ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ; ಲಾರಿಯಿಂದ ಹಾರಿ ಬಿದ್ದು ಚಾಲಕ ಸಾವು!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕುಕನೂರು
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಚಲಿಸುತ್ತಿರುವ ಲಾರಿಯಿಂದ ಹೊರಗೆ ಹಾರಿ ಬಿದ್ದು ಚಾಲಕ ಮೃತಪಟ್ಟಿದ್ದಾನೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಮೃತ ಚಾಲಕನನ್ನು ಮಣಿಕಂಠ (34) ಎಂದು ಗುರುತಿಸಲಾಗಿದೆ.

ಲಾರಿಯಿಂದ ಸುಮಾರು ‌ಅರ್ಧ ಕಿ.ಮೀ. ಹೊರಗೆ ಹಾರಿ ಹೋಗಿರೋ ಚಾಲಕ ಮಣಿಕಂಠ, ಲಾರಿ‌ಯಿಂದ ಸಿಡಿದು ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಕಲ್ಲು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ‌ ಹೊಡೆದಿದೆ. ಟ್ರ್ಯಾಕ್ಟರ್ ರಸ್ತೆ ಕ್ರಾಸ್ ಮಾಡುವಾಗ ಅಪಘಾತ ಸಂಭವಿಸಿದ್ದು, ಕುಕನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 111
error: Content is protected !!