ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ; ಕೃಷಿ ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ | ಕೊಪ್ಪಳ
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ಆದರೆ ಅದು ಯಾವತ್ತೂ ಸಫಲವಾಗದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಕೊಪ್ಪಳದ ಜಿಲ್ಲಾಡಳಿತ ಭವನದ ಮುಂದೆ ಬುಧವಾರ ಮಾಧ್ಯಮಗಳಿಗೆ ಮಾತನಾಡಿದರು.

ಶಾಸಕಾಂಗ ಪಕ್ಷದ ಸಭೆ ಕರೆದ ಕೂಡಲೇ ಸಿಎಂ ಬದಲಾವಣೆ ಮಾಡ್ತಾರೆ ಎಂಬ ಕಲ್ಪನೆ ತಪ್ಪು.… ..ಮುಂದೆ ಓದಿ

ಭೈರಾಪುರದಲ್ಲಿ ಶ್ರೀರಾಮನ ಹೆಜ್ಜೆ ಗುರುತು!

ಕುಬೇರ ಮಜ್ಜಿಗಿ

ತಾಲೂಕಿನ ಅಳವಂಡಿ ಪಕ್ಕದ ಭೈರಾಪುರ ಒಂದು ಪುಟ್ಟ ಗ್ರಾಮ. ಈ ಗ್ರಾಮಕ್ಕೆ ರಾಮಾಯಣ ಕಾಲದ ನಂಟು ಇದೆ. ಇದು ಶ್ರೀರಾಮ ನಡೆದಾಡಿದ ಪುಣ್ಯಭೂಮಿಯೂ ಹೌದು. ಸ್ವತಃ ಶ್ರೀರಾಮನ ಪಾದದ ಗುರುತು ಇಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ಭೈರವ ಎಂಬ ಋಷಿಮುನಿ ವಾಸವಾಗಿದ್ದನಂತೆ. ಹಾಗಾಗಿ ಈ ಗ್ರಾಮಕ್ಕೆ ಮೊದಲು ಭೈರವಪುರ ಎಂದು ನಂತರ ಭೈರಾಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.… ..ಮುಂದೆ ಓದಿ

ಟಿಕ್ ಟಾಕ್ ನಲ್ಲಿ ಪರಿಚಯ; ಶಾಸಕನ ಪುತ್ರ ಎಂದವನಿಗೆ ಮೈ, ಮನಸ್ಸು ಕೊಟ್ಟು ಯಾಮಾರಿದ ಯುವತಿ

ವಿಜಯಪರ್ವ ಸುದ್ದಿ, ಕೊಪ್ಪಳ
ತಾನು ಶಾಸಕನ ಪುತ್ರ ಎಂದು ಹೇಳಿಕೊಂಡು ಟಿಕ್ ಟಾಕ್ ನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೊ ಮತ್ತು ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರುವ ಆರೋಪಿ ಜೈಲು ಪಾಲಾಗಿದ್ದಾನೆ.

ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಬಾಗೋಡಿಯ ಮಹ್ಮದ್ ಚಾಂದ್ ಪಾಷಾ ಅಲಿಯಾಸ್ ಚಂದು ಪಾಟೀಲ್ ಬಂಧಿತ ಯುವಕ.… ..ಮುಂದೆ ಓದಿ

ಲಾಕ್‌ಡೌನ್ ಅನಿವಾರ್ಯ, ಮದ್ದಾನೆ‌ ಗುದ್ದಾಟದ ಬಗ್ಗೆ‌ ಮಾತನಾಡಲ್ಲ; ಕೃಷಿ ಮಂತ್ರಿ ಬಿ. ಸಿ. ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಆದರೆ, ಇದಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೇ ಅಗತ್ಯ. ಒಂದೊಮ್ಮೆ ಸಾರ್ವಜನಿಕರು ಸರ್ಕಾರದ‌ ನಿಯಮಗಳನ್ನು ಪಾಲಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.

ಕೊಪ್ಪಳ ತಾಲೂಕಿನ ಗಿಣಗೇರಿ‌ ಕೆರೆ ಅಭಿವೃದ್ಧಿ ಕಾಮಾಗಾರಿ ವೀಕ್ಷಿಸಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದರು.… ..ಮುಂದೆ ಓದಿ

ಅಂಜನಾದ್ರಿಗೊಂದು ಪೊಲೀಸ್ ಠಾಣೆ!

ವಿಜಯಪರ್ವ ಸುದ್ದಿ,‌ ಕೊಪ್ಪಳ

ಹನುಮ ಜನ್ಮ ಸ್ಥಳ ಎಂಬ ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಂಜನಾದ್ರಿ ಪರ್ವತ‌ ಒಳಗೊಂಡಂತೆ ಹೊಸ ‌ಪೊಲೀಸ್ ಠಾಣೆ ಸ್ಥಾಪನೆಗೆ ಭರದ ಸಿದ್ದತೆ ನಡೆದಿದೆ. ಈ ಬಗ್ಗೆ ಇಂದು ಕೊಪ್ಪಳ ಸಿಪಿಐ ಉದಯ‌ರವಿ ಮತ್ತು ಪಿಎಸ್ಐ ದೊಡ್ಡಪ್ಪ ಅವರಿಂದ ಸಮಗ್ರ ಮಾಹಿತಿ ಪಡೆದಿರುವ‌‌ ಕೊಪ್ಪಳ ಎಸ್ಪಿ ಟಿ.ಶ್ರೀಧರ‌… ..ಮುಂದೆ ಓದಿ

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಪ್ರತಿಭಟನಾಕಾರರ ಬಂಧನ, ಬಿಡುಗಡೆ

ವಿಜಯಪರ್ವ ಸುದ್ದಿ, ಕೊಪ್ಪಳ
ಮರಾಟ ಪ್ರಾಧಿಕಾರ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕೊಪ್ಪಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ 5 ಗಂಟೆಯಿಂದಲೇ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹೋರಾಟಕ್ಕೆ ಮುಂದಾಗಿದ್ದರು. ಟೈರ್ ಗೆ ಬೆಂಕಿ ಹಚ್ಚಿ‌, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕೃತಿ ಸಹಿಸಿ ಆಕ್ರೋಶ ವ್ಯಕ್ತಪಡಿಸಿದರು.‌‌ ಬೆಳಗಿನ ಜಾವ ಹೋರಾಟಗಾರರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು‌ ಕಂಡು ಬಂತು.…
..ಮುಂದೆ ಓದಿ

ಕರ್ನಾಟಕ ಬಂದ್ ಹಿನ್ನೆಲೆ 15 ಕಾರ್ಯಕರ್ತರ ಹೋರಾಟ; 50 ಪೊಲೀಸರಿಂದ ಬಂದೋಬಸ್ತ

ವಿಜಯಪರ್ವ ಸುದ್ದಿ, ಕೊಪ್ಪಳ
ಮರಾಟಾ ಅಭಿವೃದ್ಧಿ ನಿಗಮ‌ ಸ್ಥಾಪನೆ ವಿರೋದಿಸಿ ಕರೆ ನೀಡಿರೋ ಕರ್ನಾಟಕ ಬಂದ್ ಹಿನ್ನೆಲೆ ಕೊಪ್ಪಳದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಶನಿವಾರ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿದರು.

ಕನ್ನಡ ಪರ ಸಂಘಟನೆಗಳ ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗ್ಗೆ 5ಕ್ಕೆ ರಸ್ತೆಗಿಳಿದಿದ್ದರು. ಟೈರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.… ..ಮುಂದೆ ಓದಿ

ವಯಸ್ಸಾದ ಆಕಳನ್ನು ಸಿ.ಟಿ.ರವಿ ‌ಮನೆ ಮುಂದೆ ಕಟ್ಟಬೇಕಾ? ಬಿಜೆಪಿ ಮುಖಂಡರ ಮನೆ ಮುಂದೆ ತರಬೇಕಾ? ನಾವು ಏನು ತಿನ್ನಬೇಕು ನಮಗೆ ಗೊತ್ತು; ತಂಗಡಗಿ

ವಿಜಯಪರ್ವ ಸುದ್ದಿ, ಕೊಪ್ಪಳ
ವಯಸ್ಸಾದ ಆಕಳನ್ನು ಸಿ.ಟಿ. ರವಿ ಮನೆ ಮುಂದೆ ಕಟ್ಟಬೇಕಾ? ಸ್ಥಳೀಯ ಬಿಜೆಪಿ ಮುಖಂಡರ ಮನೆ ಮುಂದೆ ಕಟ್ಟಬೇಕಾ? ಸಂವಿಧಾನ ಆಹಾರದ ಹಕ್ಕು ನೀಡಿದೆ ಏನು ತಿನ್ನಬೇಕು ಅನ್ನೋದು ನಮಗೆ ಬಿಟ್ಟಿದ್ದು ಎಂದು ಮಾಜಿ ಮಂತ್ರಿ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಕೇಂದ್ರ ಮತ್ತು ತಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧ ಮಾಡುವ ಮುನ್ನ ಅದರ ಸಾಧಕ ಬಾಧಕ ಚರ್ಚಿಸಬೇಕು.… ..ಮುಂದೆ ಓದಿ

ಎರಡನೇ ಬೆಳೆಗೆ ಷರತ್ತಿನೊಂದಿಗೆ ನೀರು ಬಿಡಲು ಐಸಿಸಿ‌ ಸಭೆ ತೀರ್ಮಾನ; ಏನದು ಷರತ್ತು?

ವಿಜಯಪರ್ವ ಸುದ್ದಿ, ಕೊಪ್ಪಳ
ತುಂಗಭದ್ರ ಡ್ಯಾಂ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ 2ನೇ ಬೆಳೆಗೆ ನೀರು ಸಿಗೋದು ಪಕ್ಕಾ ಆಗಿದೆ. ಆದಾಗ್ಯೂ ನೀರಿನ ಕೊರತೆ ಇದ್ದು, ರೈತರು ಮಿತವಾಗಿ ನೀರು ಬಳಕೆ ಮಾಡಬೇಕು. ಭತ್ತ, ಕಬ್ಬಿನ ಹೊರತಾಗಿ ಬೇರೆ ಬೆಳೆ ಬೆಳೆಯಬೇಕು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಹಾಗೂ ಬಳ್ಳಾರಿ ಉಸ್ತುವಾರಿ ಮಂತ್ರಿ ಆನಂದ್ ಸಿಂಗ್ ರೈತರಿಗೆ ಮನವಿ ಮಾಡಿದರು.…
..ಮುಂದೆ ಓದಿ

ನಿಶ್ಚಿತಾರ್ಥಕ್ಕೆ ಹೊರಟಿದ್ದ ಮಿನಿ ಬಸ್ ಅಪಘಾತ; 4 ಜನ ಸ್ಥಳದಲ್ಲೇ ಸಾವು, ಅಪಘಾತಕ್ಕೆ ಕಾರಣ ಏನು?

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲೆಯ ಕುಕನೂರು ತಾಲೂಕು ನಿಟ್ಟಾಲಿ ಕ್ರಾಸ್ ಬಳಿ ಮಿನಿಬಸ್ ಹಾಗೂ ಬೈಕ್ ನಡುವೆ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, 4 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೈಕ್ ಸವಾರ ಕುಕನೂರು ತಾಲೂಕು ಬೆಣಕಲ್ ಗ್ರಾಮದ ಸಂತೋಷ ವುಂಕಿ(25) ಮತ್ತು ಮಿನಿ ಬಸ್ ನಲ್ಲಿದ್ದ ರಂಗಪ್ಪ ನಾಗಣ್ಣವರ(80), ಭೀಮವ್ವ ಗೋಡಿ(70) ಸೇರಿ 3 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.… ..ಮುಂದೆ ಓದಿ