ಕೃಷಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಕೋವಿಡ್19 ದೃಢ

ವಿಜಯಪರ್ವ ಸುದ್ದಿ, ಕೊಪ್ಪಳ:
ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಕೋವಿಡ್‌19 ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಸ್ವತಃ ಸಚಿವರೇ ಟ್ವಿಟ್ ಮಾಡಿದ್ದಾರೆ. ಜುಲೈ 31ರ ರಾತ್ರಿ 10.13ಕ್ಕೆ ಟ್ವಿಟ್ ಮಾಡಿರುವ ಅವರು, ನನಗೆ ಕೋವಿಡ್19 ದೃಢಪಟ್ಟಿದೆ. ಬೆಂಗಳೂರಿನ ನನ್ನ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ. ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ನನ್ನ ಜೊತೆ ಆಗಮಿಸಿದ ಐದು ಜನ ಸಿಬ್ಬಂದಿಗಳಿಗೂ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಟ್ವಿಟ್ ಮಾಡಿದ್ದಾರೆ.…
..ಮುಂದೆ ಓದಿ

ರಾಜ್ಯಾದ್ಯಂತ ಗುಟ್ಕಾ ನಿಷೇಧಿಸಿ; ಸರ್ಕಾರಕ್ಕೆ ರಾಜ್ಯಪಾಲರ ಸಲಹೆ

ವಿಜಯಪರ್ವ ಸುದ್ದಿ, ಬೆಂಗಳೂರು:
ರಾಜ್ಯದಲ್ಲಿ ತಂಬಾಕು ಉತ್ಪನ್ನಗಳಾದ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವುದು ಒಳ್ಳೆಯದು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಸರ್ಕಾರಕ್ಕೆ ಸಲಹೆ‌ ನೀಡಿದ್ದಾರೆ. ರಾಜಭವನದಲ್ಲಿ ತಮ್ಮನ್ನು ಭೇಟಿಯಾದ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯಪಾಲರು ಶುಕ್ರವಾರ ಸಲಹೆ ನೀಡಿದ್ದಾರೆ.
ಗುಟ್ಕಾ ಮತ್ತು ಪಾನ್ ಮಸಾಲಾ ಪ್ಯಾಕೇಟ್ ನಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವ ಪ್ರಕರಣ ಕಂಡು ಬಂದಿವೆ.…
..ಮುಂದೆ ಓದಿ

ಚನ್ನರಾಯಪಟ್ಟಣ ಪಿಎಸ್ಐ ಕಿರಣ್ ಕುಮಾರ ಆತ್ಮಹತ್ಯೆ

ವಿಜಯಪರ್ವ ಸುದ್ದಿ,‌ ಹಾಸನ:
ಜಿಲ್ಲೆಯ ಚನ್ನರಾಯಪಟ್ಟಣ ಪಿಎಸ್ಐ ಕಿರಣ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದು,‌ ಪೊಲೀಸ್ ಇಲಾಖೆಯಲ್ಲಿ ತಲ್ಲಣ‌ ಸೃಷ್ಠಿಯಾಗಿದೆ. ಕಳೆದ 2 ದಿನಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ನಡೆದ ಜೋಡಿ ಕೊಲೆಯ ತನಿಖೆ ಕೈಗೊಂಡಿದ್ದ ಪಿಎಸ್ಐ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದರು. ಬೆಳಗ್ಗೆಯೂ ಠಾಣೆಗೆ ಆಗಮಿಸಿ, ನಂತರ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ, ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆ ಕರತಂದರೂ ಫಲಕಾರಿಯಾಗಿಲ್ಲ.…
..ಮುಂದೆ ಓದಿ

ಎಸ್ಪಿ ಸ್ವಿಂಗ್ ಬಾಲ್; ಕೊಪ್ಪಳ ಡಿವೈಎಸ್ಪಿ, ಇಬ್ಬರು ಪಿಎಸ್ಐಗಳ ವಾಹನ ಚಾಲಕರ ವರ್ಗಾವಣೆ

ವಿಜಯಪರ್ವ ಸುದ್ದಿ, ಕೊಪ್ಪಳ:
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ನಡುವಿನ ಶೀತಲ ಸಮರ ಮುಂದುವರೆದಿದೆ. ಸಮರದ ಭಾಗವಾಗಿ ಮೂವರು ಅಧಿಕಾರಿಗಳ ಜೀಪ್ ಡ್ರೈವರ್ ಗಳು ವರ್ಗಾವಣೆಗೊಂದಿದ್ದಾರೆ. ಕೊಪ್ಪಳ ಡಿವೈಎಸ್ಪಿ ವಾಹನ ಚಾಲಕ ಚಂದ್ರಶೇಖರ್ ದಂಡಿನ, ಮುನಿರಾಬಾದ್ ಪಿಎಸ್ಐ ವಾಹನ ಚಾಲಕ ಶಿವಕುಮಾರ ಹಾಗೂ ಕೊಪ್ಪಳ ಗ್ರಾಮೀಣ ಠಾಣೆ ಪಿಎಸ್ಐ ವಾಹನ ಚಾಲಕ ಮಹಾಂತೇಶ ಕಾಟಾಪೂರ ಅವರನ್ನು ಡಿಎಆರ್ ಘಟಕದ ವಾಹನ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.…
..ಮುಂದೆ ಓದಿ

ಕಾರ್ಮಿಕ ಮಂತ್ರಿ ಶಿವರಾಂ ಹೆಬ್ಬಾರಿಗೆ ವಿಪ್ರ ಸಮಾಜದ ಸನ್ಮಾನ

ವಿಜಯಪರ್ವ ಸುದ್ದಿ,‌ ಕೊಪ್ಪಳ:
ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕಾರ್ಮಿಕ ಮಂತ್ರಿ ಶಿವರಾಂ ಹೆಬ್ಬಾರ ಅವರಿಗೆ ಬ್ರಾಹ್ಮಣ ಸಮಾಜದಿಂದ ಸನ್ಮಾನಿಸಲಾಯಿತು. ಕಾರ್ಮಿಕ ಇಲಾಖೆ ಪ್ರಗತಿ ಪ್ರರಿಶೀಲನೆಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಮಂತ್ರಿ, ರಾಘವೇಂದ್ರಮಠಕ್ಕೆ ಭೇಟಿ ನೀಡಿದ್ದರು. ಬಿಜೆಪಿ ಸರ್ಕಾರದಿಂದ ಸಮಾಜಕ್ಕೆ ಸಾಕಷ್ಟು ಅನುಕೂಲಗಳಾಗಿವೆ ಎಂದು ಸಮಾಜದ ಮುಖಂಡರು ಮಂತ್ರಿಗಳಿಗೆ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಮಂತ್ರಿ ಶಿವರಾಂ ಹೆಬ್ಬಾರ, ಕೇಂದ್ರ ಸರ್ಕಾರ ಬ್ರಾಹ್ಮಣರಿಗೆ 10 ಕೋಟಿ ಅನುದಾನ ನೀಡಿದೆ.… ..ಮುಂದೆ ಓದಿ

ನಿಗಮ/ಮಂಡಳಿ‌ ಅಧ್ಯಕ್ಷರ ನೇಮಕ; ಕೊಪ್ಪಳಕ್ಕೆ ಕೊಟ್ಟು ಕಿತ್ತುಕೊಂಡ ಸರ್ಕಾರ

ವಿಜಯಪರ್ವ ಸುದ್ದಿ,‌ ಕೊಪ್ಪಳ:
ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೆಸುಗೂರ ಹಾಗೂ ಗಂಗಾವತಿ ‌ಶಾಸಕ ಪರಣ್ಣ ಮುನವಳ್ಳಿಗೆ ನೀಡಿದ್ದ ಅಧ್ಯಕ್ಷ ಸ್ಥಾನವನ್ನು ಸರ್ಕಾರ ರದ್ದು ಮಾಡಿದೆ. ಒಟ್ಟು 24 ನಿಗಮ/ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದ, ಸರ್ಕಾರ ಕೊಪ್ಪಳಕ್ಕೆ 2 ಸ್ಥಾನ ನೀಡಿ, ಕಿತ್ತುಕೊಂಡಿದೆ. ಕನಕಗಿರಿ ಶಾಸಕ ಬಸವರಾಜ ದಡೆಸುಗೂರರಿಗೆ ಸಮಾಜ ಕಲ್ಯಾಣ ಮಂಡಳಿ, ಪರಣ್ಣ ಮುನವಳ್ಳಿ ಅವರಿಗೆ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು.…
..ಮುಂದೆ ಓದಿ

ನಿಗಮ/ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ; ಕೊಪ್ಪಳ ಜಿಲ್ಲೆಗೆ 2 ಸ್ಥಾನ

ವಿಜಯಪರ್ವ ಸುದ್ದಿ, ಕೊಪ್ಪಳ:
ರಾಜ್ಯ ಸರ್ಕಾರ ವಿವಿಧ ‌ನಿಗಮ/ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕಕಾತಿ ಮಾಡಿ ಆದೇಶಿಸಿದೆ. ಒಟ್ಟೂ 24 ಸ್ಥಾನಗಳಿಗೆ ನೇಮಕಾತಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಇಬ್ಬರು ಶಾಸಕರಿಗೆ ಅವಕಾಶ ಸಿಕ್ಕಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ಕನಕಗಿರಿ ಶಾಸಕ ಬಸವರಾಜ್ ದಡೆಸೂಗೂರು ಅವರನ್ನು ಸರ್ಕಾರ ನೇಮಕ ಮಾಡಿದೆ.…
..ಮುಂದೆ ಓದಿ

ಯೂರಿಯಾ ದುಪ್ಪಟ್ಟು ಬೆಲೆಗೆ ಮಾರಾಟ ಖಂಡಿಸಿ ರೈತರ ಪ್ರತಿಭಟನೆ

ವಿಜಯಪರ್ವ ಸುದ್ದಿ, ಕನಕಗಿರಿ:
ಯೂರಿಯಾ ರಸಗೊಬ್ಬರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ಕ್ರಮ ಖಂಡಿಸಿ ಕನಕಗಿರಿ ತಹಸೀಲ್ದಾರ್ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಪ್ರತಿ ಒಂದು ಚೀಲ ಯೂರಿಯಾ ರಸ ಗೊಬ್ಬರಕ್ಕೆ ಸರ್ಕಾರ 265 ರೂಪಾಯಿ ದರ ನಿಗದಿ ಮಾಡಿದೆ.
ಆದರೆ, ವ್ಯಾಪರಿಗಳು ಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿಸಿ, ಕನಿಷ್ಠ 425 ರೂಪಾಯಿಗೆ ಚೀಲದಂತೆ ಮಾರಾಟ ಮಾಡುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು.…
..ಮುಂದೆ ಓದಿ

ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸ ಇಲ್ಲ: ಕೃಷಿ ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ:
ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ವಿನಾಃಕಾರಣ ಲೆಕ್ಕ, ಲೆಕ್ಕ ಎನ್ನುತ್ತಿದ್ದಾರೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದರು.‌
ಆರೋಗ್ಯ ಇಲಾಖೆಯಲ್ಲಿನ ಅವ್ಯವಹಾರದ ಬಗ್ಗೆ ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ದೂರು ನೀಡುತ್ತಿರುವ ವಿಚಾರವಾಗಿ ಪತ್ರಕರ್ತರು ಕೇಳಿ ಪ್ರಶ್ನೆಗೆ ಉತ್ತರಿಸಿ, ಐವರು ಸಚಿವರು ಕುಳಿತು ಆರೋಗ್ಯ ಇಲಾಖೆಯ ಉಪಕರಣ ಖರೀದಿ ಬಗ್ಗೆ ಮಾಹಿತಿ ನೀಡಿದ್ರೂ, ಲೆಕ್ಕ ಲೆಕ್ಕ ಲೆಕ್ಕ ಎನ್ನುತ್ತಿದ್ದಾರೆ.…
..ಮುಂದೆ ಓದಿ

ಬರುವ ಭಾನುವಾರ ಲಾಕ್ ಡೌನ್ ಇರಲ್ಲ?

ವಿಜಯಪರ್ವ ಸುದ್ದಿ, ಬೆಂಗಳೂರು:
ಕೋವಿಡ್19 ವೈರಸ್​ ಹರಡುವಿಕೆ ತಡೆಯಲು ಸಂಡೇ ಲಾಕ್ ಡೌನ್ ಮೊರೆ ಹೋಗಿದ್ದ ರಾಜ್ಯ ಸರ್ಕಾರ ವೀಕೆಂಡ್​ ಲಾಕ್​ಡೌನ್​ಘೋಷಿಸಿತ್ತು. ಆದ್ರೆ, ರಾಜ್ಯ ಸರ್ಕಾರ ಮುಂದಿನ ಭಾನುವಾರದಿಂದ ಲಾಕ್​ಡೌನ್​ ತೆರವುಗೊಳಿಸುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಲಾಕ್​ಡೌನ್​ ಬೇಡವೇ ಬೇಡ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಹೀಗಾಗಿ ಇದೇ ಭಾನುವಾರ ಲಾಕ್​ಡೌನ್​ ಕೊನೆಯಾಗಲಿದೆ. ಮುಂದಿನ ಭಾನುವಾರದಿಂದ ಜನರು ಸ್ವತಂತ್ರವಾಗಿ ಓಡಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.…
..ಮುಂದೆ ಓದಿ