ಮದ್ಯ ಅಕ್ರಮ ಸಾಗಣೆ; ಅಳವಂಡಿ ಪೊಲೀಸರ ದಾಳಿ – ಮದ್ಯ, ನಗದು ವಶ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ‌ | ಕೊಪ್ಪಳ

ತಾಲೂಕಿನ ಕವಲೂರು ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 22,666 ಮೌಲ್ಯದ ಮದ್ಯ ಹಾಗೂ ರೂ. 1,78,000 ನಗದು ಹಣವನ್ನು ಅಳವಂಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ವಸಕ್ಕೆ ಪಡೆದಿರೋ ವಸ್ತುಗಳು

ಕವಲೂರು ಗ್ರಾಮದಲ್ಲಿ ಒಂದು ಟಾಟಾ ಇಂಡಿಕಾ ಕಾರಿನಲ್ಲಿ ಅಕ್ರಮವಾಗಿ ಮದ್ಯ ಹಾಗೂ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಪಿಎಸ್ಐ ಮಾರ್ತಂಡಪ್ಪ, ಎಚ್.ಸಿ. ಮಾರುತಿ ಪೂಜಾರ ಅವರು ತಮ್ಮ ಸಿಬ್ಬಂದಿಯ ಜೊತೆ ಮಧ್ಯ ರಾತ್ರಿ 12-30ರ ಸುಮಾರು ಕವಲೂರು ಗ್ರಾಮದ ಕೆರೆಯ ಬಳಿ ಅವಿತು ಕುಳಿತು ಅಕ್ರಮ ದಂಧೆಕೋರರ ಕಾರು ಬಂದಾಗ ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಅಕ್ರಮ ಮದ್ಯ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಆರೋಪಿತನಾದ ವಿಜಯಕುಮಾರ್ ಮಿಟ್ಟಿನವರ ಹಾಗೂ ಮದ್ಯ ಸಾಗಾಣಿಕೆಗೆ ಸಹಕರಿಸುತ್ತಿದ್ದ ಕೊಪ್ಪಳದ ದೇವಿ ವೈನ್ ಶಾಪ್ ಮಾಲೀಕ ಪ್ರಭು ಬಬ್ಲಿ ಅವರನ್ನು ಠಾಣೆಗೆ ಕರೆತಂದು ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 496