ಪ್ರತಿಷ್ಠಿತ ಕಾಲೇಜಿಗೆ ಡಾ. ಅಭಿಲಾಷಾ ಹೇರೂರ ಪ್ರವೇಶ

ವಿಜಯ ಪರ್ವ ಸುದ್ದಿ | ಕೊಪ್ಪಳ

ದಂತ ವೈದ್ಯಕೀಯ ಪದವೀಧರರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಡಾ. ಅಭಿಲಾಷಾ ಅಶೋಕಸ್ವಾಮಿ ಹೇರೂರ, ಬೆಂಗಳೂರಿನ ಪ್ರತಿಷ್ಠಿತ ಎಮ್.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ  ಸ್ನಾತಕೋತ್ತರ ಪದವಿಯ ಸರ್ಜರಿ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ.

ಮುಖದ ಮೇಲಿನ ಮೂಳೆ, ದವಡೆ ಮುರಿತ ಮತ್ತು ಮುಖದ ಮೇಲಿನ ಯಾವುದೇ ವಿಕಲತೆಯನ್ನು ಸರಿಪಡಿಸುವ ವಿಭಾಗ ಇದಾಗಿದ್ದು , ಬ್ಲ್ಯಾಕ್ ಫ಼ಂಗಸ್ ಚಿಕಿತ್ಸೆ ಕೂಡ ಈ ಸರ್ಜರಿ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ...ಮುಂದೆ ಓದಿ

ಯಾವ ಇಲಾಖೆಯ ಹೆಗಲೇರಲಿದೆ ರೆಮಿಡಿಸಿವಿರ್ ಹಗರಣ?

ವಿಜಯ ಪರ್ವ | ಕೊಪ್ಪಳ

ಕೋವಿಡ್‌ ಸೋಂಕು ಹರಡತೊಡಗಿದ್ದೇ ತಡ, ಇದ್ದಕ್ಕಿದ್ದಂತೆ ಔಷಧ ವಲಯದ ಮೇಲೆ ಎಲ್ಲರ ಕಣ್ಣು ಬೀಳತೊಡಗಿದೆ. ಆದರೆ, ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿಯದೇ, ಅದನ್ನು ಸೂಕ್ತವಾಗಿ ಬಳಸಿಕೊಳ್ಳದೇ ಔಷಧ ವಲಯ ಕಕ್ಕಾವಿಕ್ಕಿಯಾಗಿ ನಿಂತುಬಿಟ್ಟಿದೆ. ಅದರ ಅಧಿಕಾರವನ್ನು ನೇರವಾಗಿ ಸಂಬಂಧವೇ ಇರದ ಪೊಲೀಸ್‌, ಆಹಾರ, ತೂಕ ಮತ್ತು ಅಳತೆ ಇಲಾಖೆಗಳು ಚಲಾಯಿಸತೊಡಗಿವೆ. ಔಷಧ ವಲಯಕ್ಕೆ ಇದು ಮಾರಕ ಬೆಳವಣಿಗೆ ಎನ್ನುತ್ತಾರೆ ಫಾರ್ಮಾಸಿಸ್ಟ್‌ ಹಾಗೂ ನ್ಯಾಯವಾದಿಯಾಗಿರುವ ಅಶೋಕಸ್ವಾಮಿ ಹೇರೂರ.

..ಮುಂದೆ ಓದಿ

ಕತ್ತರಿಸಿಟ್ಟ ಈರುಳ್ಳಿ ಅಪಾಯಕಾರಿ…

ವಿಜಯ ಪರ್ವ ಸುದ್ದಿ | ಕೊಪ್ಪಳ

1919 ರಲ್ಲಿ ಫ್ಲೂ ರೋಗವು ನಾಲ್ಕು ಕೋಟಿ ಜನರ ಮರಣಕ್ಕೆ ಕಾರಣವಾಯಿತು.

ಇಂತಹ ಫ್ಲೂ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಏನು ಮಾಡಬಹುದು ಎಂಬ ಕುತೂಹಲದಿಂದ ಕೆಲವು ವೈದ್ಯರು ಸದರಿ ಕಾಯಿಲೆಯಿಂದ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿಯಾದರು.

ಇವರೆಲ್ಲರೂ ಫ್ಲೂ ಕಾಯಿಲೆ ತಗಲದೇ ಇದ್ದವರಾಗಿದ್ದು, ಆರೋಗ್ಯವಂತರಾಗಿದ್ದುದನ್ನು ವೈದ್ಯರು ಗಮನಿಸಿದರು. ಅವರಿಗೆ ಫ್ಲೂ ತಗಲದೇ ಇರುವುದಕ್ಕೆ ಏನು ಮಾಡಿದರೆಂದು ಕೇಳಿದಾಗ ಬಂದ ಉತ್ತರ ಇದು:

ಸಿಪ್ಪೆಯನ್ನು ಸುಲಿಯದೇ ಇದ್ದ ಈರುಳ್ಳಿಯನ್ನು ಇಟ್ಟ ಒಂದೊಂದು ತಟ್ಟೆಯನ್ನು ಮನೆಯ ಎಲ್ಲಾ ಕೋಣೆಗಳಲ್ಲಿ ಇಡಲಾಗಿತ್ತು ಎಂದು ಆ ಮನೆಯ ರೈತನ ಹೆಂಡತಿ ಉತ್ತರಿಸಿದಳು...ಮುಂದೆ ಓದಿ

ಗವಿಮಠ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಸ್ಫೋಟ

ವಿಜಯಪರ್ವ ಸುದ್ದಿ | ಕೊಪ್ಪಳ

ಶುಕ್ರವಾರ ಸಂಜೆ ಇಲ್ಲಿಯ ಗವಿಮಠದ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಆಕಸ್ಮಿಕದಲ್ಲಿ ಡಿ ದರ್ಜೆ ನೌಕರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ನಿರ್ವಹಣೆ ಮಾಡುವಾಗ, ತಾಂತ್ರಿಕ ಅಸಮರ್ಪಕತೆಯಿಂದಾಗಿ ಸಿಲಿಂಡರೊಂದರ ಹಿಡಿಕೆ ಸಡಿಲವಾಗಿ ಸ್ಫೋಟವಾಗಿದೆ. ಈ ಸಂದರ್ಭದಲ್ಲಿ ಅಭಿಷೇಕ್‌ ಎಂಬ ಸಿಬ್ಬಂದಿಯ ಹಣೆಗೆ ಸ್ಪ್ಯಾನರ್‌ ಬಡಿದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ...ಮುಂದೆ ಓದಿ

ಸಾಂಕ್ರಾಮಿಕ ರೋಗಶಾಸ್ತ್ರಜ್ಞನ ನೇಮಕಾತಿ: DHO ಮತ್ತೊಂದು ಅಕ್ರಮ

ವಿಜಯಪರ್ವ ಸುದ್ದಿ | ಕೊಪ್ಪಳ

ಸಂಬಂಧಿತ ವಿದ್ಯಾರ್ಹತೆಯ ಕೊರತೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿರದ ಅಭ್ಯರ್ಥಿಯನ್ನು ಮಹತ್ವದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (ಎಪಿಡೆಮಿಯಾಲಜಿಸ್ಟ್) ಹುದ್ದೆಗೆ ನೇಮಿಸಿಕೊಳ್ಳಲು ಮುಂದಾಗುವ ಮೂಲಕ ಕೊಪ್ಪಳದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್ಒ) ಡಾ. ಲಿಂಗರಾಜು ಟಿ. ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

ಸದರಿ ಹುದ್ದೆಯೂ ಸೇರಿದಂತೆ ಐದು ವಿವಿಧ ಹುದ್ದೆಗಳಿಗಾಗಿ 2021-22 ನೇ ಸಾಲಿಗೆ NHM IDSP ಯೋಜನೆಯಡಿ ಇದೇ ಏಪ್ರಿಲ್ 27 ರಂದು ಅರ್ಜಿ ಆಹ್ವಾನಿಸಲಾಗಿತ್ತು...ಮುಂದೆ ಓದಿ

ತುಡುಗು ಬುದ್ಧಿಯ ದನಕ್ಕೆ ಹುಡುಕಿ ಹುಲ್ಲು ಹಾಕಿದಂತೆ… ನೇಮಕಾತಿ ಅಕ್ರಮದಲ್ಲಿ DHO ಡಾ. ಲಿಂಗರಾಜು ವಿಕ್ರಮ

ವಿಜಯಪರ್ವ ಸುದ್ದಿ | ಕೊಪ್ಪಳ

DHO ಡಾ. ಲಿಂಗರಾಜು ಟಿ. ಅವರ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳನ್ನು ನೋಡುತ್ತಿದ್ದರೆ ಸಾಮಾನ್ಯ ಜನ ಗಾಬರಿಗೊಳ್ಳುತ್ತಾರೆ.

ಎಲ್ಲೆಲ್ಲಿಂದ ದುಡ್ಡು ಹಿರಿಯಬಹುದು ಎಂಬುದನ್ನು ಚೆನ್ನಾಗಿ ಅರಿತಿರುವ ಡಾ. ಲಿಂಗರಾಜು, ಸರಕಾರದ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ನೇಮಕಾತಿಗಳಲ್ಲಿ ಅಕ್ರಮ ಎಸಗುತ್ತಾ ಬಂದಿದ್ದಾರೆ. ಅದರಲ್ಲಿಯೂ ಎನ್‌ಎಚ್‌ಎಂ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಾಲುಸಾಲು ಆಕ್ಷೇಪಗಳು ಸಲ್ಲಿಕೆಯಾಗಿವೆ...ಮುಂದೆ ಓದಿ

ಕರೋನ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯಲ್ಲಿ ಇಲಿಜ್ವರ; 6 ಪ್ರಕರಣ ಪತ್ತೆ

ವಿಜಯಪರ್ವ ಸುದ್ದಿ, ಕೊಪ್ಪಳ
ಕರೋನ ಮಹಾಮಾರಿಯ 2ನೇ ಹಂತದ‌ ಎಫೆಕ್ಟ್ ಆರಂಭದ ಆತಂಕದಲ್ಲೇ ಜಿಲ್ಲೆಗೆ ಇಲಿಜ್ವರ ಕಾಲಿಟ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ  ಒಟ್ಟು 6 ಜನರಲ್ಲಿ ಇಲಿಜ್ವರದ ವೈರಸ್ ದೃಢಪಟ್ಟಿವೆ.

ಕೊಪ್ಪಳ ತಾಲೂಕಿನಲ್ಲಿ ಐದು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಒಂದು ಪ್ರಕರಣ ದೃಢಪಟ್ಟಿವೆ. ಕೊಪ್ಪಳ ತಾಲೂಕಿನ ಹೊಸಳ್ಳಿಯಲ್ಲಿ ಎರಡು, ಹೊಸಲಿಂಗಾಪುರ, ಕೆರೆಹಳ್ಳಿ ಹಾಗೂ ನರೇಗಲ್ ಗ್ರಾಮಗಳಲ್ಲಿ ತಲಾ ಒಂದು ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಒಬ್ಬರಿಗೆ ಇಲಿಜ್ವರ ಪ್ರಕರಣ ಪತ್ತೆಯಾಗಿವೆ.… ..ಮುಂದೆ ಓದಿ

ಮನೆಯಲ್ಲೇ ಚಿಕಿತ್ಸೆ ಪಡೆದು, ಕೊಲ್ಲುತ್ತದೆ ಎಂಬ ‌ಕರೋನ ಗೆದ್ದು ಬಂದ ಕಮಲಮ್ಮ!‌

ವಿಜಯಪರ್ವ ‌ಸುದ್ದಿ, ಕೊಪ್ಪಳ
ಹದಿಯರೆಯದ ಅದೆಷ್ಟೋ ‌ಜನರನ್ನ ಹಿಂಡಿ ಹಿಪ್ಪೆ ಮಾಡಿರುವ ಕೋವಿಡ್19(ಕರೋನ), ಕೆಲವರನ್ನು ಬದುಕನ್ನೂ ಕೊನೆ ಮಾಡಿದೆ. ಆದರೆ, ಸದ್ಯಕ್ಕೆ ರಾಜ್ಯದಲ್ಲೇ ಕರೋನ ಹಾಟ್‌ ಸ್ಪಾಟ್ ಎಂಬ ಹಣೆಪಟ್ಟಿ ಹೊತ್ತಿರೋ ಕೊಪ್ಪಳ ಜಿಲ್ಲೆಯಲ್ಲಿ ಬರೋಬ್ಬರಿ 105 ವರ್ಷದ ಅಜ್ಜಿ ಕೋವಿಡ್19ಗೆ ಸೆಡ್ಡು ಹೊಡೆದು ಗೆದ್ದು ಬಂದಿದ್ದಾರೆ. ಇನ್ನು ಈ ಅಜ್ಜಿ ಚಿಕಿತ್ಸೆ ಪಡೆದಿದ್ದು ಮನೆಯಲ್ಲೇ ಎಂಬುದು ಮತ್ತೊಂದು ಆಶಾದಾಯಕ ಬೆಳವಣಿಗೆ.…
..ಮುಂದೆ ಓದಿ

ಕೊರೋನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಗವಿಶ್ರೀಗಳಿಂದ ಚಾಲನೆ

ವಿಜಯಪರ್ವ ಸುದ್ದಿ, ಕೊಪ್ಪಳ

ಕೊಪ್ಪಳ‌ ಜಿಲ್ಲೆಯಲ್ಲಿ‌ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣ ದೃಢಪಡಯವ ಸಂಖ್ಯೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೊರೋನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಶನಿವಾರ ಕೊಪ್ಪಳದಲ್ಲಿ ಚಾಲನೆ ನೀಡಲಾಯಿತು.

ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿ 16ನೇ ವಾರ್ಡ್‌ನಲ್ಲಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹಾಗೂ ಕೊಪ್ಪಳದ ಶ್ರೀಸಂಸ್ಥಾನ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಚಾಲನೆ‌ ನೀಡಿದರು.… ..ಮುಂದೆ ಓದಿ

ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೈ-ಕ ಜನರಿಗೆ ವರ; ವೈದ್ಯಕೀಯ ಮಂತ್ರಿ ಡಾ.ಸುಧಾಕರ

ವಿಜಯಪರ್ವ ಸುದ್ದಿ, ಬೆಂಗಳೂರು
ಬಳ್ಳಾರಿಯಲ್ಲಿ ಇಂದಿನಿಂದ ಕಾರ್ಯರಂಭ ಮಾಡಲಿರುವ ‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ಹೈದರಾಬಾದ್‌ ಕರ್ನಾಟಕ ಭಾಗದ ಜನರಿಗೆ ಹೆಚ್ಚು ಉಪಯುಕ್ತ ಎಂದು ವೈದ್ಯಕೀಯ ಶಿಕ್ಷಣ ಮಂತ್ರಿ ಡಾ. ಸುಧಾಕರ ಅಭಿಪ್ರಾಯಪಟ್ಟರು.

ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಬಳ್ಳಾರಿಯ ವಿಮ್ಸ್ ನ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ’ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ ಸೋಮವಾರ‌ ಚಾಲನೆ ನೀಡಿದ ನಂತರ ಡಾ.ಸುಧಾಕರ… ..ಮುಂದೆ ಓದಿ