ಪೊಲೀಸ್‌ ಠಾಣೆಯಲ್ಲೇ ನಡೀತು ಸೀಮಂತ ಕಾರ್ಯ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ | ಕೊಪ್ಪಳ

ಪೊಲೀಸ್ ಠಾಣೆ ಅಂದ್ರೆ ಸಾಕು ಸದಾ ಕಳ್ಳರು ಖದೀಮರಿಂದ ತುಂಬಿರುವ ಕಚೇರಿ ಎಂಬುದು ಜನ ಸಾಮಾನ್ಯರ ಕಲ್ಪನೆ. ಆದ್ರೆ, ಇಂದು ಕೊಪ್ಪಳ ತಾಲೂಕು ಅಳವಂಡಿ ಪೊಲೀಸ್ ಠಾಣೆ ವಿಭಿನ್ನವಾಗಿ ಕಂಡು ಬಂತು. ಅಳವಂಡಿ ಪೊಲೀಸ್ ಠಾಣೆಯಲ್ಲಿ ಇಂದು ಹಬ್ಬದ ವಾತಾವರಣ ಕಂಡು ಬಂತು.

ಏನಿದು ಎಂದು ಪ್ರಶ್ನಿಸಿದ ಜನರಿಗೆ ಅಲ್ಲಿನ ಸಿಬ್ಬಂದಿ ಸೀಮಂತ ಕಾರಣ ನಡೆಯುತ್ತಿದೆ ಅಂತಾ ಹೇಳಿದ್ದು ಅಚ್ಚರಿ ಮೂಡಿಸಿತ್ತು.

ಹೌದು, ಅಳವಂಡಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ವೇತಾ ಅವರಿಗೆ ಪೊಲೀಸ್ ಠಾಣೆಯ ಸಿಬ್ಬಂದಿಯೇ ಮುಂದೆ‌ ನಿಂತು ಸೀಮಂತ ಕಾರ್ಯಕ್ರಮ ‌ಮಾಡಿದರು. ಶ್ವೇತ ಅವರ ಪತಿಯೂ ಕೂಡ ಪೊಲೀಸ್‌ ಇಲಾಖೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು, ಅವರ ತಂದೆ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ‌ಈ ಹಿನ್ನೆಲೆಯಲ್ಲಿ ಠಾಣೆ ಸಿಬ್ಬಂದಿಯೇ ಕುಟುಂಬದಂತೆ ನಿಂತುಕೊಂಡು ಸೀಮಂತ ಮಾಡಿ ಕೊಟ್ಟಿದ್ದು ಪ್ರಶಂಶೆಗೆ ಪಾತ್ರವಾಗಿದೆ.

+2
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 501