ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಗೌರವಕ್ಕೆ ತಕ್ಕಂತೆ ಮಾತನಾಡಬೇಕು; ಬಿ.ಸಿ. ಪಾಟೀಲ್

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ | ಕೊಪ್ಪಳ
ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಸಂಸದೆ ಸುಮಲತಾ ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು ಸರಿ ಅಲ್ಲ‌‌ ಎಂದು ಕೃಷಿ ಮಂತ್ರಿ ಬಿ.ಸಿ. ಪಾಟೀಲ್ ಹೇಳಿದರು.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದರು. ಅವರವರ ರಾಜಕೀಯದಲ್ಲಿ ಅಂಬರೀಷ ಇಲ್ಲದಾಗ್ಯೂ ಸುಮ್ನೆ ಅವರು ಹೆಸರು ಎಳೆದು ತರುತ್ತಿದ್ದಾರೆ. ಇದು ಸರಿಯಲ್ಲ.‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರಾರ್ಥನೆ ಮಾಡಿದ್ದೇವೆ. ಸುಮ್ನೆ ಅವರನ್ನ ಎಳೆದು ತಂದು ರಾಜಕಾರಣ ಮಾಡೋದ ಸರಿ ಅಲ್ಲ ಎಂದರು.

ಇನ್ನು ಕೆಆರ್ ಎಸ್ ಬಿರುಕು ಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಸುಮ್ನೆ ಒಣ ರಾಜಕಾರಣ ಮಾಡ್ತೀದ್ದಾರೆ. ಕನ್ನಂಬಾಡಿ ಕಟ್ಟೆ‌ ಹೆಸರಿನಲ್ಲಿ ಅವರವರು ರಾಜಕಾರಣ ಮಾಡುತ್ತಿದ್ದಾರೆ. ಜನರನ್ನ ದಾರಿ ತಪ್ಪಿಸೋದು ಸರಿ ಅಲ್ಲ ಎಂದರು. ಸಂಸದೆ ಸುಮಲತಾ ಬಿರುಕು ಬಿಟ್ಟಿದೆ ಅಂತಾ ಹೇಳಿದ್ರು ಇದಕ್ಕೆ ಅಧಿಕಾರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ಅದನ್ನ ಅಲ್ಲಿಗೆ ಮುಕ್ತಾಯ ಮಾಡಬೇಕು. ಇದೇ ವಿಚಾರ ಎಂಟು ದಿನ ಎಳೆದುಕೊಂಡು ಹೋಗಿದ್ದು ಸರಿ ಅಲ್ಲ ಎಂದರು.

ರಾಜ್ಯದಲ್ಲಿ ಏನೋ ಆಗಿದೆ ಎನ್ನುವಂತೆ ಎಳೆದುಕೊಂಡು ಹೋಗಿದ್ದು ಸರಿ ಅಲ್ಲ. ಬೇರೆ ಬೇರೆ ತರಹ ಅಸಂಭದ್ದ ಹೇಳಿಕೆ ಕೊಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಮಾಧ್ಯಮಗಳ ಮೂಲಕ ರಾಜಕಾರಣ ಮಾಡೋದು ಸರಿ ಅಲ್ಲ. ನಾವು ಮಾಡುವ ಕೆಲಸದ ಮೂಲಕ ರಾಜಕಾರಣ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು. ಸಂಸದ ಸಂಗಣ್ಣ ಕರಡಿ, ಡಿಸಿ ಎಸ್.ವಿಕಾಸ ಕಿಶೋರ‌ ಇದ್ದರು.

+2
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 243