ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ; ಮಾಜಿ ಮಂತ್ರಿ ಶಿವರಾಜ ತಂಗಡಗಿ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕನಕಗಿರಿ

ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ. ಅಲ್ಲಿ ಇರುವವರೆಲ್ಲ ಕಾಂಗ್ರೆಸ್, ಜೆಡಿಎಸ್ ಬೀಜಗಳು. ಬಿಜೆಪಿಯವರು ನಮ್ಮವರನ್ನೇ ಎತ್ತಿಕೊಂಡು ಹೋಗಿ ತಮ್ಮ ಪಕ್ಷದವರು ಎನ್ನುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು.

ಕನಕಗಿರಿ ವಿಧಾನಸಭೆ ಕ್ಷೇತ್ರದ ಅನೇಕ ಕಡೆ ಗ್ರಾಪಂ ಸದಸ್ಯರನ್ನು ಕರೆದುಕೊಂಡು ಹೋಗಿ, ಶಾಸಕರು ನಮ್ಮವರು ಎನ್ನುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆದ ಕೆಲಸವನ್ನೇ ಇಲ್ಲಿನ ಶಾಸಕರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನಕಗಿರಿ ಕ್ಷೇತ್ರಕ್ಕೆ ಶಾಸಕ ಬಸವರಾಜ್ ದಡೆಸುಗೂರು ಕೊಡುಗೆ ಏನೂ ಇಲ್ಲ. ಈ ಹಿಂದೆ ನಾನು ತಂದಿರೋ ಯೋಜನೆಗೆ ಶಾಸಕರು ಭೂಮಿ ಪೂಜೆ ಮಾಡ್ತಿದ್ದಾರೆ. ಶಾಸಕ ಬಸವರಾಜ ದಡೆಸುಗೂರ ಸಾಧನೆ ಎಂದರೆ ಎಂಎಸ್ ಐಎಲ್ ಲಿಕ್ಕರ್ ಶಾಪ್ ಗಳನ್ನು ಮಂಜೂರು ಮಾಡಿಸಿದ್ದು ಮಾತ್ರ ಎಂದರು. ಇನ್ನು ನಾನು ಯಾವತ್ತೂ ವಡ್ಡರ ಪಿಎಸ್ಐ, ತಹಸೀಲ್ದಾರರನ್ನು ಕ್ಷೇತ್ರಕ್ಕೆ ತರಲಿಲ್ಲ. ನಾನು ಯಾವತ್ತೂ ಸ್ವಜಾತಿಯ ಅಧಿಕಾರಿಗಳನ್ನು ತರಲಿಲ್ಲ. ಆದರೆ ಬಸವರಾಜ ದಡೆಸೂಗೂರ ಬರೀ ಇದೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರನ್ನು ಏನೇ ಕೇಳಿದ್ರೂ ಎರಡು ಲಕ್ಷ ಹದಿಮೂರಕ್ಕೆ ಜನ ತೀರ್ಪು ನೀಡುತ್ತಾರೆ ಎನ್ನುತ್ತಾರೆ ಎನ್ನುವ ಮೂಲಕ ಶಾಸಕ ಬಸವರಾಜ ದಡೆಸುಗೂರ‌ ಅವರಿಗೆ 2023ಕ್ಕೂ ಎರಡು ಲಕ್ಷದ ನಡುವೆ ವ್ಯತ್ಯಾಸ ಗೊತ್ತಿಲ್ಲ ಎಂಬ ಅರ್ಥದಲ್ಲಿ ವ್ಯಂಗ್ಯಮಾಡಿದರು.

ಕನಕಗಿರಿಯ ಟ್ರ್ಯಾಕ್ಟರ್ ರ್ಯಾಲಿ ಇಡೀ ರಾಜ್ಯದಲ್ಲಿಯೇ ಮಾದರಿಯಾಗಬೇಕು.‌ಫೆ.15 ರಂದು ಬೃಹತ್ ಟ್ರಾಕ್ಟರ್ ರ್ಯಾಲಿಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ಕೊಟ್ಟರು. ಕಾಂಗ್ರೆಸ್ ಮುಖಂಡ ರೆಡ್ಡಿ ಶ್ರೀನಿವಾಸ್, ಪ್ರಶಾಂತ ನಾಯಕ ಸೇರಿ ಇತರರು ಇದ್ದರು.

2+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 168
error: Content is protected !!