ಕೊಪ್ಪಳದ ಪಿಎಸ್‌ಐ ಹುದ್ದೆಯ ಅಧಿಕಾರಿಗಳಿಗೆ ಕರ್ತವ್ಯ ಮರುಹಂಚಿಕೆ

ಈ ಸುದ್ದಿ ಹಂಚಿಕೊಳ್ಳಿ:

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಪಿಎಸ್‌ಐ ಹುದ್ದೆಗಳನ್ನು ಮರುಗೊತ್ತುಪಡಿಸಿ, ಸದರಿ ಹುದ್ದೆಗಳ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಮರುನಿಗದಿಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಆದೇಶ ಹೊರಡಿಸಿದ್ದಾರೆ.

ಕೊಪ್ಪಳದಲ್ಲಿ ಪಿಎಸ್‌ಐ ಹುದ್ದೆಗಳ ಕರ್ತವ್ಯ ಮರುನಿಯೋಜನೆ.
ಕೊಪ್ಪಳದಲ್ಲಿ ಪಿಎಸ್‌ಐ ಹುದ್ದೆಗಳ ಕರ್ತವ್ಯ ಮರುನಿಯೋಜನೆ.

ಆ ಪ್ರಕಾರ:

  1. ಈ ಮುಂಚೆ ಇದ್ದ ಪಿಎಸ್‌ಐ (ಕ್ರೈಮ್)‌ ಹುದ್ದೆ ರದ್ದಾಗಿದೆ. ಅದರ ಬದಲು, ಆ ಹುದ್ದೆಯನ್ನು ಪಿಎಸ್‌ಐ (ಇನ್ವೆಸ್ಟಿಗೇಶನ್)‌‌ ಅಂದರೆ, ಪಿಎಸ್ಐ (ವಿಚಾರಣೆ) ಎಂದು ಮರುನಾಮಕರಣ ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ಕರ್ತವ್ಯಗಳನ್ನು ವಿಧಿಸಲಾಗಿದೆ. 
  2.  ಎರಡು ಪಿಎಸ್‌ಐ ಹುದ್ದೆಗಳಿರುವ ಠಾಣೆಗಳಿಗೆ ಸಂಬಂಧಿಸಿದಂತೆ, ಒಂದು ವೇಳೆ ಆ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಪ್ರತ್ಯೇಕ ಸಂಚಾರ ಪೊಲೀಸ್‌ ಠಾಣೆ ಇದ್ದಲ್ಲಿ, ಅಂತಹ ಠಾಣೆಗಳಲ್ಲಿ ಜೇಷ್ಠತೆ ಹೊಂದಿರುವ ಪಿಎಸ್‌ಐ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಹಾಗೂ ಉಳಿಯುವ ಇನ್ನೊಬ್ಬ ಪಿಎಸ್‌ಐಗೆ ಇನ್ವೆಸ್ಟಿಗೇಶನ್‌ ಹೊಣೆಗಾರಿಕೆಯನ್ನು ನೀಡಲಾಗಿದೆ.
  3. ನಾಲ್ಕು ಪಿಎಸ್‌ಐ ಹುದ್ದೆಗಳಿರುವ ಠಾಣೆಯಲ್ಲಿ, ಜೇಷ್ಠತೆಯ ಆಧಾರದ ಮೇಲೆ ಹಿರಿಯ ಪಿಎಸ್‌ಐಗೆ ಕಾನೂನು ಮತ್ತು ಸುವ್ಯವಸ್ಥೆ, ನಂತರ ಮೂವರು ಪಿಎಸ್‌ಐಗಳಿಗೆ ಸಂಚಾರ (ಒಂದು ವೇಳೆ ಸಂಚಾರ ಠಾಣೆ ಇರದಿದ್ದಲ್ಲಿ), ಪಿಎಸ್‌ಐ ಇನ್ವೆಸ್ಟಿಗೇಶನ್-1 ಹಾಗೂ ಹಾಗೂ ಪಿಎಸ್‌ಐ ಇನ್ವೆಸ್ಟಿಗೇಶನ್-2 ಎಂದು ಹುದ್ದೆ ಮರುನಿಯೋಜನೆಗೊಂಡಿದೆ. ಒಂದು ವೇಳೆ ಸಂಚಾರ ಠಾಣೆ ಇದ್ದಲ್ಲಿ, ಬಾಕಿ ಮೂವರು ಪಿಎಸ್‌ಐಗಳಿಗೆ ಹಾಗೂ ಪಿಎಸ್‌ಐ (ಇನ್ವೆಸ್ಟಿಗೇಶನ್-1), ಪಿಎಸ್‌ಐ (ಇನ್ವೆಸ್ಟಿಗೇಶನ್-2) ಹಾಗೂ ಪಿಎಸ್‌ಐ (ಇನ್ವೆಸ್ಟಿಗೇಶನ್-3) ಎಂದು ಹುದ್ದೆ ಮರುನಿಯೋಜನೆಯಾಗಿದೆ.
ಕೊಪ್ಪಳದಲ್ಲಿ ಪಿಎಸ್‌ಐ ಹುದ್ದೆಗಳ ಕರ್ತವ್ಯ ಮರುನಿಯೋಜನೆ.

ಇದೇ ಮಾದರಿಯಲ್ಲಿ ಮರುನಿಯೋಜಿತ ಹುದ್ದೆಗಳ ಕರ್ತವ್ಯಗಳನ್ನು ವಿಧಿಸಲಾಗಿದೆ. ಆ ಪ್ರಕಾರ ಮರುನಿಯೋಜನೆಗೊಂಡ ಪಿಎಸ್‌ಐಗಳ ಹೆಸರು ಹಾಗೂ ಅವರ ಹೊಸ ಕರ್ತವ್ಯಗಳ ವಿವರಗಳನ್ನು ಎಸ್‌ಪಿ ಕಚೇರಿ ನೀಡಿದೆ. 

ಕೊಪ್ಪಳ ಜಿಲ್ಲೆಯಾದ್ಯಂತ ಒಟ್ಟು 36 ಪಿಎಸ್‌ಐ ಹುದ್ದೆಗಳಿದ್ದು, ಆ ಪೈಕಿ 8 ಹುದ್ದೆಗಳು ಖಾಲಿ ಇವೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 406