10ನೇ‌ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ | ಕೊಪ್ಪಳ

ತಾಲೂಕಿನ ಗಿಣಿಗೇರ ರೈಲ್ವೇ ನಿಲ್ದಾಣದ ಸಮೀಪ ಹಳಿಗೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊಪ್ಪಳ ತಾಲೂಕು ಕಲ್ಲತಾವರಗೇರ ಗ್ರಾಮದ ಕಾವೇರಿ ಸಣ್ಣಗುಂಡಪ್ಪ ಬಡಿಗೇರ (16) ಮೃತ ವಿದ್ಯಾರ್ಥಿನಿ. ಶುಕ್ರವಾರ ರಾತ್ರಿ ಗಿಣಿಗೇರ ರೈಲ್ವೇ ನಿಲ್ದಾಣದ  ಸಮೀಪದ ರೈಲು ಹಳಿಯ ಮೇಲೆ ಶವ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಳು.‌ ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನುವಂತೆ ಕಾಣುತ್ತಿದ್ದರೂ, ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಯಾರೋ ರೈಲ್ವೇ ಹಳಿಗೆ ತಳ್ಳಿ, ಕೊಲೆ ಮಾಡಿದ್ದಾರೆ ಎಂದು ಹಲವರ ಅಭಿಪ್ರಾಯವಾಗಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದರೆ ದೇಹದ ಕೆಲ ಭಾಗಗಳು ತುಂಡಾಗುತ್ತಿದ್ದವು. ಆದರೆ ಯಾವುದೇ ಅಂಗಗಳು ಕತ್ತರಿಸದಿರುವುದು ಅನುಮಾನ ಮೂಡುತ್ತದೆ ಎನ್ನುವುದು ಶವ ನೋಡಿದವರ ಅಭಿಪ್ರಾಯವಾಗಿದೆ.
ರೈಲು ಬರುವ ಸಮಯದಲ್ಲಿ ಯಾರೋ ನೂಕಿರಬಹುದು ಎನ್ನಲಾಗುತ್ತಿದೆ.
ಈ ಘಟನೆಯನ್ನು ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆ ತರಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
+8
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 754