ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು; ಎಚ್.ಕೆ.ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು ಎಂದು ಮಾಜಿ ಮಂತ್ರಿ ಎಚ್.ಕೆ.ಪಾಟೀಲ್ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ‌ ಉತ್ತರಿಸಿ, ಕಾಂಗ್ರೆಸ್ ‌ನಲ್ಲಿ ಚುನಾವಣೆ ನಂತರ ಸಿಎಂ ಯಾರು ಎಂಬ ಪ್ರಶ್ನೆ ಬರುತ್ತೆ.… ..ಮುಂದೆ ಓದಿ

ಕಾರಟಗಿ ದಂಪತಿ ಕೊಲೆ ಪ್ರಕರಣ; ಚಿಲ್ಲರೆ ಹಣಕ್ಕೆ‌ ಸುಪಾರಿ ಕೊಟ್ಟಿದ್ದ ಮೃತಳ ತಮ್ಮ; ಎಸ್ಪಿ ಟಿ.ಶ್ರೀಧರ ಸುದ್ದಿಗೋಷ್ಠಿ

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ಹಲ್ಲೆ‌, ಮಹಿಳೆ ಸ್ಥಳದಲ್ಲೇ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್ಪಿ ಟಿ.ಶ್ರೀಧರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೃತ ಮಹಿಳೆ ತಮ್ಮ ಅವಿನಾಶ ಚಂದನಶಿವ, ಸಂಬಂಧಿ ಯುವರಾಜ ನಿಂಬಾಳ್ಳರ ಬಂಧಿತ ಆರೋಪಿಗಳು.… ..ಮುಂದೆ ಓದಿ

ಜಡಿಮಳೆ ನಡುವೆಯೂ ಪೊಲೀಸ್ ಹುತಾತ್ಮ ದಿನ ಆಚರಣೆ; ಡಿಸಿ ಎಸ್.ವಿಕಾಸ ಕಿಶೋರ‌ ಭಾಗಿ

ವಿಜಯಪರ್ವ ಸುದ್ದಿ, ಕೊಪ್ಪಳ

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನ ಬುಧವಾರ ಆಚರಿಸಲಾಯಿತು.

ಜಿಲ್ಲಾಧಿಕಾರಿ ಎಸ್.ವಿಕಾಸ‌ ಕಿಶೋರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಡಿ ಮಳೆಯ ನಡುವೆಯೂ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಮಳೆಯ ಜೊತೆ ಜೊತೆಯಲ್ಲಿಯೇ ಕವಾಯತು ನಡೆಯಿತು.… ..ಮುಂದೆ ಓದಿ

ಕೊಪ್ಪಳ ಜಿಲ್ಲಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ; ಪ್ರತ್ಯೇಕ‌ ಪ್ರಕರಣ ಬಾಲಕಿ, 2 ಕುರಿ ಸಾವು

ವಿಜಯಪರ್ವ ‌ಸುದ್ದಿ, ಯಲಬುರ್ಗಾ
ರಾಜ್ಯ ‌ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕೊಪ್ಪಳ ಜಿಲ್ಲಾದ್ಯಂತ ಸೋಮವಾರ ತಡರಾತ್ರಿಯಿಂದ ಮಳೆರಾಯನ ಅಬ್ಬರ ಆರಂಭವಾಗಿದೆ. ಇನ್ನು ಮಂಗಳವಾರ (ಅ.20)ವೂ ಗುಡುಗು- ಸಿಡಿಲು ಸಹಿತ ಮಳೆಯಾಗಿದ್ದು, ಒಬ್ಬ ಬಾಲಕಿ ಮೃತಪಟ್ಟಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 2 ಕುರಿ ಸತ್ತಿವೆ.

ಯಲಬುರ್ಗಾ ತಾಲೂಕು ಗೆದಗೇರಿ ತಾಂಡಾದ ರೂಪಾ ಚೌವ್ಹಾಣ(14) ಸಿಡಿಲು ಬಡಿದು ಮೃತಪಟ್ಟಿದ್ದಾಳೆ. 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದಾಗ ಸಿಡಿಲು‌ ಬಡಿದಿದೆ.… ..ಮುಂದೆ ಓದಿ

6 ತಿಂಗಳ ನಾಟಕೀಯ ಬೆಳವಣಿಗೆಗೆ ತೆರೆ; ಕೊಪ್ಪಳ‌ ಜಿಪಂ ಅಧ್ಯಕ್ಷರ ಆಯ್ಕೆ

ವಿಜಯಪರ್ವ ‌ಸುದ್ದಿ, ಕೊಪ್ಪಳ
ಇಲ್ಲಿನ ಜಿಲ್ಲಾ ಪಂಚಾಯತ್ ಅಧ್ಯಕ್ಷ‌‌ ಸ್ಥಾನಕ್ಕೆ ಸಂಬಂಧಿಸಿದಂತೆ ಕಳೆದ 6 ತಿಂಗಳಿನಿಂದ ನಡೆದ ನಾಟಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ. ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ರಾಜಶೇಖರ ‌ಹಿಟ್ನಾಳ 2ನೇ‌ ಬಾರಿಗೆ ಆಯ್ಕೆ ಆಗಿದ್ದಾರೆ.

ಈ ಹಿಂದೆ‌ ಅಧ್ಯಕ್ಷರಾಗಿದ್ದ ವಿಶ್ವನಾಥ ರೆಡ್ಡಿ ವಿರುದ್ಧ ಸ್ವಪಕ್ಷೀಯರೇ ಅವಿಶ್ವಾಸ ಮಂಡಿಸಿದ್ದರಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ರಾಜಶೇಖರ ಹಿಟ್ನಾಳ ಪರ 23 ಸದಸ್ಯರು ಕೈ ಎತ್ತಿದ್ದರಿಂದ ಮತ್ತೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.… ..ಮುಂದೆ ಓದಿ

ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ: ತಂಗಡಗಿ

ವಿಜಯಪರ್ವ ಸುದ್ದಿ, ಕೊಪ್ಪಳ
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಪಕ್ಷದ ಜನಪರ‌ ಕಾಳಜಿ ಏನೆಂಬುದು ದೇಶದ ಜನತೆಗೆ ಗೊತ್ತಿದೆ. ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಜೆಡಿಎಸ್ ಪಕ್ಷ ಮತ್ತೊಬ್ಬರತ್ತ ಬೆರಳು ತೋರಿಸುವಾಗ ಇನ್ನುಳಿದ ಬೆರಳುಗಳು ತಮ್ಮ ಕಡೆಗೇ‌ ಇರುತ್ತವೆ‌ ಎಂಬುದನ್ನು ಮರೆಯಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.… ..ಮುಂದೆ ಓದಿ

ಕೇಂದ್ರ- ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಕೈ ಬಿಡಲಿ: ಶೀಲವಂತರ

ವಿಜಯಪರ್ವ ಸುದ್ದಿ, ಕೊಪ್ಪಳ
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಬದಲಾಗಿ ಕಾರ್ಪೊರೇಟ್ ಕಂಪನಿಗಳ ಇಷ್ಟಾರ್ಥ ಪೂರೈಕೆಗೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೋರಾಟಗಾರ ಬಸವರಾಜ ಶೀಲವಂತರ ದೂರಿದರು.

ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶುಕ್ರವಾರ ಮಾತನಾಡಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ ರೈತರ, ಕಾರ್ಮಿಕರ ಹಿತ ಮರೆತಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.… ..ಮುಂದೆ ಓದಿ

ಕೇಂದ್ರ, ರಾಜ್ಯ ಸರ್ಕಾರಗಳ ರೈತ‌- ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ವಿಜಯಪರ್ವ ಸುದ್ದಿ, ‌ಗಂಗಾವತಿ
ನಗರದ ಗಾಂಧಿ ಪ್ರತಿಮೆ ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ರೈತ ಮತ್ತು ಕಾರ್ಮಿಕ ಪರ ಸಂಘಟನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು. ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಮತ್ತು ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ಕ್ರಮ ಖಂಡಿಸಿ ಒಂದು ದಿನದ ಸಾಂಕೇತಿಕ ಸತ್ಯಾಗ್ರಹ ನಡೆಸಿದರು.…
..ಮುಂದೆ ಓದಿ

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ; ಸ್ಥಳೀಯರಿಂದ ಹಗ್ಗದಿಂದ ರಕ್ಷಣೆ

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆ ಆಗಿದ್ದರೂ ಅವಾಂತರ ಮಾತ್ರ ನಿಂತಿಲ್ಲ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಬೈಕ್ ಓಡಿಸಿ, ಕೊಚ್ಚಿ ಹೋಗುತ್ತಿದ್ದ ಸವಾರರನ್ನು ಸ್ಥಲೀಯರು ರಕ್ಷಿಸಿದ್ದಾರೆ. ಕೊಪ್ಪಳ ತಾಲೂಕು ಶಿವಪುರ ಗ್ರಾಮದ ಹಳ್ಳದಲ್ಲಿ ಘಟನೆ ನಡೆದಿದೆ.

ಶಿವುಪುರ ಮತ್ತು ಹುಲಗಿ ನಡುವೆ ಹರಿಯೋ ಹಳ್ಳ ರಭಸವಾಗಿ ಹರಿಯುತ್ತಿದೆ. ಈ ನೀರಿನಲ್ಲೇ ಬೈಕ್ ಓಡಿಸಿದ್ದು, ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ.… ..ಮುಂದೆ ಓದಿ

ವಿಡಿಯೋ; ತುಂಬಿ ಹರಿವ ಹಳ್ಳದಲ್ಲಿ ಪತ್ನಿ ಹೊತ್ತು ಹಳ್ಳದಾಟಿದ- ಮಗು ಎತ್ತಿಕೊಂಡ ಯುವಕ ನೀರಿಗೆ ಬಿದ್ದ!

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲಾದ್ಯಂತ ನಿನ್ನೆ ರಾತ್ರಿಯಿಂದ ಬೆಳಗಿನವರೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಅವಾಂತರಗಳು ನಡೆದಿರುವ ಬಗ್ಗೆ ವರದಿಯಾಗುತ್ತಿವೆ. ಸತತ ಮಳೆಯಿಂದ ಅಳವಂಡಿ ಮತ್ತು ಕಂಪ್ಲಿ ಮಾರ್ಗ ಸಂಪರ್ಕಿಸುವ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ವ್ಯಕ್ತಿಯೊಬ್ಬ ಪತ್ನಿಯನ್ನು ಎತ್ತಿಕೊಂಡು ಅಳವಂಡಿ- ಕಂಪ್ಲಿ ಮಾರ್ಗದ ಹಳ್ಳ ದಾಟಿದ್ದಾನೆ.

ಇನ್ನು ಈ ದಂಪತಿ ಸಹಾಯ ಮಾಡಲು ಇವರ ಮಗುವನ್ನು ಎತ್ತಿಕೊಂಡು ಹೋಗಿದ್ದ ಸ್ಥಳೀಯ ಯುವಕ ಆಯ ತಪ್ಪಿ ಹಳ್ಳಕ್ಕೆ ಬೀಳುವ ದೃಶ್ಯ ಮೈ ಜುಮ್ ಎನ್ನುವಂತಿದೆ.… ..ಮುಂದೆ ಓದಿ

error: Content is protected !!