ಉತ್ತರ ಕರ್ನಾಟಕ ನಿರ್ಲಕ್ಷ ಮಾಡಿದ್ದಕ್ಕೆ ಜೆಡಿಎಸ್ ಹೊರತಲ್ಲ: ಮಾಜಿ ಮಂತ್ರಿ ಬಸವರಾಜ ಹೊರಟ್ಟಿ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ರಾಜ್ಯದಲ್ಲಿನ ಪ್ರಮುಖ 3 ಪಕ್ಷದಿಂದಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಇದಕ್ಕೆ ಜೆಡಿಎಸ್ ಹೊರತಲ್ಲ ಎಂದು ಮಾಜಿ ಮಂತ್ರಿ ಬಸವರಾಜ ಹೊರಟ್ಟಿ ಹೇಳಿದರು.

ಕೊಪ್ಪಳಲ್ಲಿ ಸುದ್ದಿಗೋಷ್ಠಿ ನಡೆಸಿ ಗುರುವಾರ ಮಾತನಾಡಿ, ಉತ್ತರ ಕರ್ನಾಟಕ ಭಾಗದವರು ರಾಜ್ಯದ ಸಿಎಂ ಆಗಬೇಕು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಹೇಳಿಕೆ ಪಕ್ಷದ‌ ಆಂತರಿಕ ವಿಷಯ. ಆದ್ರೆ,ಉತ್ತರ ಕರ್ನಾಟಕದವರು ಯಾವುದೇ ಪಕ್ಷದಿಂದ ಸಿಎಂ ಆದ್ರೂ ಸ್ವಾಗತಿಸುತ್ತೇನೆ. ಯತ್ನಾಳ ಅವರೇ ಮುಖ್ಯಮಂತ್ರಿಯಾದರು ಸ್ವಾಗತ ಮಾಡ್ತಿವಿ ಎಂದರು.

ಸದ್ಯ ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ. ಜೆಸಿಬಿ ಸರ್ಕಾರ. ಅಂದ್ರೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್, ಜೆಡಿಎಸ್‌ ಶಾಸಕರು ಹೋಗಿದ್ದಕ್ಕೆ ಸರ್ಕಾರ ರಚನೆಯಾಗಿದೆ. ಎಲೆಕ್ಷನ್ ಬಂದ ತಕ್ಷಣ ಬಿಜೆಪಿಗೆ ಹೋದವರು ತಮ್ಮ ತಮ್ಮ ಪಕ್ಷಕ್ಕೆ ಮರಳುತ್ತಾರೆ ಎಂದರು.

ಯತ್ನಾಳ ಅವರನ್ನು ಕಿತ್ತೊಗೆಯಲು ಹೇಳಿರುವ ಈಶ್ವರಪ್ಪ ಹಿಂದೆ ಮಾಡಿದ್ದೇನು? ಈಗ ಯತ್ನಾಳ ಮಾತಾಡಿದರೆ ಕಿತ್ತೊಗೆಯಬೇಕಾ? ಅವರನ್ನ, ಇವರನ್ನ ಇಬ್ಬರನ್ನೂ ಕಿತ್ತೊಗೆಯಲಿ, ಬಿಜೆಪಿ ಅಧಿಕಾರದಿಂದ ಕೆಳಗಿಳಿಯಲಿ ಎಂದರು. ಜೆಡಿಎಸ್ ಮುಖಂಡರಾದ ವೀರೇಶ ಮಹಾಂತಯ್ಯನಮಠ, ಕೆ.ಎಂ.ಸೈಯ್ಯದ್ ಸೇರಿ ಇತರರು ಇದ್ದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 201
error: Content is protected !!