ಜೋಕಾಲಿ ಜೀಕಿದ 110ರ ಹರೆಯದ ಅಜ್ಜಿ; ವೀಡಿಯೋ ವೈರಲ್

ವಿಜಯಪರ್ವ ಸುದ್ದಿ, ಕೊಪ್ಪಳ:
ತಾಲೂಕಿನ ಬೈರಾಪೂರ ಗ್ರಾಮದಲ್ಲಿ ಬರೋಬ್ಬರಿ 110‌ ವಯಸ್ಸಿನ ಅಜ್ಜಿಯೊಬ್ಬರು ಜೋಕಾಲಿ ಜೀಕಿದ್ದಾರೆ. ನಾಗರ ಪಂಚಮಿ ಹಿನ್ನೆಲೆ ಮರಕ್ಕೆ ಕಟ್ಟಿದ್ದ ಜೋಕಾಲಿ ಜೀಕಿದ ಶತಾಯುಶಿ ಸತ್ಯಮ್ಮ ಯುವಕ- ಯುವತಿಯರು ನಾಚುವಂತೆ ಜೋಕಾಲಿ ಆಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಯುವತಿಯರು ಮರಕ್ಕೆ ಜೋಕಾಲಿ ಕಟ್ಟಿ ಜೀಕುತ್ತಾರೆ. ಗ್ರಾಮದ ಶತಾಯುಸಿ ಸತ್ಯಮ್ಮ ನಾನೇನು ಕಡಿಮೆ ಇಲ್ಲ ಅಂತಾ ಯುವತಿಯರೊಂದಿಗೆ ಜೋಕಾಲಿ ಜೀಕಿದ್ದಾರೆ.…
..ಮುಂದೆ ಓದಿ

ಸರ್ಕಾರ, ಸಚಿವರು ಅವ್ಯವಹಾರ ಮಾಡಿಲ್ಲವೆಂದರೆ ತನಿಖೆ ಏಕೆ ಬೇಡ?; ಸಿದ್ದರಾಮಯ್ಯ ಪ್ರಶ್ನೆ

ವಿಜಯಪರ್ವ ಸುದ್ದಿ ಬೆಂಗಳೂರು:
ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸರ್ಕಾರ ಅಕ್ರಮ ಮಾಡಿಲ್ಲ, ಸಚಿವರು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಇದು ಭಂಡತನದ ಪರಮಾವಧಿ ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಖರೀದಿ ಅವ್ಯವಹಾರದ 14 ದಾಖಲೆಗಳನ್ನು ಕೊಟ್ಟಿದ್ದೇವೆ.…
..ಮುಂದೆ ಓದಿ

ಶಿವರಾಜ ತಂಗಡಗಿ ಸತ್ಯಹರೀಶ್ವಂದ್ರ; ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ವ್ಯಂಗ್ಯ

ವಿಜಯಪರ್ವ ಸುದ್ದಿ, ‌ಕೊಪ್ಪಳ:
ಶಿವರಾಜ ತಂಗಡಗಿ ಅಂತಾ ಪ್ರಾಮಾಣಿಕ, ಸತ್ಯಹರೀಶ್ಚಂದ್ರ ಮತ್ತು ಜನಪರ ಕಾಳಜಿ ಇರುವ ವ್ಯಕ್ತಿಯನ್ನು ಈ ಜಗತ್ತು ನೋಡಿಯೇ ಇಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.
ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳ ಹೆಸರಿನಲ್ಲಿ ಪೊಲೀಸರು‌ ಲೂಟಿ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಕ್ಕೆ ತಿರುಗೇಟು ನೀಡಿದರು.…
..ಮುಂದೆ ಓದಿ

ಕರ್ನಾಟಕ; ಕೋವಿಡ್ 19ಗೆ ಇಂದು 1147 ಸಾವು ~20757 ಬಿಡುಗಡೆ

ವಿಜಯಪರ್ವ ಸುದ್ದಿ, ಕೊಪ್ಪಳ:

ಬೆಂಗಳೂರು : ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಇಂದು 55115 ಮುಟ್ಟಿದೆ. ಇಂದು ಒಂದೇ ದಿನ 3693 ಪ್ರಕರಣಗಳು ವರದಿಯಾಗಿದ್ದು 115ಜನ ಸಾವನ್ನಪ್ಪಿದ್ದಾರೆ. ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 1147ಕ್ಕೆ ಮುಟ್ಟಿದೆ. 568 ಜನ ಐಸಿಯುವಿನಲ್ಲಿ ದಾಖಲಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ ತಿಳಿಸಿದೆ.

ಇಂದು ಬೆಂಗಳೂರಿನಲ್ಲಿ 2208 ಪ್ರಕರಣಗಳು ವರದಿಯಾಗಿವೆ.… ..ಮುಂದೆ ಓದಿ

ಕೆಲಸ ಬಹಿಷ್ಕರಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ವಿಜಯ ಪರ್ವ ಸುದ್ದಿ,ಕೊಪ್ಪಳ:

ಕನಿಷ್ಠ 12 ಸಾವಿರ ರೂಪಾಯಿ ಗೌರವ ಧನ ನೀಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕರೆ ನೀಡಿರುವ ಪ್ರತಿಭಟನೆಗೆ ಕೊಪ್ಪಳದಲ್ಲಿ ಬೆಂಬಲ ವ್ಯಕ್ತವಾಗಿದೆ.ಕೊಪ್ಪಳ ಜಿಲ್ಲೆಯ ಆಶಾ ಕಾರ್ಯಕರ್ತೆಯರೂ ಇಂದಿನಿಂದ ಕೋವಿಡ್ 19 ವಿಶೇಷ ಕೆಲಸ‌ ಸೇರಿ ತಮ್ಮ ಸಾಮಾನ್ಯ ಕರ್ತವ್ಯವನ್ನು ಬಹಿಷ್ಕರಿಸಿ ಮುಷ್ಕರ ಆರಂಭಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಸಂಘಟನೆಯ ಕೆಲ ಮುಖಂಡರು ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿನ ಡಿಎಚ್ ಒ ಕಚೇರಿಗೆ ಆಗಮಿಸಿ ತಾವು ಕರ್ತವ್ಯಕ್ಕೆ ಹಾಜರಾಗದಿರುವ ಬಗ್ಗೆ ಮಾಹಿತಿ ನೀಡಿದರು.… ..ಮುಂದೆ ಓದಿ

ಕೋವಿಡ್-19ಗೆ ಕೊಪ್ಪಳದಲ್ಲಿ 2ನೇ ಸಾವು

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-19ಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕರೋನದಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಕೊಪ್ಪಳ ನಗರದ ದಿವಟರ್ ಸರ್ಕಲ್ ಪ್ರದೇಶದ ನಿವಾಸಿಯಾಗಿದ್ದ 49 ವರ್ಷದ ಸೋಂಕಿತ ಉಸಿರಾಟದ ತೊಂದರೆ (SARI) ಯಿಂದ ಬಳಲುತ್ತಿದ್ದ. ಜೂನ್ 28ರಂದು ಸ್ವ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಜೂನ್ 30ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. ಸೋಂಕಿತ ಕಳೆದ ಎರಡು ದಿನದಿಂದ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.…
..ಮುಂದೆ ಓದಿ

ಅಧಿಕಾರ ವಹಿಸಿಕೊಂಡ ಡಿಸಿ ಎಸ್.ವಿಕಾಸ ಕಿಶೋರ

ಕೊಪ್ಪಳ: ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಎಸ್. ವಿಕಾಸ ಕಿಶೋರ ಬುಧವಾರ ಅಧಿಕಾರ ವಹಿಸಿಕೊಂಡರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಎಸ್. ವಿಕಾಸ ಕಿಶೋರ್ ಅವರು ಇಂದು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸಿಬ್ಬಂದಿ ಇದ್ದರು.… ..ಮುಂದೆ ಓದಿ

ಅಪ್ ಡೇಟ್ ಆಗದಿದ್ದರೆ ಔಟ್ ಡೇಟ್ ಆಗ್ತಿವಿ: ಸವಡಿ

ಕೊಪ್ಪಳ: ಪತ್ರಕರ್ತರು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದು, ಉತ್ಪಾದಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಕೋವಿಡ್ ನಂತರ ಬದಲಾದ ಸನ್ನಿವೇಶದಲ್ಲಿ ಬದುಕು ದುಸ್ಥರವಾಗಲಿದೆ ಎಂದು ಹಿರಿಯ ಪತ್ರಕರ್ತ ಚಾಮರಾಜ ಸವಡಿ ಹೇಳಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್‌ನಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊರೊನಾ ಸಂದರ್ಭದಲ್ಲಿ ಪತ್ರಕರ್ತರ ಸವಾಲು ಮತ್ತು ಸಾಧನೆ ಕುರಿತು ಅವರು ಉಪನ್ಯಾಸ ನೀಡಿದರು.… ..ಮುಂದೆ ಓದಿ

ಬೆಂಗಳೂರಿನಲ್ಲಿ ಕೋವಿಡ್‌ ಅಟ್ಟಹಾಸ, ತಜ್ಞರ ತುರ್ತು ಸಭೆ ಕರೆದ ಬಿಎಸ್‌ವೈ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಾಗಿ ಚರ್ಚೆ ನಡೆಸಲು ತಜ್ಞರ ತುರ್ತು ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಕರೆದಿದ್ದಾರೆ.

ಬುಧವಾರ ಮಧ್ಯಾಹ್ಮ 2 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.… ..ಮುಂದೆ ಓದಿ