ನಾನು ಪ್ರಚಾರಕ್ಕಾಗಿ ಮಾತ್ರ ಹಿಂದೂ ಆಗಲ್ಲ; ಶಾಸಕ ಜೆ.ಎನ್.ಗಣೇಶ

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ಕಂಪ್ಲಿ
ನಾನೂ ಕೂಡ ಒಬ್ಬ ಹಿಂದೂ. ಕೇವಲ ಪ್ರಚಾರಕ್ಕಾಗಿ ಮಾತ್ರ ಹಿಂದು ಎಂದು ಹೇಳಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.

ಪಟ್ಟಣದ ಎಸ್.ಎನ್.ಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿ ತಾಲೂಕಿನ ವಿವಿಧ ಗ್ರಾಮದಲ್ಲಿ ಶಾಸಕ ಜೆ.ಎನ್.ಗಣೇಶ ಶಾಲೆ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಶುಕ್ರವಾರ ಮಾತನಾಡಿ, ಪರೋಕ್ಷವಾಗಿ ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು ಅವರಿಗೆ ಟಾಂಗ್ ನೀಡಿದರು. ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೆರಿಸಿದ ದಿನ ಕ್ಷೇತ್ರಕ್ಕೆ ಆಗಮಿಸಿದ್ದ ಮಾಜಿ ಶಾಸಕರು ಮಂದಿರ ಕೇವಲ ಹಿಂದೂಗಳಿಗೆ ಸೇರಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ರಾಮ ಮಂದಿರ ಎಲ್ಲರಿಗೂ ಸೇರಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೇವಲ ಪ್ರಚಾರಕ್ಕಾಗಿ ಹಿಂದೂ ಎಂದು ಹೇಳಿಕೊಂಡು ಓಡಾಡಬಾರದು ಎಂದರು.

ನಬಾರ್ಡ್ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣ ಆಗ್ತಿರೋ ಒಟ್ಟೂ 1.10 ಕೋಟಿ‌ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಒಟ್ಟೂ 10 ಶಾಲೆ ನಿರ್ಮಾಣಗೊಳ್ಳಲಿವೆ ಎಂದರು. ತಾಲೂಕು ಪಂಚಾಯತ್ ಸದಸ್ಯ ಓಬಳೇಶ ಮಾತನಾಡಿದರು. ತಾಪಂ ಸದಸ್ಯ ಕೆ.ಷಣ್ಮುಖಪ್ಪ, ಮುಖಂಡರಾದ ಎಂ.ಸುಧೀರ, ಕೆ.ಎಸ್.ಚಾಂದ್‍ಬಾಷ, ಭಟ್ಟ ಪ್ರಸಾದ್, ಉಸ್ಮಾನ್,ಎಲ್.ರಾಮನಾಯ್ಡು, ಬಿ.ರಮೇಶ್, ಮೌಲಾ, ಎಂ.ಮಹೇಶ್, ಕರಿಬಸವನಗೌಡ, ಸತ್ಯಪ್ಪ, ಕೆ.ಸುಧಾಕರ, ಮುಕ್ಕುಂದಿ ಮಮತಾ, ಎಂ.ಸಿ.ಮಾಯಪ್ಪ, ಇಸ್ಮಾಯಿಲ್ ಬೇಗ್, ಕೆ.ಸಿ.ಭೀಮಣ್ಣ, ವಿ.ಪಕ್ಕೀರಪ್ಪ, ಮುಖ್ಯ ಶಿಕ್ಷಕ ವೀರೇಶ್, ದೇವಪ್ಪ, ರಾಜಪ್ಪ, ಸಿ.ವಿರುಪಣ್ಣ, ಶರಣಗೌಡ, ಗವಿಸಿದ್ದಪ್ಪ ರಾಥೋಡ್ ಸೇರಿ ಇತರರು ಇದ್ದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 104
error: Content is protected !!