ಕೊಪ್ಪಳ ಜಿಲ್ಲಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ; ಪ್ರತ್ಯೇಕ‌ ಪ್ರಕರಣ ಬಾಲಕಿ, 2 ಕುರಿ ಸಾವು

ವಿಜಯಪರ್ವ ‌ಸುದ್ದಿ, ಯಲಬುರ್ಗಾ
ರಾಜ್ಯ ‌ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕೊಪ್ಪಳ ಜಿಲ್ಲಾದ್ಯಂತ ಸೋಮವಾರ ತಡರಾತ್ರಿಯಿಂದ ಮಳೆರಾಯನ ಅಬ್ಬರ ಆರಂಭವಾಗಿದೆ. ಇನ್ನು ಮಂಗಳವಾರ (ಅ.20)ವೂ ಗುಡುಗು- ಸಿಡಿಲು ಸಹಿತ ಮಳೆಯಾಗಿದ್ದು, ಒಬ್ಬ ಬಾಲಕಿ ಮೃತಪಟ್ಟಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 2 ಕುರಿ ಸತ್ತಿವೆ.

ಯಲಬುರ್ಗಾ ತಾಲೂಕು ಗೆದಗೇರಿ ತಾಂಡಾದ ರೂಪಾ ಚೌವ್ಹಾಣ(14) ಸಿಡಿಲು ಬಡಿದು ಮೃತಪಟ್ಟಿದ್ದಾಳೆ. 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದಾಗ ಸಿಡಿಲು‌ ಬಡಿದಿದೆ.… ..ಮುಂದೆ ಓದಿ

6 ತಿಂಗಳ ನಾಟಕೀಯ ಬೆಳವಣಿಗೆಗೆ ತೆರೆ; ಕೊಪ್ಪಳ‌ ಜಿಪಂ ಅಧ್ಯಕ್ಷರ ಆಯ್ಕೆ

ವಿಜಯಪರ್ವ ‌ಸುದ್ದಿ, ಕೊಪ್ಪಳ
ಇಲ್ಲಿನ ಜಿಲ್ಲಾ ಪಂಚಾಯತ್ ಅಧ್ಯಕ್ಷ‌‌ ಸ್ಥಾನಕ್ಕೆ ಸಂಬಂಧಿಸಿದಂತೆ ಕಳೆದ 6 ತಿಂಗಳಿನಿಂದ ನಡೆದ ನಾಟಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ. ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ರಾಜಶೇಖರ ‌ಹಿಟ್ನಾಳ 2ನೇ‌ ಬಾರಿಗೆ ಆಯ್ಕೆ ಆಗಿದ್ದಾರೆ.

ಈ ಹಿಂದೆ‌ ಅಧ್ಯಕ್ಷರಾಗಿದ್ದ ವಿಶ್ವನಾಥ ರೆಡ್ಡಿ ವಿರುದ್ಧ ಸ್ವಪಕ್ಷೀಯರೇ ಅವಿಶ್ವಾಸ ಮಂಡಿಸಿದ್ದರಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ರಾಜಶೇಖರ ಹಿಟ್ನಾಳ ಪರ 23 ಸದಸ್ಯರು ಕೈ ಎತ್ತಿದ್ದರಿಂದ ಮತ್ತೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.… ..ಮುಂದೆ ಓದಿ

ಉತ್ತರ ಕರ್ನಾಟಕದಲ್ಲಿ ಮತ್ತೇ ಗುಡುಗು ಸಹಿತ ಮಳೆ ಮುನ್ಸೂಚನೆ; ಪ್ರವಾಹ ಭೀತಿ

ವಿಜಯಪರ್ವ ಸುದ್ದಿ, ಬೆಂಗಳೂರು
ಉತ್ತರಕ್ಕೆ ಕರ್ನಾಟಕ ಮತ್ತು ಕರಾವಳಿ ಭಾಗದ ಕೆಲ ಜಿಲ್ಲೆಯಲ್ಲಿ ಮತ್ತೇ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಕ್ಟೋಬರ್ 21 ಮತ್ತು 22 ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರವಾಹ ಭೀತಿ ಎದುರಾಗಲಿದೆ.‌ ಅ.21 ಮತ್ತು 22 ರಂದು ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಹೆಲ್ಲೋ(ಹಳದಿ) ಅಲರ್ಟ್ ಘೋಷಣೆಯಾಗಿದೆ.… ..ಮುಂದೆ ಓದಿ

ರಾಡ್ ನಿಂದ ದಂಪತಿ ಮೇಲೆ ಹಲ್ಲೆ ಪ್ರಕರಣ; ತನ್ನ ಸೀನಿಯರ್ ಮದುವೆ ಆಗಿದ್ದ ವಿನೋದ ಕೊಲೆಗೆ ಕಾರಣ?

ವಿಜಯಪರ್ವ ಸುದ್ದಿ, ಕಾರಟಗಿ
ಜಿಲ್ಲೆಯ ಕಾರಟಗಿ ನಗರದಲ್ಲಿ ದಂಪತಿ ಮೇಲೆ‌ ರಾಡ್ ನಿಂದ ಹಲ್ಲೆ ಮಾಡಿ ಮಹಿಳೆ ಹತ್ಯೆ ಮಾಡಿದ್ದ ಪ್ರಕರಣ ಮರ್ಯಾದಾ ಹತ್ಯೆ ಎಂಬುದು ಬಹುತೇಕ ದೃಢವಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ 31 ವರ್ಷದ ವಿನೋದ ತನಗಿಂತ‌ ವಯಸ್ಸಿನಲ್ಲಿ‌ ಸೀನಿಯರ್ ಆಗಿದ್ದ 34 ವರ್ಷದ ತ್ರಿವೇಣಿಯನ್ನು 7 ತಿಂಗಳ ಹಿಂದೆ ಮದುವೆಯಾಗಿದ್ದ.‌‌‌ ಅಂತರ್ ಜಾತಿ ಎಂಬ ಕಾರಣಕ್ಕೆ ಮದುವೆಗೆ ವಿರೋಧಿಸಿದ್ದ ಮೃತ‌ ತ್ರಿವೇಣಿ ಸಹೋದರ ಹತ್ಯೆ ಮಾಡಿದ್ದಾನೆ‌ ಎಂದು ತಿಳಿದು ಬಂದಿದೆ.…
..ಮುಂದೆ ಓದಿ

ರಾಡ್ ನಿಂದ ದಂಪತಿ ಮೇಲೆ ಹಲ್ಲೆ; ಪತ್ನಿ ಸ್ಥಳದಲ್ಲೇ ಸಾವು, ಪತಿ ಸ್ಥಿತಿ ಚಿಂತಾಜನಕ- ಮರ್ಯಾದಾ ಹತ್ಯೆ ಶಂಕೆ?

ವಿಜಯಪರ್ವ ಸುದ್ದಿ, ಕಾರಟಗಿ
ಜಿಲ್ಲೆಯ ಕಾರಟಗಿ ನಗರದಲ್ಲಿ ದಂಪತಿ ಮೇಲೆ‌ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ಮಾಡಿದ್ದು, ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪತಿ ಗಂಭೀರ ಗಾಯವಾಗಿ ಸ್ಥಿತಿ ಚಿಂತಾಜನಕವಾಗಿದ್ದು, ಗಂಗಾವತಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ  ಖಾಸಗಿ ಬ್ಯಾಂಕ್ ಉದ್ಯೋಗಿ ತ್ರಿವೇಣಿ(28) ಮೃತ ಮಹಿಳೆ.‌ ಐಡಿಎಫ್ ಸಿ ಬ್ಯಾಂಕ್ ಕಾರಟಗಿ ಶಾಖೆಯ ಉದ್ಯೋಗಿ‌ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ವಿನೋದ(35) ಗಂಭೀರವಾಗಿ ಗಾಯಗೊಂಡಿದ್ದಾನೆ.‌… ..ಮುಂದೆ ಓದಿ

ಗಂಗಾವತಿಯಲ್ಲಿ ಕೃಷಿ ವಿವಿ ಸ್ಥಾಪಿಸಿ; ಜಿಲ್ಲಾ ಮಂತ್ರಿ ನೇತೃತ್ವದಲ್ಲಿ ಕೊಪ್ಪಳ ಶಾಸಕ, ಸಂಸದರಿಂದ ಸಿಎಂಗೆ ಪ್ರಸ್ತಾವನೆ

ವಿಜಯಪರ್ವ ಸುದ್ದಿ, ಬೆಂಗಳೂರು
ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನ ಕೃಷಿ ವಿಶ್ವ‌ವಿದ್ಯಾಲಯ ಸ್ಥಾಪಿಸಬೇಕು ಎಂದು ಕೊಪ್ಪಳ‌ ಜಿ‌ಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಶಾಸಕ, ಸಂಸದರು ಸಿಎಂ ಯಡಿಯೂರಪ್ಪ ಅವರಿಗೆ ಬುಧವಾರ ಪ್ರಸ್ತಾವನೆ ಸಲ್ಲಿಸಿದರು.

ಗಂಗಾವತಿ ತಾಲೂಕು ನೀರಾವರಿ ಮತ್ತು ಒಣಭೂಮಿ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಮತ್ತು ನೀರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತವಾಗಿದೆ.… ..ಮುಂದೆ ಓದಿ

ಅಪ್ರಾಪ್ತ ಬಾಲಕಿ ಅಪಹರಿಸಿ ವೇಶ್ಯಾವಾಟಿಕೆಗೆ ದೂಡಿದ ಆರೋಪ; ಶಿಕ್ಷೆ ಪ್ರಕಟಿಸಿದ ಕೋರ್ಟ್

ವಿಜಯಪರ್ವ ಸುದ್ದಿ, ಕೊಪ್ಪಳ

ಅಪ್ರಾಪ್ತ ಬಾಲಕಿ ಅಪಹರಿಸಿ ವೇಶ್ಯಾವಾಟಿಕೆಗೆ ದೂಡಿದ್ದ ಆರೋಪಿಗಳಿಗೆ ಕೊಪ್ಪಳ ಜಿಲ್ಲಾ  ಹಾಗೂ ಪೋಕ್ಸೋ ತ್ವರಿತ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ.

ಬಲವಂತವಾಗಿ ವೇಶ್ಯಾವಾಟಿಕೆಗೆ ಪ್ರಚೋದಿಸಿದ ಆರೋಪಕ್ಕೆ ಫರವೀನ್ ಗಂಡ ಜಯರಾಮ ಎಂಬ ಮಹಿಳೆಗೆ 10 ವರ್ಷ ಜೈಲು ಶಿಕ್ಷೆ ಹಾಗೂ 45 ಸಾವಿರ ರೂಪಾಯಿ ದಂಡ ಹಾಗೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ರಾಮು ತಂದೆ ಬಾಬುಗೆ 10 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಫೋಕ್ಸೋ ಪ್ರಕರಣಗಳ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಶಂಕರ ಎಂ.ಜಾಲವಾದಿ… ..ಮುಂದೆ ಓದಿ

2020ರಲ್ಲೇ‌ ಗ್ರಾಪಂ ಚುನಾವಣೆ ನಡೆಸಬೇಕಿದೆ; ಸರ್ಕಾರಕ್ಕೆ ರಾಜ್ಯ ಚುನಾವಣೆ ಆಯೋಗ ಖಡಕ್ ಪತ್ರ

ವಿಜಯಪರ್ವ ‌ಸುದ್ದಿ, ಬೆಂಗಳೂರು
ಎಸ್ಒಪಿ‌ (ಸ್ಟ್ಯಾಂಡರ್ಡ್ ‌ಆಪರೇಟಿಂಗ್‌‌ ಪ್ರೊಸಿಜರ್) ಅಳವಡಿಸಿಕೊಂಡು 2020ರ ಒಳಗಾಗಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ, ರಾಜ್ಯ ‌ಚುನಾವಣೆ ಆಯೋಗ ಖಡಕ್ ಉತ್ತರ ನೀಡಿದೆ.‌

ರಾಜ್ಯದಲ್ಲಿ ‌ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಬೇಕು ಎಂದು ರಾಜ್ಯ ‌ಸರ್ಕಾರ‌‌, ದಿನಾಂಕ: 13-10-2020 ರಂದು ಬರೆದ ಪತ್ರಕ್ಕೆ ಆಯೋಗ‌ ಪ್ರತಿಕ್ರಿಯೆ ನೀಡಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ‌ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣೆ ನಡೆಸುವುದು ಆಯೋಗದ ಸಂವಿಧಾನಿಕ ಕರ್ತವ್ಯವಾಗಿದೆ.… ..ಮುಂದೆ ಓದಿ

ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ: ತಂಗಡಗಿ

ವಿಜಯಪರ್ವ ಸುದ್ದಿ, ಕೊಪ್ಪಳ
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಪಕ್ಷದ ಜನಪರ‌ ಕಾಳಜಿ ಏನೆಂಬುದು ದೇಶದ ಜನತೆಗೆ ಗೊತ್ತಿದೆ. ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಜೆಡಿಎಸ್ ಪಕ್ಷ ಮತ್ತೊಬ್ಬರತ್ತ ಬೆರಳು ತೋರಿಸುವಾಗ ಇನ್ನುಳಿದ ಬೆರಳುಗಳು ತಮ್ಮ ಕಡೆಗೇ‌ ಇರುತ್ತವೆ‌ ಎಂಬುದನ್ನು ಮರೆಯಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.… ..ಮುಂದೆ ಓದಿ

ಕೇಂದ್ರ- ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಕೈ ಬಿಡಲಿ: ಶೀಲವಂತರ

ವಿಜಯಪರ್ವ ಸುದ್ದಿ, ಕೊಪ್ಪಳ
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಬದಲಾಗಿ ಕಾರ್ಪೊರೇಟ್ ಕಂಪನಿಗಳ ಇಷ್ಟಾರ್ಥ ಪೂರೈಕೆಗೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೋರಾಟಗಾರ ಬಸವರಾಜ ಶೀಲವಂತರ ದೂರಿದರು.

ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶುಕ್ರವಾರ ಮಾತನಾಡಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ ರೈತರ, ಕಾರ್ಮಿಕರ ಹಿತ ಮರೆತಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.… ..ಮುಂದೆ ಓದಿ

error: Content is protected !!