ವಯಸ್ಸಾದ ಆಕಳನ್ನು ಸಿ.ಟಿ.ರವಿ ‌ಮನೆ ಮುಂದೆ ಕಟ್ಟಬೇಕಾ? ಬಿಜೆಪಿ ಮುಖಂಡರ ಮನೆ ಮುಂದೆ ತರಬೇಕಾ? ನಾವು ಏನು ತಿನ್ನಬೇಕು ನಮಗೆ ಗೊತ್ತು; ತಂಗಡಗಿ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ವಯಸ್ಸಾದ ಆಕಳನ್ನು ಸಿ.ಟಿ. ರವಿ ಮನೆ ಮುಂದೆ ಕಟ್ಟಬೇಕಾ? ಸ್ಥಳೀಯ ಬಿಜೆಪಿ ಮುಖಂಡರ ಮನೆ ಮುಂದೆ ಕಟ್ಟಬೇಕಾ? ಸಂವಿಧಾನ ಆಹಾರದ ಹಕ್ಕು ನೀಡಿದೆ ಏನು ತಿನ್ನಬೇಕು ಅನ್ನೋದು ನಮಗೆ ಬಿಟ್ಟಿದ್ದು ಎಂದು ಮಾಜಿ ಮಂತ್ರಿ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಕೇಂದ್ರ ಮತ್ತು ತಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧ ಮಾಡುವ ಮುನ್ನ ಅದರ ಸಾಧಕ ಬಾಧಕ ಚರ್ಚಿಸಬೇಕು. ವಾಸ್ತವದಲ್ಲಿ ಗೋ ಮಾಂಸ ರಫ್ತು ಮಾಡುವವರ ಪೈಕಿ ಹೆಚ್ಚಿನವರು ಬಿಜೆಪಿ ಶಾಸಕರು-ಸಂಸದರು ಇದ್ದಾರೆ ಎಂದರು.

ಯುಪಿ ರಾಜ್ಯದಲ್ಲಿ ಗೋ ಮಾಂಸ ಅತಿಹೆಚ್ಚು ರಫ್ತು ಮಾಡುತ್ತಿದ್ದಾರೆ. ಅಲ್ಲಿ ರಫ್ತು ಮಾಡುವವರೂ ಬಿಜೆಪಿ ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು ಇದ್ದಾರೆ. ಗೋ ಮಾಂಸ ರಫ್ತು ಮಾಡುವ ಕಂಪನಿಗಳು ಯಾವ್ಯಾವು ಎಂಬುದು ಮೊದಲು ಸರ್ಕಾರ ಸ್ಪಷ್ಟಪಡಿಸಲಿ. ಆಹಾರದ ಹಕ್ಕನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದರು.

ಇನ್ನು ಬಿಜೆಪಿಗರು ಲವ್ ಜಿಹಾದ್ ಬಗ್ಗೆನೂ ಮಾತನಾಡ್ತಾರೆ. ವಯಸ್ಸಾದ ಮೇಲೆ ಎಲ್ಲರೂ ಸರ್ವ ಸ್ವಾತಂತ್ರರು. ಅವರವರ ಇಷ್ಟ ಪಟ್ಟವರನ್ನು ಮದುವೆ ಆಗ್ತಾರೆ. ಕನಿಷ್ಠ 18 ವರ್ಷದ ಯುವತಿ ಹಾಗೂ 21ಯುವಕರಿಗೆ ಯೋಚನಾ ಶಕ್ತಿ ಇರುತ್ತೆ. ಮದುವೆಯಾಗುವುದು ಅವರವರ ಸ್ವಾತಂತ್ರ್ಯ. ಪ್ರೇಮಿಗಳಿಗೂ ತೊಂದರೆ ಕೊಡುವ ಬಿಜೆಪಿಗರು ಸರ್ಕಾರ ಮಾಡುತ್ತಿದ್ದಾರಾ? ಸದ್ದಾಂ ಹುಸೇನ್ ಆಡಳಿತ ಮಾಡುತ್ತಿದ್ದಾರಾ?ಎಂದು ಟೀಕಿಸಿದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 2585
error: Content is protected !!