ಶಿಕ್ಷಕ ಕಾಸಿಂ ಅಕ್ರಮ ನಿಯೋಜನೆ ರದ್ದು: ʼವಿಜಯ ಪರ್ವʼ ವರದಿಗಳ ಫಲಶೃತಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ಶಿಕ್ಷಕರನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡುವ ದಂಧೆಗೆ ಕಡಿವಾಣ ಹಾಕಿದೆ ಸರಕಾರ.

ಇದರ ಅಂಗವಾಗಿ ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಕೊಪ್ಪಳ ನಗರದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆಯ (ಪ್ರೌಢಶಿಕ್ಷಣ) ಸರಕಾರದ ಆಧೀನ ಕಾರ್ಯದರ್ಶಿಗಳು ಆಗಸ್ಟ್‌ 6 ರಂದು ಹೊರಡಿಸಿರುವ ಆದೇಶದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಶಿಕ್ಷಕರ ವರ್ಗಾವಣೆ ಕುರಿತು ಮಹತ್ವದ ಚರ್ಚೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರೌಢ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗಳ ನಿರ್ದೇಶಕರು ಹಾಗೂ ವರ್ಗಾವಣಾ ಕೋಶದ ನಿಯಂತ್ರಾಣಾಧಿಕಾರಿಗಳ ಜೊತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಹತ್ವದ ಚರ್ಚೆ ನಡೆಸಿದೆ.

ಈ ಸಂಬಂಧ ಸಂಘ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಹಲವಾರು ಮಹತ್ವದ ಅಂಶಗಳ ಚರ್ಚೆ ಕುರಿತು ಪ್ರಸ್ತಾಪಿಸಲಾಗಿದೆ...ಮುಂದೆ ಓದಿ

ಕಾಸಿಂ ಸಂಕನೂರ ನಿಯೋಜನೆ ರದ್ದತಿಗೆ ಚಾಲನೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆ ರದ್ದುಗೊಳಿಸುವ ಕುರಿತು ನಿರ್ದೇಶನ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆಯ ಕಾರ್ಯದರ್ಶಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಕಾಸಿಂ ಸಂಕನೂರ ನಿಯೋಜನೆ ರದ್ದತಿಗೆ ಡಿಡಿಪಿಐ ಪತ್ರ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆ ರದ್ದುಗೊಳಿಸಲು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜೂನ್‌ 16 ರಂದು ಅವರು ಬರೆದಿರುವ ಪತ್ರದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಎಲ್ಲಾ ನಿಯೋಜಿತ ಶಿಕ್ಷಕರ ವಿವರ ಕೇಳಿದ ಆಯುಕ್ತ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾನೂನುಬಾಹಿರ ಕ್ರಮಗಳಿಂದ ಬೇಸತ್ತಿರುವ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಳಿನ್‌ ಅತುಲ್‌ ಅವರು, ಬೋಧಕೇತರ ಕೆಲಸಕ್ಕೆ ನಿಯೋಜಿತರಾದ ಎಲ್ಲಾ ಶಿಕ್ಷಕರ ವಿವರಗಳನ್ನು ಸಲ್ಲಿಸುವಂತೆ ಡಿಡಿಪಿಐ ಅವರಿಗೆ ತಾಕೀತು ಮಾಡಿದ್ದಾರೆ.

ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಅಮಾನತಾದ ನಂತರ, ವಿಚಾರಣೆ ಬಾಕಿ ಇರಿಸಿ ʼಸಿʼ ವಲಯಕ್ಕೆ ವರ್ಗಾಯಿಸಬೇಕಿದ್ದ ಹುಲಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸೈಯದ್‌ ಅಬ್ದುಲ್‌ ರೆಹಮಾನ್‌ ಅವರನ್ನು ಕಾನೂನುಬಾಹಿರವಾಗಿ ʼಎʼ ವಲಯಕ್ಕೆ ಸೇರಿದ ಶಾಲೆಗೆ ವರ್ಗಾಯಿಸಲಾಗಿತ್ತು...ಮುಂದೆ ಓದಿ

ತಪ್ಪು ತಿದ್ದಿಕೊಂಡ ಕೊಪ್ಪಳ ಡಿಡಿಪಿಐ

ವಿಜಯ ಪರ್ವ ಫಲಶೃತಿ | ಕೊಪ್ಪಳ

ಅಮಾನತಾಗಿದ್ದ ಶಿಕ್ಷಕನೊಬ್ಬನನ್ನು ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020 ರ ಅಡಿ ʼಸಿʼವಲಯ ಬಿಟ್ಟು ʼಎʼ ವಲಯಕ್ಕೆ ವರ್ಗಾಯಿಸಿದ್ದ ಕೊಪ್ಪಳ ಡಿಡಿಪಿಐ ತಮ್ಮ ಆದೇಶ ಬದಲಿಸಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಹುಲಗಿಯ ಸರಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಸೈಯದ್‌ ಅಬ್ದುಲ್‌ ರೆಹಮಾನ್‌ ಅವರನ್ನು ಈಗ ʼಎʼ ವಲಯದಿಂದ ʼಸಿʼ ವಲಯಕ್ಕೆ ಮರು ವರ್ಗಾವಣೆ ಮಾಡಿದ್ದಾರೆ...ಮುಂದೆ ಓದಿ

ಶಿಕ್ಷಕರಿಗೆ ಜೀವಭೀತಿ ತಂದ ಮಕ್ಕಳ ಸಮೀಕ್ಷೆ ಕಾರ್ಯ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೋವಿಡ್‌ ಎರಡನೇ ಅಲೆಯಲ್ಲಿ ರಾಜ್ಯದ 268 ಶಿಕ್ಷಕರು ಜೀವ ಕಳೆದುಕೊಂಡಿದ್ದಾರೆ ಎನ್ನುತ್ತದೆ ಟೈಮ್ಸ್‌ ಆಫ್‌ ಇಂಡಿಯಾ ಆಂಗ್ಲಪತ್ರಿಕೆಯ ಮೇ 13 ರ ವರದಿ.

ಈ ಕುರಿತು ನಿಖರ ಅಂಕಿಅಂಶಗಳು ಈಗಲೂ ಲಭ್ಯವಿಲ್ಲ. ಇದರ ಮಧ್ಯೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ. ಪಾಟೀಲ್‌ ನಿರ್ದೇಶನದ ಮೇರೆಗೆ ಹೊರಡಿಸಲಾಗಿರುವ ಆದೇಶವೊಂದು ಜಿಲ್ಲೆಯ ಶಿಕ್ಷಕರ ಜೀವಕ್ಕೆ ಎರವಾಗುವ ಅಪಾಯ ತಂದಿದೆ...ಮುಂದೆ ಓದಿ

ಅಮಾನತಾಗಿದ್ದ ಶಿಕ್ಷಕನಿಗೆ ʼಎʼ ವಲಯಕ್ಕೆ ವರ್ಗಾವಣೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ತಾನು ಕೆಲಸ ನಿರ್ವಹಿಸುತ್ತಿದ್ದ ಶಾಲೆಯಲ್ಲಿಯೇ ಶಿಕ್ಷಕಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ ಸಿಕ್ಕಿಬಿದ್ದು ಅಮಾನತಾಗಿದ್ದ ಶಿಕ್ಷಕನನ್ನು, ಇಲಾಖಾ ವಿಚಾರಣೆ ಕಾಯ್ದಿರಿಸಿ, ನಿಯಮಬಾಹಿರವಾಗಿ ʼಎʼ ವಲಯಕ್ಕೆ ವರ್ಗಾವಣೆ ಮಾಡಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.

ಕಾಮದಾಟ ಆಡಲು ಹೋಗಿ ದಾಖಲೆ ಸಮೇತ ಸಿಕ್ಕಿಬಿದ್ದ ಸೈಯದ್‌ ಅಬ್ದುಲ್‌ ರೆಹಮಾನ್‌ ಹಾಗೆ ವರ ಪಡೆದ ಮುಖ್ಯ ಶಿಕ್ಷಕನಾಗಿದ್ದರೆ, ಇಂತಹ ಕಾನೂನುಬಾಹಿರ ಕೆಲಸಗಳನ್ನು ಮಾಡಲೆಂದೇ ಕೊಪ್ಪಳದ ಡಿಡಿಪಿಐ ಪ್ರಭಾರ ವಹಿಸಿಕೊಂಡಿದ್ದ ಎಂ.ಎಸ್.‌..ಮುಂದೆ ಓದಿ

ದೈಹಿಕ ಶಿಕ್ಷಣ ಪರಿವೀಕ್ಷಕರ ಮುಂಬಡ್ತಿ ಕುರಿತು ಶಿಕ್ಷಣ ಸಚಿವರಿಗೆ ಸಭಾಪತಿ ಪತ್ರ

ವಿಜಯ ಪರ್ವ ಸುದ್ದಿ | ಕೊಪ್ಪಳ

ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ ‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ತತ್ಸಮಾನ ವೃಂದದ ಹುದ್ದೆಗಳಿಗೆ ಬಡ್ತಿ ಕೊಡಲು ಕೇವಲ ಬೆಂಗಳೂರು ಮತ್ತು ಮೈಸೂರು ಪ್ರಾಧಿಕಾರವನ್ನಾಗಿ ಮಾಡಿ ಉಳಿದ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳನ್ನು ಬಿಟ್ಟು ಬಡ್ತಿ ನೀಡುತ್ತಿರುವ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್...ಮುಂದೆ ಓದಿ

ಶಿಕ್ಷಕರ ನಿಯೋಜನೆ ಎಂಬ ಕಾನೂನುಬಾಹಿರ ದಂಧೆ

ದಿನಾಂಕ 8-11-2011 ರಂದು ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಅವರು ರಾಜ್ಯದ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರಿಗೆ ಒಂದು ಸುತ್ತೋಲೆ ಕಳಿಸುತ್ತಾರೆ (ಸಂಖ್ಯೆ: ಇಡಿ  300 ಡಿಜಿಡಿ 2011).

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಸಹ ಶಿಕ್ಷಕರುಗಳನ್ನು ಬೋಧಕೇತರ ಕಾರ್ಯಗಳಿಗಾಗಿ ಬೇರೆ ಬೇರೆ ಕಚೇರಿಗಳಿಗೆ ನಿಯೋಜಿಸುವುದರಿಂದ ಶಾಲಾ ಕಾಲೇಜುಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಲಾರದ ನಷ್ಟವಾಗುತ್ತದೆ...ಮುಂದೆ ಓದಿ