ಬಿಎಸ್ ವೈ ನೆರಳಿಲ್ಲದೇ ಈಶ್ವರಪ್ಪಗೆ ಗತಿ ಇಲ್ಲ: ವಯಸ್ಸಾ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪಗೆ ಕಂಟ್ರೋಲ್ ಇಲ್ಲ- ಶಾಸಕ ರಾಘವೇಂದ್ರ ಹಿಟ್ನಾಳ

ವಿಜಯಪರ್ವ ಸುದ್ದಿ, ಕೊಪ್ಪಳ
ಸಿಎಂ ಯಡಿಯೂರಪ್ಪ ನೆರಳಿಲ್ಲದೇ ಈಶ್ವರಪ್ಪಗೆ ಗತಿ ಇಲ್ಲ. ಕೆ.ಎಸ್.ಈಶ್ವರಪ್ಪಗೆ ಮುಂದಿನ ಚುನಾವಣೆಯಲ್ಲಿ ಟಿಕೇಟ್ ಸಿಗೋದೇ ಡೌಟ್. ಈ ಕಾರಣಕ್ಕೆ ಕುರುಬ ಎಸ್ಟಿ ಮೀಸಲಾತಿ ಹೋರಾಟಕ್ಕೆ ಇನ್ವೆಸ್ಟ್ ಮಾಡುತ್ತಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಲೇವಡಿ ಮಾಡಿದ್ದಾರೆ.
ಕೊಪ್ಪಳದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು.
ಈಶ್ವರಪ್ಪ ಶಿವಮೊಗ್ಗದಲ್ಲಿಯೇ ಯಡಿಯೂರಪ್ಪ ನೆರಳಿನಲ್ಲಿ ಆಯ್ಕೆ ಆಗುತ್ತಿದ್ದಾರೆ. ಸ್ವಂತಃ ಗೆಲ್ಲುವ ಶಕ್ತಿ ಇಲ್ಲದವರು ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಲೇವಡಿ ಮಾಡಿದರು ಮಾಡಿದರು.
ಈಶ್ವರಪ್ಪಗೆ ಮುಂದೆ ಟಿಕೇಟ್ ಸಿಗೋದಿಲ್ಲ ಎಂದು ಗೊತ್ತಾಗಿದೆ. ಆ ಕಾರಣಕ್ಕೆ ಕುರುಬ ಎಸ್ಟಿ ಹೋರಾಟ ಮಾಡಿಸ್ತಿದ್ದಾರೆ. ಸಮಾವೇಶ ಶಿಕಾರಿಪುರದಲ್ಲಿ ನಡೆಸಿದ್ದು, ಈಶ್ವರಪ್ಪ ಟಿಕೆಟ್ ಗಾಗಿ ಇನ್ವೆಸ್ಟ್ ಮಾಡ್ತಿದ್ದಾರೆ ಎಂದು ಟಾಂಗ್ ನೀಡಿದರು.
ಇನ್ನು ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ರಾಘವೇಂದ್ರ ಹಿಟ್ನಾಳ್, ಈಶ್ವರಪ್ಪ ಅವರೇ ಹೀಗಿರುವಾಗ, ಇನ್ನು ಕೆ.ವಿರೂಪಾಕ್ಷಪ್ಪ ಯಾವ ಲೆಕ್ಕ? ವಿರೂಪಾಕ್ಷಪ್ಪರಿಗೆ ವಯಸ್ಸಾಗಿದೆ. ಅದಕ್ಕೆ ಅವರು ಕಂಟ್ರೋಲ್ ತಪ್ಪಿ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ವಿರೂಪಾಕ್ಷಪ್ಪ ಈಶ್ವರಪ್ಪ ಹಿಂದೆ ಓಡಾಡಿ, ಸಿಂಧನೂರಿನಲ್ಲೇ ಟಿಕೇಟ್ ತಗೊಳ್ಳಲಿಲ್ಲ. ಎಂಪಿ ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುರುಬರಿಗೆ ಒಬ್ಬರಿಗೂ ಟಿಕೇಟ್ ಕೊಡಲಿಲ್ಲ. ಇವರೆಲ್ಲರೂ ಬಿಜೆಪಿಯಿಂದ ಟಿಕೇಟ್ ತಗೊಂಡು ಬರಲಿ ಆಮೇಲೆ ನೋಡೋಣ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಇದ್ದರು.