ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ: ತಂಗಡಗಿ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಪಕ್ಷದ ಜನಪರ‌ ಕಾಳಜಿ ಏನೆಂಬುದು ದೇಶದ ಜನತೆಗೆ ಗೊತ್ತಿದೆ. ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಜೆಡಿಎಸ್ ಪಕ್ಷ ಮತ್ತೊಬ್ಬರತ್ತ ಬೆರಳು ತೋರಿಸುವಾಗ ಇನ್ನುಳಿದ ಬೆರಳುಗಳು ತಮ್ಮ ಕಡೆಗೇ‌ ಇರುತ್ತವೆ‌ ಎಂಬುದನ್ನು ಮರೆಯಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಆಡಳಿತ‌ ನಡೆಸುತ್ತಿರುವ ಬಿಜೆಪಿ ಸರ್ಕಾರ ಯಾವಾಗ ಇರುತ್ತೋ? ಯಾವಾಗ ಬೀಳುತ್ತೋ? ಎಂದಿರುವ ಆನಂದ್‌ಸಿಂಗ್ ಹೇಳಿಕೆ ವಾಸ್ತವ. ಇದುವರೆಗೂ ವಿರೋಧಪಕ್ಷದ ನಾವು ಮಾತ್ರ ಈ ಮಾತು ಹೇಳುತ್ತಿದ್ದೆವು. ಈಗ ಆಡಳಿತ ಪಕ್ಷದ ಶಾಸಕರು, ಮಂತ್ರಿಗಳು ಸರ್ಕಾರದ ಅಸ್ಥಿರತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ, ಗೊಂದಲದಲ್ಲಿದ್ದಾರೆ ಎಂದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 307