ಲಾಕ್ ಡೌನ್ ಸಹಾಯಧನ; ಕ್ಷೌರಿಕರು, ದೋಭಿಗಳು ಅರ್ಜಿ ಸಲ್ಲಿಕೆಗೆ ಆ.15ರ ವರೆಗೆ ಅವಕಾಶ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕೊಪ್ಪಳ:
ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ದೋಭಿ ಮತ್ತು ಕ್ಷೌರಿಕರಿಗೆ ಸಹಾಯಧನ ನೀಡಲು ರೂಪಿಸಿರುವ ಯೋಜನೆ ಅರ್ಜು ಸಲ್ಲಿಸಲು ಆ.15ರ ವರೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಮಿಕ ಮಂತ್ರಿ ಶಿವರಾಂ ಹೆಬ್ಬಾರ ಹೇಳಿದರು.
ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಗುರುವಾರ ಮಾತನಾಡಿ, ಉದ್ದೇಶಿತ ಯೋಜನೆಗೆ ನಿರೀಕ್ಷಿತ ಅರ್ಜಿ ಬಂದಿಲ್ಲ. ಈ ಕಾರಣಕ್ಕೆ ಮೂರನೇ ಬಾರಿಗೆ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಪಿಡಿಒಗಳು ಮತ್ತು ನಗರ, ಪಟ್ಟಣ ಪ್ರದೇಶದಲ್ಲಿ ಆಯಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕ್ಷೌರಿಕರು ಮತ್ತು ದೋಭಿಗಳ ಕುಟುಂಬಕ್ಕೆ ಸರ್ಟಿಫಿಕೇಟ್ ನೀಡಬಹುದು. ಅರ್ಜಿ ಸಲ್ಲಿಕೆಗೆ ಈ ದೃಢೀಕರಣ ಪತ್ರ ಲಗತ್ತಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 2329 ಕ್ಷೌರಿಕರು, 2297 ದೋಬಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕೋವಿಡ್ ಹೆರಿನಲ್ಲಿ ಅಧಿಕಾರಿಗಳು ಕಳ್ಳಾಟ ಆಡುವಂತಿಲ್ಲ. ಕೋವಿಡ್ ಜೊತೆ ನಾವು ಹೊಂದಿಕೊಂಡು ಕೆಲಸ ಮಾಡಬೇಕಿದೆ. ಕೋವಿಡ್ ‌ಇದೆ ಅಂತಾ ನೆಪ ಹೇಳುವ ಕಾಲ ಮುಗಿದು ಹೋಯ್ತು ಎಂದರು. ಸಂಸದ ಸಂಗಣ್ಣ ಕರಡಿ,‌ ಶಾಸಕರಾದ‌ ಅಮರೇಗೌಡ ಬಯ್ಯಾಪೂರ, ಬಸವರಾಜ ದಡೆಸುಗೂರ, ಡಿಸಿ ಎಸ್‌. ವಿಕಾಸ ಕಿಶೋರ, ಸಿಇಒ ರಘುನಂದನ ಮೂರ್ತಿ ಇದ್ದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 217