ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು; ಎಚ್.ಕೆ.ಪಾಟೀಲ್

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು ಎಂದು ಮಾಜಿ ಮಂತ್ರಿ ಎಚ್.ಕೆ.ಪಾಟೀಲ್ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ‌ ಉತ್ತರಿಸಿ, ಕಾಂಗ್ರೆಸ್ ‌ನಲ್ಲಿ ಚುನಾವಣೆ ನಂತರ ಸಿಎಂ ಯಾರು ಎಂಬ ಪ್ರಶ್ನೆ ಬರುತ್ತೆ. ಸದ್ಯ ಈ ಪ್ರಶ್ನೆ ‌ಅಪ್ರಸ್ತುತ ಎಂದರು. ಆಗ ಸಿದ್ದರಾಮಯ್ಯ ಅವರು ‘ನಾನು ಸಿಎಂ ಆದ್ರೆ ತಲಾ 10 ಕೆಜಿ ಅಕ್ಕಿ ಉಚಿತ ‌ನೀಡುತ್ತೇನೆಂದು’ ಹೇಳಿದ್ದಾರೆ ಎಂದು ಮರು ಪ್ರಶ್ನಿಸಿದಾಗ‌ ‘ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಂದ್ರೆ ನಾನು’ ಅಂತಾ ತಿಳಿದುಕೊಂಡಿರಬಹುದು‌ ಎಂದು ಮಾರ್ಮಿಕವಾಗಿ ನುಡಿದರು.‌

ಈ ಮೂಲಕ ಮಾಜಿ ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಎಂದು ಬಿಂಬಿಸುವಲ್ಲಿ ಎಚ್.ಕೆ.ಪಾಟೀಲ್‌ರ‌ ವಿರೋಧ‌ ಇದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.
ಉತ್ತರ ಕರ್ನಾಟಕ ಭಾಗದವರು ಸಿಎಂ ಆಗಬೇಕು ಎಂಬ ಮಾತು ಕೇವಲ ಹರಟೆ ಮಾತಾಗಬಾರದು. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರ ಹೇಳಿಕೆ ಅವರ ಪಕ್ಷದ ‌ಆಂತರಿಕ‌ ವಿಚಾರ ಎಂದರು.

ನವೆಂಬರ್ ನಲ್ಲಿ ಶಾಲೆ, ಕಾಲೇಜು ಆರಂಭಿಸುವ ಸರ್ಕಾರದ‌ ಚಿಂತನೆ ವಿಚಾರವಾಗಿ ಮಾತನಾಡಿ, ಸರ್ಕಾರ ಈ ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು. ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಬೇಕು. ತರಾತುರಿಯಲ್ಲೇ ಶಾಲೆ-ಕಾಲೇಜು ಆರಂಭ ಮಾಡಬಾರದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆಯಿಂದ ಕೆಲಸ ಮಾಡಬೇಕು.‌‌ ಕೋವಿಡ್19ಗೆ ಉಚಿತ ಲಸಿಕೆ ಕೊಡ್ತಿವಿ ಅಂತಾ ಬಿಜೆಪಿ ತನ್ನ ಬಿಹಾರ‌ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದು ನಾಚಿಕೆಗೇಡು. ಲಸಿಕೆ ಕೊಡಲು ಸರ್ಕಾರಕ್ಕೆ ತಾಖತ್ತು ಇಲ್ಲವಾ? ಎಂದು ಪ್ರಶ್ನಿಸಿದರು.‌

ಜನರಿಗೆ ಕೋವಿಡ್19 ಲಸಿಕೆ ಉಚಿತ ನೀಡುವುದು ಸರ್ಕಾರದ ‌ಕೆಲಸ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ‌ ಹಿಟ್ನಾಳ, ಜಿಪಂ ಉಪಾಧ್ಯಕ್ಷೆ ಬೀನಾ ಗೌಸ್, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್ಲ ಇದ್ದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 761
error: Content is protected !!