2020ರಲ್ಲೇ‌ ಗ್ರಾಪಂ ಚುನಾವಣೆ ನಡೆಸಬೇಕಿದೆ; ಸರ್ಕಾರಕ್ಕೆ ರಾಜ್ಯ ಚುನಾವಣೆ ಆಯೋಗ ಖಡಕ್ ಪತ್ರ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ‌ಸುದ್ದಿ, ಬೆಂಗಳೂರು
ಎಸ್ಒಪಿ‌ (ಸ್ಟ್ಯಾಂಡರ್ಡ್ ‌ಆಪರೇಟಿಂಗ್‌‌ ಪ್ರೊಸಿಜರ್) ಅಳವಡಿಸಿಕೊಂಡು 2020ರ ಒಳಗಾಗಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ, ರಾಜ್ಯ ‌ಚುನಾವಣೆ ಆಯೋಗ ಖಡಕ್ ಉತ್ತರ ನೀಡಿದೆ.‌

ರಾಜ್ಯದಲ್ಲಿ ‌ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಬೇಕು ಎಂದು ರಾಜ್ಯ ‌ಸರ್ಕಾರ‌‌, ದಿನಾಂಕ: 13-10-2020 ರಂದು ಬರೆದ ಪತ್ರಕ್ಕೆ ಆಯೋಗ‌ ಪ್ರತಿಕ್ರಿಯೆ ನೀಡಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ‌ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣೆ ನಡೆಸುವುದು ಆಯೋಗದ ಸಂವಿಧಾನಿಕ ಕರ್ತವ್ಯವಾಗಿದೆ. ಆದಾಗ್ಯೂ ಕೋವಿಡ್19 ಹಿನ್ನೆಲೆಯಲ್ಲಿ ಈಗಾಗಲೇ ಆಯೋಗ ಗ್ರಾಪಂ ಚುನಾವಣೆ ಮುಂದೂಡಿ ಆದೇಶ ಹೊರಡಿಸಿ,‌‌‌ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.‌ ಆಡಳಿತಾಧಿಕಾರಿಗಳ ನೇಮಕದ ನಂತರ 6 ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕಿದೆ ಎಂದು ತಿಳಿಸಿದೆ.

ಈ ನಡುವೆ ಚುನಾವಣೆ ಆಯೋಗದ ಚುನಾವಣೆ ಮುಂದೂಡಿದ ಕ್ರಮದ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾದ ಹಿನ್ನೆಲೆ, ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ಮುಂದುಡಿಕೆ ಆದೇಶ ಪುನರ್ ಪರಿಶೀಲನೆ ಮಾಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಎಲ್ಲ ‌ಸಿದ್ದತೆ ಮಾಡಿಕೊಂಡಿದೆ ಎಂದು ಪತ್ರದಲ್ಲಿ ರಾಜ್ಯ ಚುನಾವಣೆ ಆಯೋಗ ತಿಳಿಸಿದೆ. ಜೊತೆಗೆ ‌2021ರಲ್ಲಿ ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ತಾಪಂ ಮತ್ತು ಜಿಪಂ ಚುನಾವಣೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆಯನ್ನು 2020ರ ಒಳಗಾಗಿ‌ ನಡೆಸುವುದು ಸೂಕ್ತ ಎಂದು ತನ್ನ ಅಭಿಪ್ರಾಯ ಸ್ಪಷ್ಟಪಡಿಸಿದೆ.

ಅಷ್ಟೆ ಅಲ್ಲದೇ, ಈಗಾಗಲೇ ಕೇಂದ್ರ ಚುನಾವಣೆ ಆಯೋಗ, ರಾಜ್ಯದಲ್ಲಿ 2 ಕ್ಷೇತ್ರದಲ್ಲಿ ಉಪಚುನಾವಣೆ,‌ ವಿಧಾನ ಪರಿಷತ್ ‌ಚುನಾವಣೆ ಮತ್ತು ಬಿಹಾರ್ ನಲ್ಲಿ ಸಾರ್ವಜನಿಕ ಚುನಾವಣೆ ನಡೆಸುತ್ತಿದೆ. ಆದರೆ, ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ಇರುತ್ತವೆ. ಜೊತೆಗೆ ಕ್ಷೇತ್ರಗಳು ಚಿಕ್ಕವು. ಇದರಿಂದ ಯಾವುದೇ ಸಮಸ್ಯೆ ಆಗುವ‌ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗದಂತೆಯೇ ಎಸ್ಒಪಿ ಅಳವಡಿಸಿಕೊಂಡು ಚುನಾವಣೆ ನಡೆಸುತ್ತೇನೆ ಎಂದು ಸ್ಪಷ್ಟವಾಗಿ ತತಿಳಿಸಿದೆ

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 650