ಕರ್ನಾಟಕ ಬಂದ್ ಹಿನ್ನೆಲೆ 15 ಕಾರ್ಯಕರ್ತರ ಹೋರಾಟ; 50 ಪೊಲೀಸರಿಂದ ಬಂದೋಬಸ್ತ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ
ಮರಾಟಾ ಅಭಿವೃದ್ಧಿ ನಿಗಮ‌ ಸ್ಥಾಪನೆ ವಿರೋದಿಸಿ ಕರೆ ನೀಡಿರೋ ಕರ್ನಾಟಕ ಬಂದ್ ಹಿನ್ನೆಲೆ ಕೊಪ್ಪಳದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಶನಿವಾರ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿದರು.

ಕನ್ನಡ ಪರ ಸಂಘಟನೆಗಳ ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗ್ಗೆ 5ಕ್ಕೆ ರಸ್ತೆಗಿಳಿದಿದ್ದರು. ಟೈರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶಾಸಕ ಯತ್ನಾಳ ಅವರ ಅಣಕು ಶವ ಯಾತ್ರೆ ಮಾಡಿ, ಆಡಾಡಿಕೊಂಡು ಅಳುವುದಕ್ಕೆ ಶುರು ಇಟ್ಟುಕೊಂಡರು. ಕನ್ನಡ ಪರ ಕಾರ್ಯಕರ್ತರು ಅಳುವುದನ್ನು ನೋಡಲು ಸಾರ್ವಜನಿಕರು ಸುತ್ತಲು ಸೇರಿದ್ದು ಕಂಡು ಬಂತು.

ಇನ್ನು ಕೊಪ್ಪಳದಲ್ಲಿ ಕೆಲ ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರು ಸೇರಿ ಸುಮಾರು 20 ಜನ ಮಾತ್ರ ಬೆಳಗ್ಗೆಯಿಂದ ಹೋರಾಟ ಮಾಡಿದರು. ಆದರೆ, ಬಂದೋಬಸ್ತಗೆ 50 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಪ್ರತಿಭಟನೆ ಮಾಡುವವರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ಸಂಚಾರ ತಡೆ: ಬೆಳಗ್ಗೆಯಿಂದಲೂ ಎಂದಿನಂತೆ ಕೊಪ್ಪಳ ಕೇಂದ್ರಿಯ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಿದ್ದವು. ಆದರೆ, ಪ್ರತಿಭಟನಾಕಾರರು ಬಸ್ ಗೆ ಅಡ್ಡ ಮಲಗಿದ್ದರಿಂದ ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು. ನಂತರ ಆಟೋದಲ್ಲಿ ಮೈಕ್ ಕಟ್ಟಿಕೊಂಡು ಬಂದ್ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ವ್ಯಾಪಾರ ವಹಿವಾಟು ಓಪನ್: ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಹೂ- ಹಣ್ಣಿನ ಅಂಗಡಿ, ಹೋಟೆಲ್, ಟೀ ಶಾಪ್ ಮತ್ತು ಮೆಡಿಕಲ್ ಶಾಪ್ ಗಳು ಎಂದಿನಂತೆ ತೆರೆದಿದ್ದವು. ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರ ಎಂದಿನಂತೆ ಸುಗಮವಾಗಿ ನಡಿಯಿತು.‌

ಮುಖಂಡರಾದ ಕೆ.ಎಸ್.ಕೊಡತಗೇರಿ, ರಾಜೇಶ ಅಂಗಡಿ, ವಿಜಯಕುಮಾರ್, ಚನ್ನಬಸನ ಜೇಕಿನ್, ಅರ್ಜುನ ನಾಯಕ, ಶರಣಪ್ಪ ಕೊತ್ವಾಲ್, ಸಂಗಮೇಶ ಬಾದವಾಡಗಿ, ಹನುಮಂತ ಹಳ್ಳಿಕೇರಿ, ನಾಸಿರ್ ಕಂಠಿ ಸೇರಿ ಇತರರು ಇದ್ದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 320
error: Content is protected !!