ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?

ಈ ಸುದ್ದಿ ಹಂಚಿಕೊಳ್ಳಿ:

ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?

| ಮಾಜಿ ಮಂತ್ರಿ ಶಿವರಾಜ ತಂಗಡಗಿ ಅವರ ಕಾರಟಗಿ ಮನೆ ನಿವೇಶನ ವಿವಾದ ಪ್ರಕರಣ
| ಕೊಪ್ಪಳ ಡಿಸಿ ಕೋರ್ಟ್ ನಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ;ಹೈಕೋರ್ಟ್
| ಸಹೋದರನ ರಕ್ಷಣೆಗೆ ಆಗಿನ ಡಿಸಿ ತುಳಸಿ ಮದ್ದಿನೇನಿ ವರ್ಗಾವಣೆ ಮಾಡಿದ್ದ ಆರೋಪ

ವಿಜಯಪರ್ವ ವಿಶೇಷ, ಕೊಪ್ಪಳ

ಮಾಜಿ ಮಂತ್ರಿ ಶಿವರಾಜ ತಂಗಡಗಿ ಸಹೋದರ ನಾಗರಾಜ ಅವರ ಕಾರಟಗಿ ಮನೆ ಜಾಗದ ವಿವಾದ ಪ್ರಕರಣ ಮತ್ತೇ ಮುನ್ನೆಲೆಗೆ ಬಂದಿದೆ.‌ ಸರ್ವೇ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ(ನ.11) ರಂದು ಮನೆ ಮತ್ತು ಪಕ್ಕದ ಜಾಗ ಅಳತೆಗೆ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪೊಲೀಸ್ ಭದ್ರತೆಯಲ್ಲಿ ಸರ್ವೇ ಕಾರ್ಯ ನಡೆದಿದ್ದು, ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರು ತಮ್ಮದೇ ದಾಟಿಯಲ್ಲಿ ಚರ್ಚೆ ಆರಂಭಿಸಿದ್ದಾರೆ. ಆದರೆ, ವಾಸ್ತವದಲ್ಲಿ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸರ್ವೆ ಇಲಾಖೆ ಅಳತೆ ಮಾಡಿದೆ.

ಕಾರಟಗಿ ಪಟ್ಟಣದ ಸರ್ವೆ ನಂ.322/1/2ರಲ್ಲಿನ 36 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂ ವಿವಾದ ಪ್ರಕರಣವನ್ನು ಹೈಕೋರ್ಟ್ ನಿರ್ದೇಶನದಂತೆ ವಿಚಾರಣೆ ಮಾಡಲಾಗುತ್ತಿದೆ. ಈಗಾಗಲೇ ಒಂದು ವಿಚಾರಣೆ ನಡೆದಿದೆ. ನಾಗರಾಜ ತಂಗಡಗಿ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೇಳಿದ್ದು, ನೀಡಲಾಗಿದೆ. ಈ ಸರ್ವೆ ನಂಬರ್ ಗೆ ಸಂಬಂಧಿಸಿದಂತೆ ಡಿಡಿಎಲ್‌ ಆರ್ ಅವರಿಂದಲೂ‌ ಮಾಹಿತಿ ಹೇಳಿದ್ದೇವೆ.
| ಎಸ್.ವಿಕಾಸ ಕಿಶೋರ, ಜಿಲ್ಲಾಧಿಕಾರಿ, ಕೊಪ್ಪಳ

ಕೊಪ್ಪಳ ಜಿಲ್ಲಾಧಿಕಾರಿ ಕಳೆದ 2013ರಲ್ಲಿ ಮಾಡಿದ್ದ ಆದೇಶದ ವಿರುದ್ಧ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ತಂಗಡಗಿ ಕುಟುಂಬಕ್ಕೆ ಈ ಎಲ್ಲ ಬೆಳವಣಿಗೆ ಒಂದಷ್ಟು ಹಿನ್ನಡೆ ಎಂದೇ ಹೇಳಬಹುದು. ಜಿಲ್ಲಾಧಿಕಾರಿಗಳ ಕೋರ್ಟ್ ನಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

ವಿವಾದಿದ‌ ಜಾಗದಲ್ಲಿನ ಮನೆ

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ವಿಕಾಶ ಕಿಶೋರ ಅವರು ವಿಚಾರಣೆ ಆರಂಭಿಸಿದ್ದು, ಭೂ‌‌ ದಾಖಲೆಗಳ ಉಪ ನಿರ್ದೇಶಕರು(ಡಿಡಿಎಲ್ಆರ್) ಮತ್ತು ಕಾರಟಗಿ ತಹಸೀಲ್ದಾರ್ ಅವರಿಂದ ಪ್ರಕರಣದ ಹಿನ್ನೆಲೆ ಮತ್ತು ದಾಖಲೆ ಬಗ್ಗೆ ಮಾಹಿತಿ ಕೇಳಿದ್ದರಿಂದ ಬುಧವಾರ ಸರ್ವೇ ಕೆಲಸ ನಡೆದಿದೆ.

ಕಾರಟಗಿ ಪಟ್ಟಣದ ಸರ್ವೆ ನಂ.322/1/2ರಲ್ಲಿನ 36 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂ ವಿವಾದ ಪ್ರಕರಣ ಡಿಸಿ ಸರ್ ಕಚೇರಿಯಲ್ಲಿ ವಿಚಾರಣೆ ಹಂತದಲ್ಲಿದೆ.‌ ಪ್ರಕರಣಕ್ಕೆ ಸಂಬಂಧಿಸಿದಂದೆ ಡಿಸಿ ಅವರು ನಮಗೆ ತಾಂತ್ರಿಕ ವರದಿ ಕೇಳಿದ್ದಾರೆ. ಪಹಣಿ, ಆಕಾರ ಬಂದಿ ಮತ್ತು ಕಬ್ಜಾ ಬಗ್ಗೆ ಮಾಹಿತಿ‌ ಕೇಳಿದ್ದಾರೆ. ಸ್ಥಳ ಪರಿಶೀಲನೆ ಮಾಡಿ, ವರದಿ ನೀಡಲಾಗುವುದು.
| ಭಾವನ ಬಸವರಾಜ, ಡಿಡಿಎಲ್ಆರ್, ಕೊಪ್ಪಳ

ಏನಿದು ಪ್ರಖರಣ?: ಕೊಪ್ಪಳ ಜಿಲ್ಲೆ ಕಾರಟಗಿ ವ್ಯಾಪ್ತಿಯ ಸರ್ವೆ ನಂಬರ್ 322/1/2ರಲ್ಲಿನ 36 ಗುಂಟೆ ಜಮೀನಿನಲ್ಲಿ ಶಿವರಾಜ ತಂಗಡಗಿ ಕುಟುಂಬ ಮನೆ ನಿರ್ಮಿಸಿದೆ. ಶಿವರಾಜ ತಂಗಡಗಿ ಸಹೋದರ ನಾಗರಾಜ ತಂಗಡಗಿ ಹೆಸರಿನಲ್ಲಿರುವ ಈ ಭೂಮಿ ನಮ್ಮದು ಎಂದು ಗುತ್ತಿಗೆದಾರ ಹಾಗೂ ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿರೋ ರಾಮ್ ಮೋಹನ್ ಜಿಲ್ಲಾಧಿಕಾರಿ ಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕಣಕ್ಕೆ ಸಂಬಂಧಿಸಿದಂತೆ ಆಗಿನ ಡಿಸಿ ತುಳಸಿ ಮದ್ದಿನೇನಿ ವಿಚಾರಣೆ ನಡೆಸಿದ್ದರು. ಆದೇಶ ಹೊರಡಿಸುವ ಒಂದು ದಿನದ ಮೊದಲು ಡಿಸಿ ಏಕಾಏಕಿ ವರ್ಗಾವಣೆ ಆಗಿದ್ದರು. ಆದಾಗ್ಯೂ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ತಂಗಡಗಿ ಮನೆ ನಿರ್ಮಿಸಿರುವ ಜಾಗ ಅವರಿಗೆ ಸೇರಿದ್ದಲ್ಲ ಎಂದು ಆದೇಶಿಸಿದ್ದರು.

ನಮ್ಮ ಕುಟುಂಬದ ಮನೆ ಜಾಗದ ಭೂ ವಿವಾದ ಪ್ರಕರಣ ಡಿಸಿ ಕೋರ್ಟ್ ನಲ್ಲೇ‌ ಇತ್ಯರ್ಥ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿ ಈಗಾಗಲೇ 6 ತಿಂಗಳಾಗಿದೆ. ನ್ಯಾಯಾಲಯದ ಆದೇಶದಿಂದ ನಮಗೇನು ಹಿನ್ನಡೆ ಆಗಿಲ್ಲ. ವಿಚಾರಣೆ ನಡೆಯುತ್ತಿದೆ. ಎಲ್ಲ ದಾಖಲೆಗಳು ನಮ್ಮ ಪರ ಇವೆ. ವಾಸ್ತವದಲ್ಲಿ ನಿವೇಶನ ಎನ್ ಎ ಆಗಿದ್ದು, ಜಿಲ್ಲಾಧಿಕಾರಿಗಳು ವಿಚಾರಣೆ ಮಾಡಲು ಒಂದಷ್ಟು ತಾಂತ್ರಿಕ ಸಮಸ್ಯೆ ಇದೆ. ವಾದ-ವಿವಾದ ನಡೆಯಲಿ. ನಮಗೆ ನ್ಯಾಯ‌ ಸಿಗುತ್ತದೆ ಎಂಬ ಭರವಸೆ ಇದೆ.
| ಶಿವರಾಜ ತಂಗಡಗಿ, ‌ಮಾಜಿ ಮಂತ್ರಿ

ಸಿದ್ದರಾಮಯ್ಯ ‌ನೇತೃತ್ವದ ಕಾಂಗ್ರೆಸ್ ಸರ್ಕಾರದ ಕ್ಯಾಬಿಬೆಟ್ ನಲ್ಲಿ ಶಿವರಾಜ ತಂಗಡಗಿ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ತಂಗಡಗಿ, ತಮ್ಮ ಅಣತಿಯಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಡಿಸಿ ತುಳಸಿ ಮದ್ದಿನೇನಿ ಅವರನ್ನು ಏಕಾಏಕಿ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಶಿವರಾಜ ತಂಗಡಗಿ ಅವರ ಈ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸ್ವತಃ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ವರದಿ ಕೇಳಿತ್ತು.

ಇನ್ನು ಇಲ್ಲಿಂದ ವರ್ಗಾವಣೆ ಆಗಿದ್ದ ಡಿಸಿ ತುಳಸಿ ಮದ್ದಿನೇನಿಗೆ ಆರಂಭದಲ್ಲಿ ಸರ್ಕಾರ ಸ್ಥಳ ತೋರಿಸಿರಲಿಲ್ಲ. ಕೆಲ ದಿನದ ನಂತರ ಡಿಸಿ‌ ಆಗಿದ್ದವರನ್ನು ಜಿಲ್ಲಾ ಪಂಚಾಯತ್ ಸಿಇಒ ಮಾಡಿ ಸ್ಥಳ ನಿಯೋಜಿಸಿ, ಒಂದು ರೀತಿ ಡಿಮೋಷನ್ ಮಾಡಿದ್ದು ಸದ್ಯ ಇತಿಹಾಸ. ನಂತರ ಶಿವರಾಜ ತಂಗಡಗಿ‌ ಸಹೋದರ ನಾಗರಾಜ ತಂಗಡಗಿ ಜಿಲ್ಲಾಧಿಕಾರಿ‌ ಆದೇಶ ಪ್ರಶ್ನಿಸಿ‌‌ ಕೋರ್ಟ್‌ಗೆ ‌ಹೋಗಿದ್ದರು. ಬರೋಬ್ಬರಿ 7 ವರ್ಷ‌ ವಿಚಾರಣೆ ನಡೆಸಿದ ನಂತರ‌ ನ್ಯಾಯಾಲಯ,‌‌ ಜಿಲ್ಲಾಧಿಕಾರಿ ಕೋರ್ಟ್ ನಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವಂತೆ ಆದೇಶಿಸಿದೆ.

1+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 1095
error: Content is protected !!