ಹಿರಿಯ ಪೊಲೀಸ್ ಅಧಿಕಾರಿಯಿಂದ ಅಕ್ರಮಕ್ಕೆ‌ ಒತ್ತು ಆರೋಪ; ಹಂಪಿ ‌ಡಿವೈಎಸ್ಪಿ ರಾಜೀನಾಮೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ‌ಹೊಸಪೇಟೆ
ಬಳ್ಳಾರಿ ಜಿಲ್ಲೆ ವಿಶ್ವ‌‌ ವಿಖ್ಯಾತ ಹಂಪಿ ಡಿವೈಎಸ್ಪಿ ಎಸ್.ಎಸ್.ಕಾಶಿಗೌಡ ರಾಜೀನಾಮೆ ನೀಡಿದ್ದು, ವಲಯ ಮಟ್ಟದ‌ ಹಿರಿಯ ಅಧಿಕಾರಿಗಳ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದ್ದು,‌‌‌ ಚರ್ಚೆಗೆ‌ ಗ್ರಾಸವಾಗಿದೆ.

ಬೆನ್ನಲ್ಲೆ ರಾಜೀನಾಮೆ ನೀಡಿರುವ ಡಿವೈಎಸ್ಪಿ ಅವರು ಖಾಸಗಿ ಸುದ್ದಿ ವಾಹಿನಿಯ ವರದಿಗಾರರೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಡಿವೈಎಸ್ಪಿ ಅವರು ಬಾಯಿ ಬಿಟ್ಟಿರುವ ಕೆಲ ಅಂಶಗಳು ಇಡೀ ಪೊಲೀಸ್ ವ್ಯವಸ್ಥೆ ತಲೆ ತಗ್ಗಿಸುವಂತಿವೆ.
ಈ ಆಡಿಯೋದಲ್ಲಿ ಡಿವೈಎಸ್ಪಿ ಎಸ್.ಎಸ್. ಕಾಶಿಗೌಡ ಅವರು ಬಳ್ಳಾರಿ ಐಜಿಪಿ ಡಾ.ನಜುಂಡಸ್ವಾಮಿ ಅವರ ವಿರುದ್ದ ಹಣ ವಸೂಲಿ ಮಾಡುತ್ತಪಿಎಸ್ಐ‌‌ಗಳು ನೇರವಾಗಿ ಐಜಿಪಿ ಜೊತೆ ಶಾಮಿಲಾಗಿದ್ದಾರೆ. ಐಜಿ ಅವರ ಏಜೆಂಟ್ ಗಳು ಬಂದು ಪಿಎಸ್ಐಗಳ ಬಳಿ ಕಮೀಷನ್ ಕಲೆಕ್ಟ್ ಮಾಡಿಕೊಂಡು ಹೊಗ್ತಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.‌

ಒಂದು ಕಡೆ ನಮ್ಮ‌ ಕೆಳ ಹಂತದ ಅಧಿಕಾರಿಗಳೇ ನಮ್ಮ ಆದೇಶ ಪಾಲಿಸದೇ‌ ದಾಷ್ಠ್ಯ‌ ಮೆರೆಯುವ ಸ್ಥಿತಿ ಇದೆ.‌ಮತ್ತೊಂದು ಕಡೆ ನಮ್ಮ ಮೇಲಿನವರು ಅಕ್ರಮ ‌ತಡೆಯುವಂತೆ ಆದೇಶ ಮಾಡುತ್ತಾರೆ. ಒಂದೊಮ್ಮೆ ಮಾಡದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಹೇಳುತ್ತಾರೆ.‌ ಇದರಿಂದ ಇಂಥ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದುಕೊಂಡು ನಾನು ರಾಜೀನಾಮೆ ನೀಡಿದ್ದೇನೆ ಎಂದು ಡಿವೈಎಸ್ಪಿ ‌ಕಾಶಿಗೌಡ ಅವರು ಅಳಲು ತೋಡಿಕೊಂಡಿದ್ದಾರೆ.

ಇನ್ನು ಐಜಿಪಿ ಅವರು ಪ್ರೊಬೇಷನರಿ ಪಿಎಸ್ಐಗಳನ್ನೇ ಒಒಡಿ ಮೇಲೆ ವರ್ಗಾವಣೆ ಮಾಡುತ್ತಾರೆ.‌ ತಪ್ಪು ಮಾಡಿದ ಅಧಿಕಾರಿಗಳ ಬಗ್ಗೆ ‌ರಿಪೋರ್ಟ್ ಹಾಕಿದರೂ ಕ್ರಮ ಕೈಗೊಳ್ಳುವುದಿಲ್ಲ. ಹೀಗಿದ್ದಾಗ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ನೊಂದು ಹೇಳಿದ್ದಾರೆ. ‌ಅಷ್ಟೇ‌ ಅಲ್ಲದೇ ಮಹಿಳಾ ಪಿಎಸ್ಐ ಒಬ್ಬರು ಸ್ವಯಃ ನಿವೃತ್ತಿ ತೆಗೆದುಕೊಂಡಿದ್ದು, ಅದಕ್ಕೆ ಕಾರಣ ಕೇಳುವಂತಿಲ್ಲ ಎನ್ನುವ ಮೂಲಕ ಸತ್ಯ‌ ಮುಚ್ಚಿಡುವ ಯತ್ನ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಬಳ್ಳಾರಿ ‌ಎಸ್ಪಿ ಸೈದುಲು ಅಡಾವತ್ ಅವರು ಮಾತ್ರ ನನಗೆ ಯಾವುದೇ ರಾಜೀನಾಮೆ ಪತ್ರ ತಲುಪಿಲ್ಲ. ಯಾರಾದರೂ ಪೊಲೀಸ್ ಇಲಾಖೆ ಘನತೆಗೆ ಧಕ್ಕೆ ತರುವ ರೀತಿ ವರ್ತನೆ ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

 

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 654
error: Content is protected !!