ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?


ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?

| ಮಾಜಿ ಮಂತ್ರಿ ಶಿವರಾಜ ತಂಗಡಗಿ ಅವರ ಕಾರಟಗಿ ಮನೆ ನಿವೇಶನ ವಿವಾದ ಪ್ರಕರಣ
| ಕೊಪ್ಪಳ ಡಿಸಿ ಕೋರ್ಟ್ ನಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ;ಹೈಕೋರ್ಟ್
| ಸಹೋದರನ ರಕ್ಷಣೆಗೆ ಆಗಿನ ಡಿಸಿ ತುಳಸಿ ಮದ್ದಿನೇನಿ ವರ್ಗಾವಣೆ ಮಾಡಿದ್ದ ಆರೋಪ

ವಿಜಯಪರ್ವ ವಿಶೇಷ, ಕೊಪ್ಪಳ

ಮಾಜಿ ಮಂತ್ರಿ ಶಿವರಾಜ ತಂಗಡಗಿ ಸಹೋದರ ನಾಗರಾಜ ಅವರ ಕಾರಟಗಿ ಮನೆ ಜಾಗದ ವಿವಾದ ಪ್ರಕರಣ ಮತ್ತೇ ಮುನ್ನೆಲೆಗೆ ಬಂದಿದೆ.‌… ..ಮುಂದೆ ಓದಿ

ಕೊಲೆ ಪ್ರಕರಣದ ತನಿಖೆ ವೇಳೆ ದಾರಿ ತಪ್ಪಿದ ಪಿಎಸ್ಐ; ಅಮಾಯಕರಿಗೆ ಹಿಗ್ಗಾ- ಮುಗ್ಗ ಥಳಿತ!

ವಿಜಯಪರ್ವ ಸುದ್ದಿ,‌ ಕೊಪ್ಪಳ
ಜಿಲ್ಲೆಯ ಕಾರಟಗಿ ಪಿಎಸ್ಐ ಅವಿನಾಶ ಕಾಂಬ್ಲೆ ಕೊಲೆ ಆರೋಪಿಗಳ ಪತ್ತೆ ಮಾಡುವ ಭರದಲ್ಲಿ ಅಮಾಯಕರ‌ ಜೀವ ಹಿಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐಯಿಂದ ಥಳಿಸಿಕೊಂಡಿರೋ ಧಾರವಾಡ ಜಿಲ್ಲೆ ಮದಾರಮಡ್ಡಿ ಮೂಲದ ಇಬ್ಬರು ಗ್ಲಾಸ್ ಸ್ಟೀಮ್‌ ಜೋಡಿಸುವ ಕಾರ್ಮಿಕರು ಮಾನವ ಹಕ್ಕು ಆಯೋಗಕ್ಕೆ ದೂರು‌ ನೀಡಿದ್ದಾರೆ.

ಕಳೆದ ಅ.17 ರಂದು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿ, ಮಹಿಳೆ ಕೊಲೆ ಮಾಡಲಾಗಿತ್ತು.‌… ..ಮುಂದೆ ಓದಿ

ಬಯಲಾಯ್ತು ಬಿಜೆಪಿ ಒಳಜಗಳ; ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಅಮರೇಶ ಕರಡಿ ಟಾಂಗ್!

ವಿಜಯಪರ್ವ ‌ಸುದ್ದಿ,‌ ಕೊಪ್ಪಳ
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿ ಟಾಂಗ್ ಕೊಟ್ಟರಾ?

ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಪ್ರಧಾ‌ನಿ ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ ಬಿಜೆಪಿ ಯುವ‌ ಮೋರ್ಚಾದ  ಕೊಪ್ಪಳ ಜಿಲ್ಲಾ ಘಟಕ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಇಂಥಹದ್ದೊಂದು ಚರ್ಚೆ ಹುಟ್ಟುಹಾಕಿದೆ.… ..ಮುಂದೆ ಓದಿ

ಕೃಷಿಯಲ್ಲಿ ಖುಷಿ ಕಂಡ ಮಲ್ಲಮ್ಮನ ಯಶೋಗಾಥೆ; ಮಗ-ಮಗಳ ಸಾವು, ತನಗೆ 6 ಶಸ್ತ್ರ ಚಿಕಿತ್ಸೆಯ ನೋವು

ಕೃಷಿಯಲ್ಲಿ ಖುಷಿ ಕಂಡ ಮಲ್ಲಮ್ಮನ ಯಶೋಗಾಥೆ;
ಮಗ-ಮಗಳ ಸಾವು, ತನಗೆ 6 ಶಸ್ತ್ರ ಚಿಕಿತ್ಸೆಯ ನೋವು

ವಿಜಯಪರ್ವ ಸುದ್ದಿ, ಕೊಪ್ಪಳ
ಒಂದಲ್ಲ…‌ ಎರಡಲ್ಲ ಬರೋಬ್ಬರಿ 6 ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋ ಈ ಮಹಿಳೆ ಪತಿ ಕಳೆದ 18 ವರ್ಷದ‌ ಹಿಂದೆ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ ಜೀವನಕ್ಕೆ ಊರುಗೋಲು ಆಗಬೇಕಿದ್ದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದ್ದೊಬ್ಬ ಮಗಳನ್ನು ಕ್ಯಾನ್ಸರ್ ಎಂಬ ಕಾಯಿಲೆ ಕಿತ್ತುಕೊಂಡಿದೆ.…
..ಮುಂದೆ ಓದಿ

ಕೃಷ್ಣಾ ನದಿ ನಡುಗಡ್ಡೆ ಸಂತ್ರಸ್ತರಿಗೆ ಔಷಧಿ ಕೊಟ್ಟು ಬಂದ ಡ್ರೋಣ್!(ವಿಡಿಯೋ)

ವಿಜಯಪರ್ವ ಸುದ್ದಿ, ರಾಯಚೂರು
ಜಿಲ್ಲೆಯ ಲಿಂಗಸಗೂರು ತಾಲೂಕು ಕರಕಲಗಡ್ಡಿ ಸಮೀಪ ಕೃಷ್ಣಾ ನದಿ‌ ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋಣ್ ಮೂಲಕ ಶುಕ್ರವಾರ ಔಷಧಿ ಪೂರೈಕೆ ಮಾಡಲಾಯಿತು.
ಕಳೆದ ಒಂದು ವಾರದಿಂದ ನಾರಾಯಣಪೂರ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದ್ದು, ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ಕರಕಲಗಡ್ಡಿ ಸಮೀಪದ ನಡುಗಡೆಯಲ್ಲಿ ನಾಲ್ಕು ಜನ ಸಿಲುಕಿಕೊಂಡಿದ್ದಾರೆ.

#ಕೃಷ್ಣಾ_ನದಿ_ನಡುಗಡ್ಡೆ_ಸಂತ್ರಸ್ತರಿಗೆ_ಔಷಧಿ_ಕೊಟ್ಟು_ಬಂದ_ಡ್ರೊಣ್!#ರಾಯಚೂರು_ಜಿಲ್ಲೆ_ಲಿಂಗಸಗೂರು_ತಾಲೂಕು_ಕರಕಲಗಡ್ಡಿ_ಸಮೀಪ_ಕೃಷ್ಣಾ_ನದಿ‌_ನಡುಗಡ್ಡೆಯಲ್ಲಿ_ಸಿಲುಕಿದವರಿಗಾಗಿ_ಡ್ರೋಣ್_ಬಳಕೆ

Posted by Vijayaparva / ವಿಜಯಪರ್ವ on Friday, August 21, 2020

ಜಾನುವಾರು ಹಾಗೂ ಜಮೀನಿಗಾಗಿ ನಡುಗಡ್ಡೆಯಲ್ಲೇ ಉಳಿದವರ ಪೈಕಿ ತಿಪ್ಪಣ್ಣ ಎಂಬುವರಿಗೆ ಔಷಧಿಯ ಅಗತ್ಯವಿತ್ತು.… ..ಮುಂದೆ ಓದಿ

ಮುಳುಗಿಲ್ಲ ಕಂಪ್ಲಿ‌-ಗಂಗಾವತಿ ಸೇತುವೆ; ಲಘು ವಾಹನ ಸಂಚಾರ ಅಬಾಧಿತ!

ವಿಜಯಪರ್ವ ಸುದ್ದಿ,‌ ಗಂಗಾವತಿ
ತುಂಗಭದ್ರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮತ್ತೇ ಮಳೆ ಕಡಿಮೆಯಾಗಿದ್ದು, ನದಿಯ ಹೊರ ಹರಿವಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಕಂಪ್ಲಿಯಿಂದ ಗಂಗಾವತಿಯ ರಸ್ತೆಯಲ್ಲಿ ತುಂಗಭದ್ರ ನದಿಗೆ ನಿರ್ಮಿಸಲಾಗಿರುವ ಸೇತುವೆ ಸಂಪೂರ್ಣ ಮುಳುಗಿಲ್ಲ. ಸೇತುವೆ ಮೇಲೆ‌ ಲಘು ವಾಹನಗಳ ಸಂಚಾರ ಎಂದಿನಂತೆ ಇದೆ.

ಆಗಸ್ಟ್‌ 19ರಂದು ನದಿಗೆ ಸುಮಾರು 1 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿತ್ತು.‌… ..ಮುಂದೆ ಓದಿ

ಟಿಬಿ ಡ್ಯಾಂ ಭರ್ತಿಗೆ ಕ್ಷಣಗಣನೆ; ನದಿ ಪಾತ್ರದ ಜನ‌ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ವಿಜಯಪರ್ವ ಸುದ್ದಿ, ಹೊಸಪೇಟೆ/ ಕೊಪ್ಪಳ

ತುಂಗಭದ್ರಾ ಜಲಾಶಯ‌ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಯಾವುದೇ ‌ಕ್ಷಣದಲ್ಲಿ ಸುಮಾರು 50 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತುಂಗಭದ್ರ ಮಂಡಳಿ ಎಚ್ಚರಿಕೆ ನೀಡಿದೆ. ಕಳೆದ ಕೆಲ ದಿನದ ಹಿಂದೆಯೂ ಬೋರ್ಡ್ ಎಚ್ಚರಿಕೆ ನೀಡಿದ್ದು,‌ ಇದು ಕೊನೆಯ ಸೂಚನೆ ಎಂದು ತಿಳಿಸಿದೆ.… ..ಮುಂದೆ ಓದಿ

ಇಲ್ಲದ ಪತ್ನಿಯ ನೈಜ ರೂಪದ ಪ್ರತಿಮೆ; ಪತಿಯ ಪ್ರೀತಿಗೆ ಅತಿಥಿಗಳಿಗೆ ಶಾಕ್!

ಇಲ್ಲದ ಪತ್ನಿಯ ನೈಜ ರೂಪದ ಪ್ರತಿಮೆ; ಪತಿಯ ಪ್ರೀತಿಗೆ ಅತಿಥಿಗಳಿಗೆ ಶಾಕ್!

ವಿಜಯಪರ್ವ ಸುದ್ದಿ,‌ಕೊಪ್ಪಳ
ಈ ಫೋಟೊದಲ್ಲಿರೋದು ಮಹಿಳೆಯಲ್ಲ, ನೈಜ ರೂಪದ ಪ್ರತಿಮೆ!
ಹೀಗೆ ಹೇಳಿದ್ರೆ ನೀವು ಒಂದೇ ಬಾರಿಗೆ ನಂಬೋದಿಲ್ಲ. ಬದಲಾಗಿ ಈ ಫೋಟೊವನ್ನು ಮತ್ತೊಮ್ಮೆ ದಿಟ್ಟಿಸಿ ನೋಡ್ತಿರಿ. ಆದರೆ, ಕಳೆದ 2017ರ ಜುಲೈನಲ್ಲಿ ಬಾರದ ಲೋಕಕ್ಕೆ ಹೋಗಿದ್ದ‌ ಇವರು ತಮ್ಮ ಪತಿ ನಿರ್ಮಿಸಿ‌ದ ಹೊಸ ಮನೆಯ ಗೃಹ ಪ್ರವೇಶದ ದಿನ ವಾಪಾಸ್ ಬಂದಿದ್ದಾರೆ.‌…
..ಮುಂದೆ ಓದಿ

ತಗ್ಗಿದ ಮಳೆ; ತುಂಗಭದ್ರ ಡ್ಯಾಂಗೆ ಇನ್ನೆರಡು ದಿನ 1‌ಲಕ್ಷ‌ ಕ್ಯೂಸೆಕ್ ಒಳ‌ ಹರಿವು!

ತಗ್ಗಿದ ಮಳೆ; ತುಂಗಭದ್ರ ಡ್ಯಾಂಗೆ ಇನ್ನೆರಡು ದಿನ 1‌ಲಕ್ಷ‌ ಕ್ಯೂಸೆಕ್ ಒಳ‌ ಹರಿವು!

ವಿಜಯಪರ್ವ ಸುದ್ದಿ,‌ ಕೊಪ್ಪಳ
ತುಂಗಭದ್ರಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ಸದ್ಯದ ಮಟ್ಟಿಗೆ ಮಳೆರಾಯ ವಿಶ್ರಾಂತಿ‌ ಪಡೆದಿದ್ದು, ಒಳಹರಿವು‌‌ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗುವ ಲಕ್ಷಣಗಳಿಲ್ಲ.‌ ಆದಾಗ್ಯೂ ಡ್ಯಾಂಗೆ ಇನ್ನೆರಡು ದಿನ 1 ಲಕ್ಷ ಕ್ಯೂಸೆಕ್ ಆಸುಪಾಸಿನಲ್ಲಿ ಒಳಹರಿವು ದಾಖಲಾಗುವ ನಿರೀಕ್ಷೆ ‌ಇದೆ.‌ ನಾಳೆ ಬೆಳಗಿನ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ‌ ಬರೋಬ್ಬರಿ 62 ಟಿಎಂಸಿಗೂ ಹೆಚ್ಚು ನೀರಿನ ಸಂಗ್ರಹ ದಾಖಲಾಗುವುದು ನಿಚ್ಚಳವಾಗಿದೆ.…
..ಮುಂದೆ ಓದಿ

ಟಿಬಿ ಡ್ಯಾಂನಲ್ಲಿ 54 ಟಿಎಂಸಿ ನೀರು;‌ ಸತ್ಯವಾಯ್ತು ವಿಜಯಪರ್ವ‌ ಪತ್ರಿಕೆ ವರದಿ

ಟಿಬಿ ಡ್ಯಾಂನಲ್ಲಿ 54 ಟಿಎಂಸಿ ನೀರು;‌

ಸತ್ಯವಾಯ್ತು ವಿಜಯಪರ್ವ‌ ವರದಿ

ವಿಜಯಪರ್ವ ಸುದ್ದಿ,‌ ಹೊಸಪೇಟೆ/ಕೊಪ್ಪಳ
ರಾಜ್ಯದ 3 ಜಿಲ್ಲೆ ಹಾಗೂ ಆಂಧ್ರ,‌‌ ತೆಲಂಗಾಣ‌ ರಾಜ್ಯದ ರೈತರ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ಭಾರಿ ಒಳ ಹರಿವು ದಾಖಲಾಗುತ್ತಿದ್ದು, ರೈತರು ಫುಲ್ ಖುಷ್ ಆಗಿದ್ದಾರೆ. ಡ್ಯಾಂನಲ್ಲಿ ಸದ್ಯ 54 ಟಿಎಂಸಿ ನೀರು ಸಂಗ್ರಹವಾಗಿದ್ದು, ಟಿಬಿ ಡ್ಯಾಂ ಅರ್ಧ ಭರ್ತಿ ಎಂದು ವಿಜಯಪರ್ವ ದಿನಪತ್ರಿಕೆ ನಿನ್ನೆಯೇ ಮಾಡಿದ್ದ ವರದಿ ಸತ್ಯವಾಗಿದೆ.…
..ಮುಂದೆ ಓದಿ

error: Content is protected !!