ತುಂಗಭದ್ರ ಡ್ಯಾಂ ಅರ್ಧ ಭರ್ತಿ; ಸಂಜೆ 1 ಲಕ್ಷ ಕ್ಯೂಸೆಕ್ ಒಳಹರಿವು ದಾಖಲು

ಈ ಸುದ್ದಿ ಹಂಚಿಕೊಳ್ಳಿ:

ವಿಜಯಪರ್ವ ಸುದ್ದಿ, ‌ಹೊಸಪೇಟೆ/ಕೊಪ್ಪಳ

ತುಂಗಭದ್ರ ಜಲಾಶಯಕ್ಕೆ ಇಂದು ಸಂಜೆ ಕೂಡ ಭಾರೀ ಪ್ರಮಾಣದ‌ ಒಳಹರಿವು ದಾಖಲಾಗುತ್ತಿದೆ. ಸಂಜೆ ವೇಳೆಗೆ ಒಳಹರಿವಿನ ಪ್ರಮಾಣ ಸುಮಾರು 90 ಸಾವಿರ ಕ್ಯೂಸೆಕ್ ನಷ್ಟಿದ್ದು, ‌ಬೆಳಗಿನ ವೇಳಗೆ‌ ದಾಖಲೆಯ 1 ಲಕ್ಷ ಕ್ಯೂಸೆಕ್ ಗೂ ಹೆಚ್ಚು ಒಳಹರಿವು ದಾಖಲಾಗುವ ಸಾಧ್ಯತೆ ಇದೆ. ಇದು ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಹೆಚ್ಚಿಸಿದೆ.

ಇಂದು ಬೆಳಗ್ಗೆ 8ಕ್ಕೆ ತುಂಗಭದ್ರ ಮಂಡಳಿ ನೀಡಿದ ಅಧಿಕೃತ ಪ್ರಕಟಣೆಯಂತೆ 81 ಸಾವಿರ ಕ್ಯೂಸೆಕ್ ಒಳಹರಿವಿದೆ. ಆದರೆ,‌‌ ಸಂಜೆ ವೇಳೆಗೆ ಒಳ‌ ಹರಿವಿನ ಪ್ರಮಾಣ ಮತ್ತಷ್ಟು ‌ಹೆಚ್ಚಾಗಿದೆ‌. ಈ ಹಿನ್ನೆಲೆಯಲ್ಲಿ ಬೆಳಗಿನ ವೇಳೆಗೆ(ಆಗಸ್ಟ್ 8ಕ್ಕೆ) ಡ್ಯಾಂನಲ್ಲಿ 50 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಲಿದೆ ಎಂದು ಟಿಬಿ‌‌ ಡ್ಯಾಂನ ಅಧಿಕಾರಿಗಳು ವಿಜಯಪರ್ವ ‌ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ತುಂಗಭದ್ರ ಡ್ಯಾಂನ ಜಲಾನಯನ ಪ್ರದೇಶವಾಗಿರುವ ಶಿವಮೊಗ್ಗ, ಭದ್ರಾವತಿ‌ ಸೇರಿ ವಿವಿಧ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ಶಿವಮೊಗ್ಗಸ ಭದ್ರಾ ಜಲಾಶಯವೂ ಭರ್ತಿಯಾಗಿದ್ದು, ಗೇಟ್ ಮೂಲಕ ನೀರು ಬಿಡಲಾಗುತ್ತಿದೆ. ಈ ಕಾರಣಕ್ಕೆ ತುಂಗಭದ್ರಾ ನದಿ ದುಮ್ಮಿಕ್ಕಿ ಹರಿಯುತ್ತಿದ್ದು, ಡ್ಯಾಂಗೆ ದೊಡ್ಡ ಪ್ರಮಾಣದ ಒಳಹರಿವು ದಾಖಲಾಗುತ್ತಿದೆ.

ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಐದಾರು ದಿನ ಮುಂಚಿತವಾಗಿಯೇ ದೊಡ್ಡ ಮಟ್ಟದ ಒಳಹರಿವು ದಾಖಲಾಗುತ್ತಿದೆ. ಕಳೆದ ವರ್ಷದ ಆಗಸ್ಟ್ ,7 ರಂದು ಒಳ ಹರಿವು‌ ಕೇವಲ 40781 ಕ್ಯೂಸೆಕ್ ಇದ್ದರೆ, ಈ ಬಾರಿ‌ 81218 ಕ್ಯೂಸೆಕ್ ಒಳ ಹರಿವಿದೆ.

15+
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 2477
error: Content is protected !!