ಕೇಂದ್ರ, ರಾಜ್ಯ ಸರ್ಕಾರಗಳ ರೈತ‌- ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ‌ಗಂಗಾವತಿ
ನಗರದ ಗಾಂಧಿ ಪ್ರತಿಮೆ ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ರೈತ ಮತ್ತು ಕಾರ್ಮಿಕ ಪರ ಸಂಘಟನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು. ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಮತ್ತು ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ಕ್ರಮ ಖಂಡಿಸಿ ಒಂದು ದಿನದ ಸಾಂಕೇತಿಕ ಸತ್ಯಾಗ್ರಹ ನಡೆಸಿದರು.

ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೇಸರಹಟ್ಟಿ ಶರಣಗೌಡ ಪ್ರತಿಭಟನೆ ಬೆಂಬಲಿಸಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಎಲ್ಲ ಜನ ವಿರೋಧಿ ನೀತಿಗಳನ್ನು ಸುಗ್ರೀವಾಜ್ಞೆ ಮಾಡುವ ಮೂಲಕ ಜಾರಿ ಮಾಡುತ್ತಿದೆ.‌ ಇದರಿಂದ ಮುಂದಿನ ಪೀಳಿಗೆ ಈ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸುಗ್ರೀವಾಜ್ಞೆ ಸರ್ಕಾರ ಎಂದು ಪಠದಲ್ಲಿ ಓದುವಂತಾಗಬಹುದು ಎಂದು ವ್ಯಂಗ್ಯ ಮಾಡಿದರು.

ಇಂದು ನಾವೆಲ್ಲ ಮಹಾತ್ಮ ಗಾಂಧಿ ಜಯಂತಿ ಆಚರಿಸುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ತಾಖತ್ತಿದ್ದರೆ ದೇಶಾದ್ಯಂತ ಮದ್ಯ ಮಾರಾಟ ಮತ್ತು ತಯಾರಿ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಲಿ. ಈ ಮೂಲಕ ಗಾಂಧೀಜಿ ಅವರ ಕನಸು ನನಸು ಮಾಡಲಿ ಎಂದು ಸವಾಲು ಹಾಕಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡುವ ನೀತಿ ಜಾರಿ ಮಾಡುತ್ತಿವೆ. ಈ ಮೂಲಕ ಬಡ ರೈತರು ಮತ್ತು ಕಾರ್ಮಿಕರನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಮುಖಂಡರಾದ ಜಿ.ನಾಗರಾಜ, ನಿದುಪಾದಿ, ಬಸವರಾಜ ಮಾಲೀಪಾಟೀಲ್, ಮಹಾಂತೇಶ ಚಿನ್ನೂರ, ಶ್ರೀನಿವಾಸ, ಶಿವಣ್ಣ, ಹುಸೇನಪ್ಪ, ದುರುಗಮ್ಮ, ಗಿರಿಜಮ್ಮ, ಕೃಷ್ಣಪ್ಪ, ಭಾರತಿ, ಬಾಳಪ್ಪ ಹುಲಿಹೈದರ, ನಬಿಸಾಬ್ ಸೇರಿ ಇತರರು ಇದ್ದರು.

2+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 200
error: Content is protected !!