ಕೆಡಿಪಿ ಸಭೆಗೆ ಪತ್ರಕರ್ತರಿಗೆ ನಿರ್ಬಂಧ; ಹಲೋ ಹಲೋ ಕೌರವೇಶ, ಇದೇನಿದು ಪತ್ರಕರ್ತರ ಮೇಲೆ ದ್ವೇಷ!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
“ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಮಂತ್ರಿ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ‌ ಇಂದು ಕೆಡಿಪಿ ಸಭೆ ನಡೆಯಲಿದೆ. ಸಭೆಗೆ ಪರ್ತಕರ್ತರಿಗೆ ಅನುಮತಿ ಇಲ್ಲ. ಸಭೆ ಮುಗಿದ ಬಳಿಕ ಮಂತ್ರಿಗಳು ಮಾಹಿತಿ ನೀಡಲಿದ್ದಾರೆ”
ಕೊಪ್ಪಳದ ವಾರ್ತಾ ಇಲಾಖೆಯಿಂದ ಕೊಪ್ಪಳದ ಪತ್ರಕರ್ತರಿಗೆ ಕಳುಹಿಸಲಾದ ವಾಟ್ಸಾಪ್ ಸಂದೇಶವಿದು.

ಹೌದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಇಂದು (ನ.20) ಕೆಡಿಪಿ ಸಭೆ ಕರೆಯಲಾಗಿದೆ. ಕೆಡಿಪಿ ಸಭೆಗೆ ಪತ್ರಕರ್ತರ ಪ್ರವೇಶ ನಿರ್ಬಂಧಿಸುವ ಮೂಲಕ ‌ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಕೊಪ್ಪಳದಲ್ಲಿ ಹೊಸ ಸಂಪ್ರದಾಯ ಶುರುವಿಟ್ಟಿದ್ದಾರೆ.

ಇನ್ನು ಸಭೆ 11ಕ್ಕೆ ಆರಂಭವಾಗಲಿದ್ದು, ಸಭೆಗೂ ಮೊದಲು ಫೋಟೊ ವಿಡಿಯೋ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿಲಾಗಿದೆ.‌ ಆದರೆ, ನಿಗದಿತ ‌ಸಮಯಕ್ಕೂ ಮೊದಲೇ 10.30ಕ್ಕೆ ಸಭೆ ಆರಂಭಿಸಿರುವ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಒಳಗಿನಿಂದ ಡೋರ್ ಲಾಕ್ ಮಾಡುವ ಮೂಲಕ ‘ಕೌರವ’ನ ಅವತಾರ ಪ್ರದರ್ಶಿಸಿದ್ದಾರೆ.

ಅನುಮಾನ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ಸಭೆಗೆ ಹಾಜರಾಗುವಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ‌ಹತ್ತಾರು ಬಾರಿ ಕರೆ ಮಾಡಿ, ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆದರೆ,‌ಇಂಥ ಮಹತ್ವದ ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ನಿರ್ಬಂಧಿಸಿರೋದು ಅನುಮಾನಕ್ಕೆ ಎಡೆ ಮಾಡಿದೆ. ಸರ್ಕಾರ ಬಿಡುಗಡೆ ಮಾಡುವ ಅನುದಾನದ ಬಳಕೆ ಮತ್ತು ಅನುಷ್ಠಾನದ‌ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಜನರ ತೆರಿಗೆ ಹಣ ಹೇಗೆ ‌ವಿನಿಯೋಗ ಆಗ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿಯದಂತೆ ಚರ್ಚೆ ಮಾಡುವ ಔಚಿತ್ಯ‌ ಏನು? ಎಂಬುದು ‌ಪ್ರಶ್ನೆಯಾಗಿದೆ.

ಸಭೆ ನಡೆಯುತ್ತಿರುವ ಕೊಪ್ಪಳ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣ ಪ್ರವೇಶದಲ್ಲಿ 3 ಹಂತದಲ್ಲಿ ‌ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ತಮ್ಮ ಕೆಲಸಗಳಿಗಾಗಿ ವಿವಿಧ ಇಲಾಖೆಗೆ ಬರುವ ಸಾರ್ವಜನಿಕರಿಗೂ ಇದರಿಂದ ಕಿರಿಕಿರಿ ಉಂಟಾಗಿದೆ.

1+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 563
error: Content is protected !!