ಬಳ್ಳಾರಿ ವಲಯ ವ್ಯಾಪ್ತಿಯ ಪಿಎಸ್ಐಗಳ ವರ್ಗಾವಣೆ!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ಬಳ್ಳಾರಿ ಪೊಲೀಸ್ ವಲಯ ವ್ಯಾಪ್ತಿಯ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ 9 ಪಿಎಸ್ಐ‌ಗಳನ್ನ ವರ್ಗಾವಣೆ ಮಾಡಿ ಬಳ್ಳಾರಿ ಐಜಿಪಿ ಡಾ. ಎಂ.ನಂಜುಂಡಸ್ವಾಮಿ ಆದೇಶಿಸಿದ್ದಾರೆ.

ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆ ಪಿಎಸ್ಐ ಸರಳ.ಪಿ- ಎಚ್.ಬಿ.ಹಳ್ಳಿ (ಅಪರಾಧ) ಪೊಲೀಸ್ ಠಾಣೆಗೆ, ಬಳ್ಳಾರಿ ಡಿಎಸ್ಎ ಘಟಕದ ಪಿಎಸ್ಐ ಶಿವಕುಮಾರ್ ನಾಯ್ಕ- ಕೊಪ್ಪಳ ಜಿಲ್ಲೆ ಅಳವಂಡಿ ಪೊಲೀಸ್ ಠಾಣೆಗೆ, ತೆಕ್ಕಲಕೋಟೆ ಪೊಲೀಸ್ ಠಾಣೆ ಪಿಎಸ್ಐ ತಿಮ್ಮಣ್ಣ- ಕುಷ್ಟಗಿ ಪೊಲೀಸ್ ಠಾಣೆಗೆ, ರಾಯಚೂರು ಜಿಲ್ಲೆ ನೇತಾಜಿ‌ನಗರ ಪೊಲೀಸ್ ಠಾಣೆ ಪಿಎಸ್ಐ ಶೀಲಾ ಮೂಗನಗೌಡ್ರ ಕೊಪ್ಪಳ ಜಿಲ್ಲೆ ಬೇವೂರು ಪೊಲೀಸ್ ಠಾಣೆಗೆ, ಬೇವೂರು ಪೊಲೀಸ್ ಠಾಣೆ ಪಿಎಸ್ಐ ಶಂಕ್ರಪ್ಪ ಎಲ್- ಕೊಪ್ಪಳ ಜಿಲ್ಲೆ ಸಿಇಎನ್ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ.

ಬೇವೂರು ಠಾಣೆಗೆ ಆದೇಶದಲ್ಲಿದ್ದ ಪಿಎಸ್ಐ ಟಿ.ಜಿ.ನಾಗರಾಜ ಅವರನ್ನು ಚಿಗಟೇರಿ ಪೊಲೀಸ್ ಠಾಣೆಗೆ, ಕನಕಗಿರಿ ಪೊಲೀಸ್ ಠಾಣೆ ಪಿಎಸ್ಐ ಎಚ್.ಎಸ್.ಪ್ರಶಾಂತ ಅವರನ್ನು ಹಲವಾಗಲಿ ಪೊಲೀಸ್ ಠಾಣೆಗೆ, ಕುಷ್ಟಗಿ ಪೊಲೀಸ್ ಠಾಣೆ ಪಿಎಸ್ಐ ಚಿತ್ತರಂಜನ್- ಬಳ್ಳಾರಿ ಜಿಲ್ಲೆ ಸಿಇಎನ್ ಪೊಲೀಸ್ ಠಾಣೆಗೆ ಹಾಗೂ ಕೊಪ್ಪಳ ಜಿಲ್ಲೆ ಸಿಇಎನ್ ಪೊಲೀಸ್ ಠಾಣೆ ಪಿಎಸ್ಐ ಡಿ.ಸುರೇಶರನ್ನು ಕನಕಗಿರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 314
error: Content is protected !!