕ್ಕಬೀಡನಾಳ ಗ್ರಾಮದ ಮಾರುತಿ ಕರಿಗೌಡರ್(26) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.

ಕಳೆದ ಸೆಪ್ಟೆಂಬರ್ 14 ರಂದು ಕೋವಿಡ್19 ಆಸ್ಪತ್ರೆಗೆ ದಾಖಲಾಗಿದ್ದ ಯುವಕ, ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಹಾಕಿಕೊಂಡಿದ್ದಾನೆ. ಈ ಮೊದಲು ಕೊಪ್ಪಳದ ಪುಷ್ಕರ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.… ..ಮುಂದೆ ಓದಿ

ಮನೆಯಲ್ಲೇ ಚಿಕಿತ್ಸೆ ಪಡೆದು, ಕೊಲ್ಲುತ್ತದೆ ಎಂಬ ‌ಕರೋನ ಗೆದ್ದು ಬಂದ ಕಮಲಮ್ಮ!‌

ವಿಜಯಪರ್ವ ‌ಸುದ್ದಿ, ಕೊಪ್ಪಳ
ಹದಿಯರೆಯದ ಅದೆಷ್ಟೋ ‌ಜನರನ್ನ ಹಿಂಡಿ ಹಿಪ್ಪೆ ಮಾಡಿರುವ ಕೋವಿಡ್19(ಕರೋನ), ಕೆಲವರನ್ನು ಬದುಕನ್ನೂ ಕೊನೆ ಮಾಡಿದೆ. ಆದರೆ, ಸದ್ಯಕ್ಕೆ ರಾಜ್ಯದಲ್ಲೇ ಕರೋನ ಹಾಟ್‌ ಸ್ಪಾಟ್ ಎಂಬ ಹಣೆಪಟ್ಟಿ ಹೊತ್ತಿರೋ ಕೊಪ್ಪಳ ಜಿಲ್ಲೆಯಲ್ಲಿ ಬರೋಬ್ಬರಿ 105 ವರ್ಷದ ಅಜ್ಜಿ ಕೋವಿಡ್19ಗೆ ಸೆಡ್ಡು ಹೊಡೆದು ಗೆದ್ದು ಬಂದಿದ್ದಾರೆ. ಇನ್ನು ಈ ಅಜ್ಜಿ ಚಿಕಿತ್ಸೆ ಪಡೆದಿದ್ದು ಮನೆಯಲ್ಲೇ ಎಂಬುದು ಮತ್ತೊಂದು ಆಶಾದಾಯಕ ಬೆಳವಣಿಗೆ.…
..ಮುಂದೆ ಓದಿ

ಕೊರೋನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಗವಿಶ್ರೀಗಳಿಂದ ಚಾಲನೆ

ವಿಜಯಪರ್ವ ಸುದ್ದಿ, ಕೊಪ್ಪಳ

ಕೊಪ್ಪಳ‌ ಜಿಲ್ಲೆಯಲ್ಲಿ‌ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣ ದೃಢಪಡಯವ ಸಂಖ್ಯೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೊರೋನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಶನಿವಾರ ಕೊಪ್ಪಳದಲ್ಲಿ ಚಾಲನೆ ನೀಡಲಾಯಿತು.

ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿ 16ನೇ ವಾರ್ಡ್‌ನಲ್ಲಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹಾಗೂ ಕೊಪ್ಪಳದ ಶ್ರೀಸಂಸ್ಥಾನ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಚಾಲನೆ‌ ನೀಡಿದರು.… ..ಮುಂದೆ ಓದಿ

ಕರೋನ‌ ಸಣ್ಣ ಕಾಯಿಲೆ, ಭಯ ಬೇಡ; ಮಾಜಿ ಸಿಎಂ‌ ಸಿದ್ದರಾಮಯ್ಯ

ವಿಜಯಪರ್ವ ಸುದ್ದಿ, ಬೆಂಗಳೂರು
ಕೋವಿಡ್19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ.‌ ಕರೋನ ದೊಡ್ಡ ಕಾಯಿಲೆ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಅವರ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ‌ ಶನಿವಾರ ಮಾತನಾಡಿದರು.

ಕೋವಿಡ್19 ವಾಸಿಯಾಗದ ಕಾಯಿಲೆ ಏನಲ್ಲ. ಚಿಕಿತ್ಸೆ ನಂತರ ವೈದ್ಯರ ಸಲಹೆಯಂತೆ ನಾನು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಇವತ್ತಿನಿಂದ ಎಂದಿನಂತೆ ಎಲ್ಲ ಚಟುವಟಿಕೆಯಲ್ಲಿ ಭಾಗಿಯಾಗುತ್ತೇನೆ.… ..ಮುಂದೆ ಓದಿ

ಕೋವಿಡ್19 ದೃಢಪಟ್ಟಿದ್ದ ಬಿಜೆಪಿ ಯುವ ಮುಖಂಡ ಹಾಲೇಶ ಕಂದಾರಿ ಸಾವು

ವಿಜಯಪರ್ವ ಸುದ್ದಿ, ಕೊಪ್ಪಳ
ನಗರದ ಬಿಜೆಪಿ ಯುವ ಮುಖಂಡ ಹಾಗೂ ಕೊಪ್ಪಳ ನಗರಸಭೆ ಸದಸ್ಯೆ ದೇವಕ್ಕ ಕಂದಾರಿ ಪುತ್ರ ಹಾಲೇಶ ಕಂದಾರಿ(35) ಗುರುವಾರ ಮೃತಪಟ್ಟಿದ್ದಾರೆ.

ಕಳೆದ 3 ದಿನದಿಂದ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಾಲೇಶರಿಗೆ ಕೋವಿಡ್19 ದೃಢಪಟ್ಟಿತ್ತು. ನಂತರ ಮೃತ ಹಾಲೇಶರನ್ನು ಕೆ.ಎಸ್.ಆಸ್ಪತ್ರೆಯ ಕೋವಿಡ್19 ವಿಶೇಷ ವಾರ್ಡ್ ನಲ್ಲಿ‌ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಹಾಲೇಶ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಗರಡಿಯಲ್ಲಿ ಪಳಗಿದ ಯುವ ನಾಯಕ.… ..ಮುಂದೆ ಓದಿ

ಕೊಪ್ಪಳ ಎಸ್ಪಿ ಜಿ.ಸಂಗೀತರಿಗೆ ಕೋವಿಡ್19 ದೃಢ; ಯುವಕರಿಂದ ಪೂಜೆ, ನಮಾಜ್

ವಿಜಯಪರ್ವ ಸುದ್ದಿ, ಕೊಪ್ಪಳ
ಕೋವಿಡ್-19 ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುವ ಕೊಪ್ಪಳ ಎಸ್ಪಿ ಜಿ.ಸಂಗೀತ ಅವರು ಗುಣಮುಖರಾಗಲಿ ಎಂದು ಹಾರೈಸಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಯುವಕರು ಪೂಜೆ, ನಮಾಜ್ ನೆರವೇರಿಸಿದರು.

ಗಂಗಾವತಿಯಲ್ಲಿ ಅನೇಕ ಮುಸ್ಲಿಂ ಯುವಕರು ಮಸೀದಿಯಲ್ಲಿ ನಮಾಜ್ ನೆರವೇರಿಸಿದರೆ, ಹಿಂದೂ ಯುವಕರು ಚನ್ನಬಸವೇಶ್ವರ ತಾತನವರ ಮಠಕ್ಕೆ ತೆರಳಿ ಎಸ್ಪಿ ಅವರು ಸೋಂಕು ಎದುರಿಸಿ‌ ಮತ್ತೇ ಕರ್ತವ್ಯಕ್ಕೆ ಹಾಜರಾಗಲಿ ಎಂದು ಪೂಜೆ ಸಲ್ಲಿಸಿದರು.… ..ಮುಂದೆ ಓದಿ

ಕೊಪ್ಪಳ ಎಸ್ಪಿ ಜಿ.ಸಂಗೀತಾರಿಗೆ ಕೋವಿಡ್-19 ಸೋಂಕು ದೃಢ

ವಿಜಯಪರ್ವ ಸುದ್ದಿ, ಕೊಪ್ಪಳ
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರಿಗೆ ಕೋವಿಡ್19 ಸೋಂಕು ದೃಢಪಟ್ಟಿದೆ. ಕಳೆದ 3 ದಿನದ ಹಿಂದೆ ಎಸ್ಪಿ ಅವರು ಸ್ಯಾಂಪಲ್ ಪರೀಕ್ಷೆಗೆ ಕೊಟ್ಟಿದ್ದರು. ಗುರುವಾರ ರಾತ್ರಿ ವರದಿ ಬಂದಿದ್ದು, ಕೋವಿಡ್-19 ದೃಢಪಟ್ಟಿದೆ.

ಎಸ್ಪಿ ಅವರು ಇಂದಿನಿಂದ ಹೋಮ್ ಐಸೋಲೇಷನಲ್ಲಿ ಇದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು ಆರೋಗ್ಯದ ಕಾಳಜಿ ವಹಿಸುವಂತೆ, ಸೋಂಕಿನ ಲಕ್ಷಣಗಳು ಕಂಡು ಬಂದರೆ ತಪಾಸಣೆ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.… ..ಮುಂದೆ ಓದಿ

error: Content is protected !!