ಟ್ರ್ಯಾಕ್ಟರ್ ರ‌್ಯಾಲಿಗೆ ರೈತ, ಕಾರ್ಮಿಕರು ಸಂಘಟನೆ ಬೆಂಬಲ ಇಲ್ಲ; ಶರಣಪ್ಪ ಕೊತ್ವಾಲ್

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕಾರಟಗಿ
ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಫೆ.15ರಂದು ನಡೆಯಲಿರುವ ಟ್ರ್ಯಾಕ್ಟರ್ ರ‌್ಯಾಲಿಗೆ ಕಾರ್ಮಿಕ ಮತ್ತು ರೈತ ಪರ ಸಂಘಟನೆಗಳು ಬೆಂಬಲಿಸಬಾರದು ಎಂದು ಭಾರತೀಯ ಕೃಷಿ ಕಾರ್ಮಿಕ ಮತ್ತು ರೈತ ಸಂಘಟನೆ ಜಿಲ್ಲಾಧ್ಯಕ್ಷ ಶರಣಪ್ಪ ಕೊತ್ವಾಲ್ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರಗಳ ಕೃಷಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕಳೆದ 3 ತಿಂಗಳಿಂದ ಹೋರಾಟ ಮಾಡುತ್ತಿವೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ರೈತ ಸಂಘಟನೆಗಳ ಬೆಂಬಲಕ್ಕೆ ಬಂದಿಲ್ಲ. ಇದೀಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹೋರಾಟ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಾನಾ ರೈತ ಸಂಘಟನೆ ಮುಖಂಡರೊಂದಿಗೆ ಸೇರಿ ಹೋರಾಟ ಮಾಡಿ, ಜನ ಬೆಂಬಲ ತೋರಿಸಿಕೊಳ್ಳಲು ಮುಂದಾಗಿದ್ದಾರೆ. ನಮಗೆ ಕಾಂಗ್ರೆಸ್- ಬಿಜೆಪಿ ಸಮಾನ ವಿರೋಧಿಗಳಾಗಿದ್ದು, ಒಂದೇ ನಾಣ್ಯದ ಎರಡು ಮುಖಗಳು. ಈ ಕಾರಣಕ್ಕೆ ರಾಜಕೀಯ ಪ್ರೇರಿತ ಹೋರಾಟಕ್ಕೆ ಬೆಂಬಲ ನೀಡಬಾರದು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.

ಹೋರಾಟದಲ್ಲಿ ಭಾಗವಹಿಸುವ ಟ್ರ್ಯಾಕ್ಟರ್ ಗಳಿಗೆ ಎಲ್ಲ ದಾಖಲಾತಿ ಇರಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದೊಮ್ಮೆ ದಾಖಲಾತಿ ಇಲ್ಲದಿದ್ದರೆ ಆರ್ ಟಿಒ ಅಧಿಕಾರಿಗಳು ದೊಡ್ಡ ಮಟ್ಟದ ದಂಡ ವಿಧಿಸಿದರೆ ಯಾರು ತೆರಬೇಕು? ಈ ಕಾರಣಕ್ಕೆ ರೈತರು ಪೂರ್ವಾಪರ‌‌ ಯೋಚಿಸಿ ಭಾಗವಹಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 127
error: Content is protected !!