ಜೋಕಾಲಿ ಜೀಕಿದ 110ರ ಹರೆಯದ ಅಜ್ಜಿ; ವೀಡಿಯೋ ವೈರಲ್

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ:
ತಾಲೂಕಿನ ಬೈರಾಪೂರ ಗ್ರಾಮದಲ್ಲಿ ಬರೋಬ್ಬರಿ 110‌ ವಯಸ್ಸಿನ ಅಜ್ಜಿಯೊಬ್ಬರು ಜೋಕಾಲಿ ಜೀಕಿದ್ದಾರೆ. ನಾಗರ ಪಂಚಮಿ ಹಿನ್ನೆಲೆ ಮರಕ್ಕೆ ಕಟ್ಟಿದ್ದ ಜೋಕಾಲಿ ಜೀಕಿದ ಶತಾಯುಶಿ ಸತ್ಯಮ್ಮ ಯುವಕ- ಯುವತಿಯರು ನಾಚುವಂತೆ ಜೋಕಾಲಿ ಆಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಯುವತಿಯರು ಮರಕ್ಕೆ ಜೋಕಾಲಿ ಕಟ್ಟಿ ಜೀಕುತ್ತಾರೆ. ಗ್ರಾಮದ ಶತಾಯುಸಿ ಸತ್ಯಮ್ಮ ನಾನೇನು ಕಡಿಮೆ ಇಲ್ಲ ಅಂತಾ ಯುವತಿಯರೊಂದಿಗೆ ಜೋಕಾಲಿ ಜೀಕಿದ್ದಾರೆ. ಅಜ್ಜಿಗೆ ಬೈರಾಪೂರ ಗ್ರಾಮದ ಯುವಕರ ಸಾತ್ ನೀಡಿದ್ದಾರೆ. ಈಗಲೂ ಮನೆಯ ಸಣ್ಣ ಪುಟ್ಟ ಕೆಲಸಕ್ಕೆ ಅಜ್ಜಿ ಸಾತ್ ಕೊಡ್ತಾರಂತೆ. ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtu.be/KhqXgS6dndo

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 643