ಮಾಜಿ ಸಿಎಂ ಎಚ್‌ಡಿಕೆ ಬಕೆಟ್ ಹಿಡಿವವರ ಮಾತು ಕೇಳ್ತಾರೆ; ಜೆಡಿಎಸ್ ಉಪಾಧ್ಯಕ್ಷ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ ‌| ಕೊಪ್ಪಳ
ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಕೆಟ್ ಹಿಡಿಯುವವರು, ಕಿವಿ ಕಡಿವವರ ಮಾತು ಕೇಳುತ್ತಾರೆ. ಪಕ್ಷದ‌ ನಿಜವಾದ ಕಾರ್ಯಕರ್ತರಿಗೆ ಜೆಡಿಎಸ್ ನಲ್ಲಿ ಬೆಲೆ ಇಲ್ಲ. ಶೀಘ್ರದಲ್ಲೇ ಕೊಪ್ಪಳ ಜಿಲ್ಲೆಯ ಬಹುತೇಕ ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿ ಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪತ್ರ ಪ್ರದರ್ಶಿಸಿ ಕೊಪ್ಪಳದಲ್ಲಿ ಇಂದು ಮಾತನಾಡಿದರು.

ಕಳೆದ 10 ವರ್ಷದಿಂದ ನಾನು ಜೆಡಿಎಸ್ ನಲ್ಲಿ ‌ಸಕ್ರೀಯವಾಗಿ ಇದ್ದೇನೆ. ಒಟ್ಟೂ 2 ಬಾರಿ ನಾನು ಕೊಪ್ಪಳ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದೇನೆ. ಕಳೆದ 2010ರ‌ ಉಪ ಚುನಾವಣೆಯಲ್ಲಿ 22 ಸಾವಿರ ಮತ‌ ಪಡೆದಿದ್ದೇನೆ. ಆಗಲೂ ನನಗೆ ಪಕ್ಷದ‌ ಸಪೋರ್ಟ್ ನೀಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ನಲ್ಲಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತದೆ. ಈ ಕಾರಣಕ್ಕೆ‌ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಬೆಳೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 347