ಕೇಂದ್ರ- ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಕೈ ಬಿಡಲಿ: ಶೀಲವಂತರ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಬದಲಾಗಿ ಕಾರ್ಪೊರೇಟ್ ಕಂಪನಿಗಳ ಇಷ್ಟಾರ್ಥ ಪೂರೈಕೆಗೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೋರಾಟಗಾರ ಬಸವರಾಜ ಶೀಲವಂತರ ದೂರಿದರು.

ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶುಕ್ರವಾರ ಮಾತನಾಡಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ ರೈತರ, ಕಾರ್ಮಿಕರ ಹಿತ ಮರೆತಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಪ್ರಭು ಬೆಟದೂರು, ವಿಠ್ಠಪ್ಪ ಗೋರಂಟ್ಲಿ, ಖಾಸೀಂಸಾಬ ಸರ್ದಾರ, ಭೀಮಸೇನ ಕಲಕೇರಿ, ಶರಣು ಗಡ್ಡಿ, ಮಮತಾಜ್ ಬೇಗಂ, ಶಿವಮ್ಮ, ಎ.ಬಿ. ದಿಂಡೂರು, ಸಯ್ಯಾದ ಗುಲಾಮಹುಸೇನ್, ಹುಸೇನಸಾಬ ನದಾಫ್, ಬಸವರಾಜ ಗೋನಾಳ, ಫಕಿರೆಡ್ಡಿ ಹ್ಯಾಟಿ, ಶಿವಪ್ಪ ಹಡಪದ, ಹಾಗೂ ಮಕುಬುಲ್ ರಾಯಚೂರು ಇದ್ದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 22
error: Content is protected !!