ಅಪ್ ಡೇಟ್ ಆಗದಿದ್ದರೆ ಔಟ್ ಡೇಟ್ ಆಗ್ತಿವಿ: ಸವಡಿ

ಈ ಸುದ್ದಿ ಹಂಚಿಕೊಳ್ಳಿ:

ಕೊಪ್ಪಳ: ಪತ್ರಕರ್ತರು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದು, ಉತ್ಪಾದಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಕೋವಿಡ್ ನಂತರ ಬದಲಾದ ಸನ್ನಿವೇಶದಲ್ಲಿ ಬದುಕು ದುಸ್ಥರವಾಗಲಿದೆ ಎಂದು ಹಿರಿಯ ಪತ್ರಕರ್ತ ಚಾಮರಾಜ ಸವಡಿ ಹೇಳಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್‌ನಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊರೊನಾ ಸಂದರ್ಭದಲ್ಲಿ ಪತ್ರಕರ್ತರ ಸವಾಲು ಮತ್ತು ಸಾಧನೆ ಕುರಿತು ಅವರು ಉಪನ್ಯಾಸ ನೀಡಿದರು.
ಸಂಸ್ಥೆ ಹೇಳಿದ ಕೆಲಸಗಳನ್ನು ಮಾಡುವುದು ವೃತ್ತಿಪರತೆ ಅಲ್ಲ.
ಸಂಸ್ಥೆಗೆ ಲಾಭ ಬೇಕು, ನಮಗೆ ಕೆಲಸ ಬೇಕು‌ ಈ ನಡುವೆ ಆದರ್ಶಗಳನ್ನು ಪಾಲಿಸಲಾಗುತ್ತಾ ಅನ್ನೋದು ಸದ್ಯದ ಪ್ರಶ್ನೆ. ಇದು ಬೆಳವಣಿಗೆಯ ಒಂದು ಭಾಗವಷ್ಟೇ; ಈ ಸವಾಲನ್ನ ಸ್ವೀಕರಿಸಿ ವರದಿಗಾರ ಬದುಕಬೇಕು, ಬೆಳೆಯಬೇಕು ಎಂದರು.

ಪತ್ರಕರ್ತರು ದಿನದ 4-5 ಗಂಟೆ ಕೆಲಸ ಮಾಡಿದ ಬಳಿಕ ಉಳಿದ ಸಮಯವನ್ನು ಏನು ಮಾಡುತ್ತೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಿ. ಉಳಿದ ಸಮಯವನ್ನು ಹೊಸತನ್ನು ಕಲಿಯಲು ಬಳಸಿಕೊಳ್ಳಬೇಕಿದೆ ಎಂದರು. ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸಂತೋಷ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರಹ. ಹಿರಿಯ ಪತ್ರಕರ್ತ, ಹೋರಾಟಗಾರ ಬಸವರಾಜ ಶೀಲವಂತರ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಸಾಹಿತಿ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು.
ಶರಣಬಸವ ಹುಲಿಹೈದರ್ ನಿರೂಪಿಸಿದರು. ಮೌನೇಶ್ ಬಡಿಗೇರ ಸ್ವಾಗತಿಸಿದರು. ಮಾರುತಿ ಕಟ್ಟಮನಿ ವಂದಿಸಿದರು.

0
ಈ ಸುದ್ದಿ ಹಂಚಿಕೊಳ್ಳಿ:
ವೀಕ್ಷಣೆಗಳು: 65