ಕರೋನ; ನಾಳೆಯಿಂದ ಗಂಗಾವತಿ,ಶ್ರೀರಾಮನಗರ 10 ದಿನ ಲಾಕ್ ಡೌನ್!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ,ಕೊಪ್ಪಳ:
ಜಿಲ್ಲೆಯ ಗಂಗಾವತಿ ಮತ್ತು ಶ್ರೀರಾಮನಗರ ಕೋವಿಡ್‌19 ಹಾಟ್ ಸ್ಪಾಟ್ ಆಗಿದ್ದು, ನಾಳೆ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಆಗಲಿವೆ ಎಂದು ಜಿಲ್ಲಾ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದರು.
ಕೊಪ್ಪಳದ ಜಿಲ್ಲಾಡಳಿತ‌ ಭವನದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಕೋವಿಡ್ 19 ನಿಯಂತ್ರಣ ಕುರಿತ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಗಂಗಾವತಿ ಮತ್ತು ಗಂಗಾವತಿ ತಾಲೂಕಿನ ಶ್ರೀರಾಮನಗರ ಜುಲೈ 21ರ ರಾತ್ರಿ 8 ಗಂಟೆಯಿ10 ದಿನ ಬಂದ್ ಆಗಲಿವೆ. ಮದ್ಯದಂಗಡಿ ಸೇರಿ ಅನಗತ್ಯ ವಸ್ತುಗಳ ಮಾರಾಟ ಇರೋದಿಲ್ಲ.ಅಗತ್ಯ ಸೌಲಭ್ಯ ಹೊರತಾಗಿ ಎಲ್ಲವೂ ಬಂದ್ ಇರಲಿವೆ. ಏನಿರತ್ತೆ? ಏನಿರಲ್ಲ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಗೈಡ್ ಲೈನ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ಸಂಸದ ಸಂಗಣ್ಣ ಕರಡಿ,‌ ಶಾಸಕ ಬಸವರಾಜ ದಡೆಸುಗೂರ, ಡಿಸಿ ವಿಕಾಸ ಕಿಶೋರ್, ‌ಎಸ್ಪಿ ಜಿ.ಸಂಗೀತಾ ಇದ್ದರು.

+4
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 760