ಟಿಸಿ ಶಾರ್ಟ್ ಸರ್ಕಿಟ್; ಸುಟ್ಟು ಕರಕಲಾದ ಗೃಹ ಉಪಯೋಗಿ ವಿದ್ಯುತ್ ಉಪಕರಣ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ‌ | ಕೊಪ್ಪಳ

ಟ್ರಾನ್ಸಫಾರ್ಮರ್ (ಟಿಸಿ)ಯಲ್ಲಿ ಉಂಟಾದ ಶಾರ್ಟ್ ಸರ್ಕಿಟ್ ನಿಂದ ಗೃಹ ಉಪಯೋಗಿ ವಿದ್ಯುತ್ ಉಪಕರಣ ಸುಟ್ಟು ಕರಕಲಾದ ಘಟನೆ ಇರಕಲ್ಲಗಡ ಗ್ರಾಮದಲ್ಲಿ ನಡೆದಿದೆ.‌

ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದಲ್ಲಿನ ಸುಮಾರು ಐದಾರು ಮನೆಯಲ್ಲಿ ಟಿವಿ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿನ ಝರಾಕ್ಸ್ ಯಂತ್ರ ಸೇರಿ ಲಕ್ಷಂತರ ‌ರೂಪಾಯಿ ಮೌಲ್ಯದ ಉದ್ಯುತ್ ಚಾಲಿತ ಉಪಕರಣ ಸುಟ್ಟು ಕರಕಲಾಗಿವೆ. ಗ್ರಾಮದ ಬೆಟದಯ್ಯ ಇಟಗಿ, ಸಿದ್ದಲಿಂಗಯ್ಯ ಹೊಸಮಠ ಸೇರಿ ಸುಮಾರು ಐದಾರು ಮನೆಯಲ್ಲಿ ಟಿವಿ ಸ್ಫೋಟಗೊಂಡಿವೆ. ಸರ್ಕಾರಿ ಪದವಿ ಕಾಲೇಜಿನಲ್ಲಿನ ಕಂಪ್ಯೂಟರ್ ಸುಟ್ಟಿದೆ.

ಇನ್ನು ಕೆಲ ಮನೆಯಲ್ಲಿ ಬಟ್ಟೆಗೆ ಬೆಂಕಿ ತಗುಲಿ ಗೃಹ ಉಪಯೋಗಿ ವಸ್ತುಗಳು ಸುಟ್ಟು, ಮನೆಯ ಗೋಡೆಗಳು ಕಪ್ಪಾಗಿವೆ. ಹಲವರ ಮನಡಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸಾರ್ವಜನಿಕರೇ ಬೆಂಕಿ ನಂದಿಸಿದ್ದಾರೆ.

ಜೆಸ್ಕಾಂ ನಿರ್ಲಕ್ಷ?: ಘಟನೆಗೆ ಜೆಸ್ಕಾಂ ನಿರ್ಲಕ್ಷವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಕಾಲಕಾಲಕ್ಕೆ ಗ್ರಾಹಕರಿಂದ ಬಿಲ್ ವಸೂಲಿ ಮಾಡುವ ಅಧಿಕಾರಿಗಳು, ಟಿಸಿ ಮತ್ತು ಲೈವ್ ವೈಯರ್ ಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಈ ಕಾರಣಕ್ಕೆ ಅವಘಡ ಸಂಭವಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ನಷ್ಟ ಉಂಟಾದ‌ ಮನೆಗೆ ಪರಿಹಾರ ನೀಡಬೇಕು ಎಂದು ಸಾರ್ವಜನಿಜರು ಆಗ್ರಹಿಸಿದ್ದಾರೆ.

+1
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 1080