ಕೊಲೆ ಪ್ರಕರಣದ ತನಿಖೆ ವೇಳೆ ದಾರಿ ತಪ್ಪಿದ ಪಿಎಸ್ಐ; ಅಮಾಯಕರಿಗೆ ಹಿಗ್ಗಾ- ಮುಗ್ಗ ಥಳಿತ!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ,‌ ಕೊಪ್ಪಳ
ಜಿಲ್ಲೆಯ ಕಾರಟಗಿ ಪಿಎಸ್ಐ ಅವಿನಾಶ ಕಾಂಬ್ಲೆ ಕೊಲೆ ಆರೋಪಿಗಳ ಪತ್ತೆ ಮಾಡುವ ಭರದಲ್ಲಿ ಅಮಾಯಕರ‌ ಜೀವ ಹಿಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐಯಿಂದ ಥಳಿಸಿಕೊಂಡಿರೋ ಧಾರವಾಡ ಜಿಲ್ಲೆ ಮದಾರಮಡ್ಡಿ ಮೂಲದ ಇಬ್ಬರು ಗ್ಲಾಸ್ ಸ್ಟೀಮ್‌ ಜೋಡಿಸುವ ಕಾರ್ಮಿಕರು ಮಾನವ ಹಕ್ಕು ಆಯೋಗಕ್ಕೆ ದೂರು‌ ನೀಡಿದ್ದಾರೆ.

ಕಳೆದ ಅ.17 ರಂದು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿ, ಮಹಿಳೆ ಕೊಲೆ ಮಾಡಲಾಗಿತ್ತು.‌ ಕೊಲೆ ‌ಆರೋಪಿಗಳ ಪತ್ತೆಗೆ ಹೋರಟ ಕಾರಟಗಿ ಪಿಎಸ್ಐ ಅವರೇ ದಾರಿ ತಪ್ಪಿದ್ದಾರೆ. ಗಂಗಾವತಿ ಲಾಡ್ಜ್ ನಲ್ಲಿ ವಾಸ್ತವ್ಯ ಮಾಡಿದ್ದ ಇಬ್ಬರು ಕಾರ್ಮಿಕರನ್ನು ಕೊಲೆ ಆರೋಪಿಗಳು ಎಂದು ಶಂಕಿಸಿದ್ದಾರೆ. ಮಧ್ಯರಾತ್ರಿ 1.30ರ‌ ಸುಮಾರಿಗೆ ಕಾರಟಗಿ ಪೊಲೀಸ್ ಠಾಣೆಗೆ‌ ಕರೆತಂದು ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಹಿಗ್ಗಾ- ಮುಗ್ಗ ಥಳಿಸಿದ್ದಾರೆ ಎಂದು ದೂರಲಾಗಿದೆ.

ಕಾರಟಗಿಯಲ್ಲಿ‌ ತಂಗಿದ್ದ ಸ್ಲಿಪ್

ಅಷ್ಟೊತ್ತಿಗೆ ಕನಕಗಿರಿ ಪಿಎಸ್ಐ ಪ್ರಶಾಂತ ನೇತೃತ್ವದ ಮತ್ತೊಂದು ತಂಡ, ನಿಜವಾದ ಆರೋಪಿಗಳ‌ನ್ನು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆ ಮಾಡಿದೆ. ವಾಸ್ತವ ತಿಳಿದು, ಅಮಾಯಕರ ಕ್ಷಮೆ ಕೇಳಬೇಕಿದ್ದ ಪಿಎಸ್ಐ ಅವಿನಾಶ ಕಾಂಬ್ಲೆ ಓವರ್ ಸ್ಮಾರ್ಟ್ ‌ಪೊಲೀಸಿಂಗ್ ಮಾಡಿದ್ದಾರೆ. ‌ಅಮಾಯಕರ‌ ವಿರುದ್ಧ‌ ಕರ್ನಾಟಕ‌ ಪೊಲೀಸ್ ಕಾಯ್ದೆ 96(ಸಿ) ಅಡಿ ಪ್ರಕರಣ‌ ದಾಖಲಿಸಿಕೊಂಡು,‌ ನೋಟೀಸ್ ನೀಡಿದ್ದಾರೆ. ಅಕ್ಟೋಬರ್ 23 ರಂದು ಗಂಗಾವತಿ ‌ಕೋರ್ಟ್ ಗೆ ಹಾಜರಾಗಿ ದಂಡ ಪಾವತಿಸುವಂತೆ ಸೂಚಿಸಿದ್ದಾರಂತೆ.

ಪೊಲೀಸರು ಕೇಸ್ ಹಾಕಿದ್ದು.

ಸಿಡಿಆರ್ ಯಡವಟ್ಟು?:‌ ಅ.17ರ‌ ಸಂಜೆ 7.30ರ‌ ಸುಮಾರಿಗೆ‌ ಕಾರಟಗಿ‌ ಪಟ್ಟಣ ಕ್ರೌರ್ಯದ‌ ಘಟನೆಯೊಂದಕ್ಕೆ ಸಾಕ್ಷಿ ಆಗಿತ್ತು. ಕಾರಟಗಿಯ ಬಸವೇಶ್ವರ ‌ನಗರದಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ಮೂಲದ ನವ ದಂಪತಿ ಮೇಲೆ‌ ಅಪರಿಚಿತರು ‌ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರೆ,‌‌ ಪತಿ ಸ್ಥಿತಿ‌ ತೀರಾ ಚಿಂತನಜನಕ ವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

ಪ್ರಯಾಣ ಚೀಟಿ

ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು, ಎರಡು ತಂಡ‌ ರಚಿಸಿ ತನಿಖೆಗೆ‌ ಸೂಚಿಸಿದ್ದಾರೆ.‌ ಕನಕಗಿರಿ ಪೊಲೀಸ್ ಪಿಎಸ್ಐ ಪ್ರಶಾಂತ‌ ಅವರ ‌ತಂಡ‌ ಮುಧೋಳ ಕಡೆ ಮುಖ ಮಾಡಿದೆ.‌ ಕಾರಟಗಿ ಪಿಎಸ್ಐ ಅವಿನಾಶ ಅವರ ತಂಡ, ಗಂಗಾವತಿ ಕಡೆ ಮುಖ ಮಾಡಿದೆ.
ತನಿಖೆಗೆ ತಾಂತ್ರಿಕ ‌ಸಹಾಯ ಪಡೆದುಕೊಂಡ ಕಾರಟಗಿ ಪಿಎಸ್ಐ ಯಡವಟ್ಟು ಮಾಡಿಕೊಂಡಿದ್ದಾರೆ.‌ ಬೇರೆ ಜಿಲ್ಲೆಯಿಂದ ಕಾರಟಗಿ ‌ಸುತ್ತಮುತ್ತ‌ ಓಡಾಡಿರುವ ಮತ್ತು ಕೆಲ‌ ದಿನ ಕಾರಟಗಿ ಲಾಡ್ಜ್ ನಲ್ಲಿ ವಾಸ್ತವ್ಯ ಮಾಡಿರುವ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ‌ಮಾಡುವ ನೆಪದಲ್ಲಿ ಧಾರವಾಡ ಮೂಲದ‌‌ ಅಮಾಯಕ ಕಾರ್ಮಿಕರಿಗೆ ಚಳಿ ಬಿಡಿಸಿದ್ದಾರೆ.

ಧಾರವಾಡ ಜಿಲ್ಲೆ ಮದಾರಮಡ್ಡಿ ಗ್ರಾಮದ ಸುಹೇಬ ಕರಡಿಗುಡ್ಡ ಮತ್ತು ಮೋಹಮ್ಮದ ಜಮೀಲ ಎಂಬ ಇಬ್ಬರು ಕಾರ್ಮಿಕರು ದಿನಾಂಕ: 14-10-2020 ರಂದು ಕಾರಟಗಿ ಪಟ್ಟಣಕ್ಕೆ ಆಗಮಿಸಿ, ಲಕ್ಷ್ಮೀ ವೆಂಕಟೇಶ್ವರ ಟೂರಿಸ್ಟ್ ಹೋಮ್ ನಲ್ಲಿ ತಂಗಿದ್ದಾರೆ. ಕೊಲೆ ನಡೆದ ಅ.17ರ ಸಂಜೆ 6ಕ್ಕೆ ಲಾಡ್ಜ್ ಖಾಲಿ ಮಾಡಿ, ಕಾರಟಗಿ ಸಮೀಪದ ಸಮೀಪದ ಸಾಲುಂಚಿಮರ ಗ್ರಾಮಕ್ಕೆ ಆಗಮಿಸಿ ಹೊಸ ಮನೆಯ ಬಾತ್ ರೂಮ್ ನಲ್ಲಿ ಗ್ಲಾಸ್ ಸ್ಟೀಮ್‌ ಅಳವಡಿಸಿ ಗಂಗಾವತಿಗೆ ಹೋಗಿದ್ದಾರೆ. ಗಂಗಾವತಿಯಲ್ಲಿಯೂ ಒಬ್ಬರ ಮನೆಯಲ್ಲಿ ಕೆಲಸ ಇದ್ದರಿಂದ ಗಂಗಾವತಿಯ ಲಾಡ್ಜ್ ವೊಂದರಲ್ಲಿ ತಂಗಿದ್ದಾರೆ. ವಾಸ್ತವದಲ್ಲಿ ದಂಪತಿ ಕೊಲೆ ಮಾಡಿದ ಆರೋಪಿಗಳ‌ ‘ಮೋಡ್‌ ಆಫ್ ಆಪರೇಷನ್ ‘ ಪೊಲೀಸರು ಗೆಸ್ ಮಾಡಿದಂತಯೇ ಈ ಇಬ್ಬರು ಕಾರ್ಮಿಕರ ಪ್ರವಾಸ‌ ಚಟುವಟಿಕೆ ಇದೆ.‌

ನೊಂದವರು ಎಸ್ಪಿ, SHRC ಗೆ‌ ಬರೆದ‌ ದೂರು

ಇದರಿಂದ ಹಿಂದೆ ಮುಂದೆ‌ ವಿಚಾರ ಮಾಡದ ಪಿಎಸ್ಐ ಅವಿನಾಶ ಕಾಂಬ್ಲೆ ಬೇರೆ ಜಿಲ್ಲೆಯವರು ಎಂಬುದ್ದೊಂದೆ ಮಾನದಂಡವಾಗಿ ಇಟ್ಟುಕೊಂಡು ಮಧ್ಯರಾತ್ರಿ 1ಕ್ಕೆ ಗಂಗಾವತಿ ಲಾಡ್ಜ್ ‌ಗೆ ನುಗ್ಗಿ ‌ಇಬ್ಬರುನ್ನು ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿ ಪೂರ್ತಿ ಟ್ರೀಟ್ ಮೆಂಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐ ಮಾಡಿದ ಯಡವಟ್ಟಿನ ಬಗ್ಗೆ ನೊಂದವರು ಕೊಪ್ಪಳ ಎಸ್ಪಿ ಅವರಿಗೂ ದೂರು ನೀಡಿದ್ದಾರೆ. ಜೊತೆಗೆ ಮಾನವ‌ ಹಕ್ಕು ಆಯೋಗಕ್ಕೂ ದೂರು ನೀಡಿದ್ದು, ನ್ಯಾಯಾ‌‌ ಸಿಗುತ್ತಾ‌ ಕಾದು ನೋಡಬೇಕು.

ಕಾರಟಗಿ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ಕೆಲ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿದೆ. ‌ಆದರೆ, ಯಾರ ಮೇಲೆ ದೈಹಿಕ ಹಲ್ಲೆ ಮಾಡಿಲ್ಲ.‌ ನನಗೆ ಈವರೆಗೂ ಯಾವುದೇ ದೂರು ತಲುಪಿಲ್ಲ ಈ‌‌ ಬಗ್ಗೆ‌ ತನಿಖೆ ತನಿಖೆ ಮಾಡಲಾಗುವುದು.
| ಟಿ.ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಪ್ಪಳ

ನಾವು ಒಂದು ಕಂಪನಿಯಿಂದ ನೇಮಕಗೊಂಡ ಕಾರ್ಮಿಕರು. ಎಲ್ಲ ದಾಖಲೆ ಇವೆ. ಕಂಪನಿ ಮತ್ತು ಗ್ರಾಹಕರನ್ನು ವಿಚಾರಿಸಿ ಎಂಂದರೂ ಕೇಳಲಿಲ್ಲ.‌ ಕೊಲೆ ಮಾಡಲು‌ ಎಷ್ಟು‌ ಹಣ‌ ಕೊಟ್ಟಿದ್ದಾರೆ? ಎಂಬ ಒಂದೇ ಪ್ರಶ್ನೆ ಕೇಳುತ್ತಲೇ ರಾತ್ರಿ ‌ಇಡೀ ಹೊಡೆದಿದ್ದಾರೆ. ನಮಗೆ ನ್ಯಾಯಾ ‌ಸಿಗಬೇಕು.

| ಸುಹೇಬ್ ಕರಡಿಗುಡ್ಡ, ದೂರುದಾರ
0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 312
error: Content is protected !!