ಮಳೆ ಅಬ್ಬರ; ಹಳ್ಳಕ್ಕೆ ಕೊಚ್ಚಿ ಹೋದ ಟ್ರ್ಯಾಕ್ಟರ್- ಕುಸಿದು ಬಿದ್ದ ಮನೆ ಗೋಡೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ

ಜಿಲ್ಲೆಯಲ್ಲಿ ಎರಡು ದಿನ ಬಿಡುವು ಕೊಟ್ಟಿದ್ದ ಮಳೆ ನಿನ್ನೆ ರಾತ್ರಿ ಮತ್ತೇ ಅಬ್ಬರಿಸಿದ್ದು, ವಿವಿಧ ಕಡೆ ಅವಘಡ ಸಂಭವಿಸಿವೆ.

ಮಳೆ ಆರ್ಭಟಕ್ಕೆ ಜನ ತತ್ತರಿಸಿದ್ದು, ಕೊಪ್ಪಳ ತಾಲೂಕಿನ ಭೈರಾಪುರ ಹಳ್ಳ ತುಂಬಿ ಹರಿಯುತ್ತಿದೆ. ನಿಲೋಗಿಪುರದ ರೈತರೊಬ್ಬರ ಟ್ರ್ಯಾಕ್ಟರ್ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಟ್ರ್ಯಾಕ್ಟರ್‌ನ್ನು ಜೆಸಿಬಿ ಮೂಲಕ ಮೇಲೆತ್ತಲು ರೈತರು ಜೀವದ ಹಂಗು ತೊರೆದು ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಟ್ರ್ಯಾಕ್ಟರ್‌ನ್ನು ಮೇಲೆತ್ತಲಾಗಿದೆ.

ಬೈರಾಪುರ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಕೊಪ್ಪಳ ತಾಲೂಕು ಬೊಚನಹಳ್ಳಿ- ನಿಲೋಗಿಪುರ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ರೈತರು ತಮ್ಮ ಹೊಲಗಳಿಗೆ ತೆರಳಲು ಪರದಾಡುತ್ತಿದ್ದಾರೆ.

 

ಮನೆ ಗೋಡೆ ಕುಸಿದಿರುವುದು

ಮನೆ ಗೋಡೆ ಕುಸಿತ: ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಕುಟುಂಬ ಪ್ರಾಣಾಪಾಯದಿಂದ ಪಾರಾದ‌ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಕಾಪುರದಲ್ಲಿ ನಡೆದಿದೆ. ಶಹಪುರದ ಕಳಕೇಶ್ ಚೌಡ್ಕಿ ಎಂಬುವವರ ಮನೆ ಗೋಡೆ ಕುಸಿದಿದ್ದು, ರಾತ್ರಿ ಗಾಢನಿದ್ರೆಯಲ್ಲಿದ್ದ ಕುಟುಂಬ ಗೋಡೆ ಕುಸಿವ ಸದ್ದು ಕೇಳಿ ಎಚ್ಚೆತ್ತುಕೊಂಡಿದೆ. ಭಾರಿ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಜೀವಹಾನಿಯಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

1+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 92
error: Content is protected !!