ಪವರ್ ಸ್ಟಾರ್ ಪುನೀತ್ ಇನ್ ಅಂಜನಾದ್ರಿ; ಮಾಸ್ಕ್ ಜಾಗೃತಿ, ಅಂಜನಾದ್ರಿ ಬೆಟ್ಟ ಏರಿದ ನಟ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಗಂಗಾವತಿ
ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಸೇರಿ ಸುತ್ತಮುತ್ತಲಿನ ಗ್ರಾಮ ಹಾಗೂ ಹೊಸಪೇಟೆ ಅಕ್ಕ ಪಕ್ಕದ ಸ್ಥಳಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ತೆಲುಗು ನಟ ಶ್ರೀಕಾಂತ ಅಭಿನಯದ ಜೇಮ್ಸ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ.

ಚಿತ್ರೀಕರಣ ಕೆಲಸದ ನಡುವೆಯೇ ಗಂಗಾವತಿ ಪೊಲೀಸ್ ಅಧಿಕಾರಿಗಳ ಮನವಿ ಮೇರೆಗೆ ಪವರ್ ಸ್ಟಾರ್ ಪುನೀತ್ ಅವರು, ಗುರುವಾರ ಬೆಳಗ್ಗೆ ಕರೋನ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳ ಕುರಿತು ತಿಳಿವಳಿಕೆ ನೀಡಿದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಎಂದು ಮನವಿ ಮಾಡಿದರು.

ನಂತರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ರಾಮ ಭಕ್ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟ ಏರಿ ಆಂಜನೇಯನ ದರ್ಶನ ಪಡೆದರು. ಅಲ್ಲಿದ್ದ ವಾನರ ಬಳಗಕ್ಕೆ ಬಾಳೆ ಹಣ್ಣು ಕೊಟ್ಟು ಖುಷಿ ಪಟ್ಟರು.

ತಮ್ಮ‌ ಮೆಚ್ಚಿನ ನಟ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಮಲ್ಲಾಪುರ ಹಾಗೂ ಅಂಜನಾದ್ರಿ ಬೆಟ್ಟದ ಬಳಿ ಜನಸಾಗರವೇ ಸೇರಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 250
error: Content is protected !!