ಚಿನ್ನಾಭರಣ ಕಳ್ಳತನವಾಗಿದೆ ಎಂದು ಮಹಿಳೆ ದೂರು; ಆಕೆಯ ಪತಿಯನ್ನೇ ಜೈಲಿಗೆ ಕಳುಹಿಸಿರೊ ಪೊಲೀಸರು!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ | ಕೊಪ್ಪಳ

ಬೇಲಿಯೇ ಎದ್ದು ಹೊಲ ಮೇಯ್ದಂತೆ ತನ್ನ ಸ್ವಂತ ಮನೆಯನ್ನೇ ದರೋಡೆ ಮಾಡಿದ ಚಾಲಾಕಿ ಕಳ್ಳ  ಪೊಲೀಸರ ತನಿಖೆ  ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಕೊಪ್ಪಳದ ಕಿನ್ನಾಳ ರಸ್ತೆಯ ಕಲ್ಯಾಣ ನಗರದಲ್ಲಿ ವಾಸವಾಗಿದ್ದ ಜ್ಯೋತಿ ಎಂಬ ಮಹಿಳೆ ಜುಲೈ 8 ರಿಂದ ಜುಲೈ 17ರವರೆಗೆ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದಾರೆ. ವಾಪಸ್ ಬಂದು ನೋಡಿದಾಗ ತಮ್ಮ ಮನೆಯಲ್ಲಿದ್ದ 3,30,000 ನಗದು ಹಣ ಹಾಗೂ 6,60,000 ಬೆಲೆ ಬಾಳುವ 127 ಗ್ರಾಂ ತೂಕದ ನಾಪತ್ತೆಯಾಗಿರುತ್ತದೆ.

ಮನೆಗೆ ಹಾಕಿದ ಬೀಗವನ್ನಾಗಲಿ, ಅಲ್ಮೇರದ ಬೀಗವನ್ನಾಗಲಿ ಮುರಿದಿರುವುದಿಲ್ಲ. ಮನೆಯವರಿಗಿದು ಅಚ್ಚರಿಯಾಗುತ್ತದೆ. ಜ್ಯೋತಿ ಅವರು ಜುಲೈ 18 ರಂದು ಕೊಪ್ಪಳ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರಿಗೆ ಇದು ಮನೆಯವರೇ ಮಾಡಿದ ಕಳ್ಳತನವೆಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಜ್ಯೋತಿ ಅವರ ಗಂಡ ಶಿವರಾಜ ಭಜಂತ್ರಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ ಹಣ ಹಾಗೂ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣವನ್ನು ಭೇದಿಸಿದ್ದ ನಗರ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ, ಸಬ್ ಇನ್ಸ್ಪೆಕ್ಟರ್ ಗಳಾದ ನಾಗಪ್ಪ ಕನಕಾಪುರ, ಮಹಾಂತಪ್ಪ, ಸಿಬ್ಬಂದಿಗಳಾದ ರಾಜಾಸಾಬ್, ದೇವೇಂದ್ರಪ್ಪ, ಹನುಮಂತಪ್ಪ, ಶರಣಪ್ಪ, ಸುಭಾಷ್, ಜಗದೀಶ್, ಸಿದ್ದರಾಮೇಶ, ಆನಂದ, ಬಸವರಾಜ ಇವರ ಕಾರ್ಯವನ್ನು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್, ಡಿವೈಎಸ್ಪಿ ಗೀತಾ ಬೆನಹಾಳ ಅವರು ಶ್ಲಾಘಿಸಿದ್ದಾರೆ.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 484