ಓಡಿಹೋದ ಅನುಮಾನಾಸ್ಪದ ವ್ಯಕ್ತಿ; ಪಿಸ್ತೂಲ್‌ ಹಿಡಿದು ಬೆನ್ನತ್ತಿದ ಎಸ್‌ಪಿ

ಈ ಸುದ್ದಿ ಹಂಚಿಕೊಳ್ಳಿ:

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಇಂದು ವಾಹನಗಳ ದಾಖಲಾತಿ ಪರಿಶೀಲನೆ ಕಸರತ್ತು ಪೊಲೀಸರ ದೊಡ್ಡ ಕಾರ್ಯಾಚರಣೆಗೆ ಕಾರಣವಾಗಿದೆ.

ಮಾಮೂಲು ದಾಖಲಾತಿ ಪರಿಶೀಲನೆ ವೇಳೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಹೀಗಾಗಿ ಕಳೆದ ನಾಲ್ಕೈದು ಗಂಟೆಗಳಿಂದ ಪೊಲೀಸರು ಸುತ್ತಮುತ್ತಲಿನ ಹೊಲಗಳಲ್ಲಿ  ತೀವ್ರ ಶೋಧ ನಡೆಸಿದ್ದಾರೆ.

ಬೈಕ್‌ ತಪಾಸಣೆ ವೇಳೆ ಓಡಿಹೋದ ವ್ಯಕ್ತಿಗಾಗಿ ಕೊಪ್ಪಳ ಜಿಲ್ಲೆ ಅಳವಂಡಿ ಭಾಗದ ಹೊಲಗಳಲ್ಲಿ ಪೊಲೀಸರ ಶೋಧ.

ಖುದ್ದು ಎಸ್‌ಪಿ ಟಿ. ಶ್ರೀಧರ್‌ ಅವರೇ ಶೋಧ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡು ಕಣಕ್ಕೆ ಇಳಿದಿರುವುದು ಘಟನೆಯ ತೀವ್ರತೆಯನ್ನು ಬಿಂಬಿಸಿದೆ. ಓಡಿ ಹೋದ ವ್ಯಕ್ತಿಯನ್ನು ಪತ್ತೆ ಹಚ್ಚಲೆಂದೇ ಶೋಧ ನಡೆಯುತ್ತಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.

ಬೈಕ್‌ ತಪಾಸಣೆ ವೇಳೆ ಓಡಿಹೋದ ವ್ಯಕ್ತಿಗಾಗಿ ಕೊಪ್ಪಳ ಜಿಲ್ಲೆ ಅಳವಂಡಿ ಭಾಗದ ಹೊಲಗಳಲ್ಲಿ ಖುದ್ದು ಎಸ್‌ಪಿ ಟಿ. ಶ್ರೀಧರ್‌ ಅವರಿಂದ ಶೋಧ ಕಾರ್ಯಾಚರಣೆ.

ತನ್ನ ಗುರುತು ಅವರಿಗೆ ಪತ್ತೆಯಾಗಿದೆ ಎಂಬ ಶಂಕೆ ಬೈಕ್‌ಧಾರಿಗೆ ಬಂದಿರುವುದರಿಂದಲೇ ಪೊಲೀಸರಿಗೆ ಸಿಗಬಾರದೆಂದು ವ್ಯಕ್ತಿ ಓಡಿಹೋಗಿದ್ದಾನೆ ಎಂದು ವಿಶ್ಲೇಷಿಸಲಾಗುತ್ತಿದೆ. ವ್ಯಕ್ತಿಯ ಪತ್ತೆಗೆ ಶ್ವಾನದಳವೂ ಬಂದಿದೆ. ಅಳವಂಡಿ-ಕಂಪ್ಲಿ ಭಾಗದ ಹೊಲಗದ್ದೆಗಳಲ್ಲಿ ಎಸ್‌ಪಿ ಶ್ರೀಧರ್‌, ಡಿವೈಎಸ್ಪಿ ಗೀತಾ ಸಹಿತ ಇತರ ಪೊಲೀಸ್‌ ಸಿಬ್ಬಂದಿ ತರಾತುರಿಯಿಂದ ಹುಡುಕಾಟ ಮುಂದುವರಿಸಿದ್ದಾರೆ.

(ಸುದ್ದಿ ಅಪ್‌ಡೇಟ್‌ ಆಗಬಹುದು)

ಶೋಧದ ವಿಡಿಯೋ ಇಲ್ಲಿದೆ ನೋಡಿ: https://youtu.be/_qqb0eDMWQc

+3
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 1024