ಪ್ರತಿಷ್ಠಿತ ಕಾಲೇಜಿಗೆ ಡಾ. ಅಭಿಲಾಷಾ ಹೇರೂರ ಪ್ರವೇಶ

ಈ ಸುದ್ದಿ ಹಂಚಿಕೊಳ್ಳಿ:
ವಿಜಯ ಪರ್ವ ಸುದ್ದಿ | ಕೊಪ್ಪಳ

ದಂತ ವೈದ್ಯಕೀಯ ಪದವೀಧರರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಡಾ. ಅಭಿಲಾಷಾ ಅಶೋಕಸ್ವಾಮಿ ಹೇರೂರ, ಬೆಂಗಳೂರಿನ ಪ್ರತಿಷ್ಠಿತ ಎಮ್.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ  ಸ್ನಾತಕೋತ್ತರ ಪದವಿಯ ಸರ್ಜರಿ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ.

ತಂದೆ ಅಶೋಕಸ್ವಾಮಿ ಹೇರೂರ ಹಾಗೂ ತಾಯಿ ಸಂಧ್ಯಾ ಪಾರ್ವತಿ ಅವರೊಂದಿಗೆ ಡಾ. ಅಭಿಲಾಷ ಹೆರೂರ.

ಮುಖದ ಮೇಲಿನ ಮೂಳೆ, ದವಡೆ ಮುರಿತ ಮತ್ತು ಮುಖದ ಮೇಲಿನ ಯಾವುದೇ ವಿಕಲತೆಯನ್ನು ಸರಿಪಡಿಸುವ ವಿಭಾಗ ಇದಾಗಿದ್ದು , ಬ್ಲ್ಯಾಕ್ ಫ಼ಂಗಸ್ ಚಿಕಿತ್ಸೆ ಕೂಡ ಈ ಸರ್ಜರಿ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ.

ಬಳ್ಳಾರಿಯ ಸರಕಾರಿ ವಿಜಯನಗರ ದಂತ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ದಂತ ವೈದ್ಯಕೀಯ ಪದವಿಯಲ್ಲಿ ಮೊದಲ ಸ್ಥಾನದಲ್ಲಿ ಉತ್ತೀರ್ಣರಾಗಿದ್ದ ಡಾ. ಅಭಿಲಾಷಾ ಅವರು ಅತಿ ಕ್ಲಿಷ್ಟಕರವಾದ ಸರ್ಜರಿ ವಿಭಾಗ ಆಯ್ಕೆ ಮಾಡಿಕೊಂಡಿದ್ದಾರೆ.

ಬಳ್ಳಾರಿಯಲ್ಲಿ ಅಭ್ಯಾಸ ಮಾಡುವಾಗ ಕರಡಿ ಕಡಿತಕ್ಕೊಳಗಾದ ಮತ್ತು ಅಫ಼ಘಾತಕ್ಕೀಡಾದ ರೋಗಿಗಳಿಗೆ ಉತ್ಸಾಹದಿಂದ ಚಿಕಿತ್ಸೆ ನೀಡುತ್ತಿದ್ದ ಡಾ. ಅಭಿಲಾಷಾ ಸಹಜವಾಗಿ ಸ್ನಾತಕೋತ್ತರ ಪದವಿಯಲ್ಲಿ ಸರ್ಜರಿ ವಿಭಾಗ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರ ಹೆತ್ತವರಾದ ಗಂಗಾವತಿಯ ಅಶೋಕಸ್ವಾಮಿ ಹೇರೂರ ಮತ್ತು ಶ್ರೀಮತಿ ಸಂಧ್ಯಾ ಪಾರ್ವತಿ ಸಂತಸ ವ್ಯಕ್ತಪಡಿಸಿದ್ದಾರೆ.

(ಅಶೋಕಸ್ವಾಮಿ ಹೇರೂರ ಅವರು ಗಂಗಾವತಿಯಲ್ಲಿ ನೆಲೆಸಿದ್ದು, ವಕೀಲರು, ಔಷಧೀಯ ವ್ಯಾಪಾರಿಗಳ ರಾಜ್ಯ ಸಂಘದ ಅಧ್ಯಕ್ಷರು, ನ್ಯಾಯವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದಾರೆ)

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 1001