ಗುನ್ನಳ್ಳಿಯ ಗವಿಯಲ್ಲಿ ಶಿಲಾಯುಗದ ಚಿತ್ರಗಳು ಪತ್ತೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ತಾಲೂಕಿನ ಗುನ್ನಳ್ಳಿ ಗ್ರಾಮದ ಚಿಲಕನಮಟ್ಟಿ ಬೆಟ್ಟದಲ್ಲಿ ಶಿಲಾಯುಗ ಕಾಲದ ಗವಿಚಿತ್ರಗಳು ಮತ್ತು ಚಾರಿತ್ರಿಕ ಕಾಲದ ಬಣ್ಣದಲ್ಲಿ ಬರೆದ ಶಾಸನಗಳು ಪತ್ತೆಯಾಗಿವೆ. ಜಿಲ್ಲೆಯ ಇತಿಹಾಸ  ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಈ ಈ ಚಿತ್ರಿತ ನೆಲೆಯನ್ನು ಪರಿಶೋಧಿಸಿದ್ದಾರೆ.   

ಕೊಪ್ಪಳ ನಗರದಿಂದ ನೈರುತ್ಯಕ್ಕೆ ಸುಮಾರು 10 ಕಿ.ಮೀ. ‌ದೂರದಲ್ಲಿ ಗುನ್ನಳ್ಳಿ ಗ್ರಾಮವಿದೆ...ಮುಂದೆ ಓದಿ

ಕಾಸಿಂ ಸಂಕನೂರ ನಿಯೋಜನೆ ರದ್ದತಿಗೆ ಚಾಲನೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆ ರದ್ದುಗೊಳಿಸುವ ಕುರಿತು ನಿರ್ದೇಶನ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆಯ ಕಾರ್ಯದರ್ಶಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಮಗುವಿಗೆ ಸಿದ್ದರಾಮಯ್ಯ ಹೆಸರು ನಾಮಕರಣ!

ವಿಜಯ ಪರ್ವ ಸುದ್ದಿ | ಕೊಪ್ಪಳ

ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರನ್ನು ಅವರ ಅಪ್ಪಟ ಅಭಿಮಾನಿಯೊಬ್ಬ ತನ್ನ ಮಗನಿಗೆ ನಾಮಕರಣ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪೂರ ಗ್ರಾಮದ ಸಿದ್ದರಾಮಯ್ಯ ಅಭಿಮಾನಿ ಮಂಜುನಾಥ್ ಮರಡಿ ಅವರು ಇಂದು ತಮ್ಮ ಮಗನಿಗೆ ʼಸಿದ್ದರಾಮಯ್ಯʼ ಎಂದು ನಾಮಕರಣ ಮಾಡಿದರು...ಮುಂದೆ ಓದಿ

ಕಾಸಿಂ ಸಂಕನೂರ ನಿಯೋಜನೆ ರದ್ದತಿಗೆ ಡಿಡಿಪಿಐ ಪತ್ರ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆ ರದ್ದುಗೊಳಿಸಲು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜೂನ್‌ 16 ರಂದು ಅವರು ಬರೆದಿರುವ ಪತ್ರದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಅಬಕಾರಿ ಆಡಿಯೋ ಸುತ್ತ ಪೋಸ್ಟ್‌, ಡಿಲೀಟ್‌ ಆಟ

ವಿಜಯ ಪರ್ವ ಸುದ್ದಿ | ಕೊಪ್ಪಳ

ಅಬಕಾರಿ ಇಲಾಖೆಯ ದಾಳಿ ಮತ್ತು ವಸೂಲಿಗೆ ಸಂಬಂಧಿಸಿದಂತೆ ಕೆಲವು ಆಡಿಯೊಗಳು ಭಾನುವಾರ (20-6-2021) ಸಂಜೆಯಿಂದ ಭಾರೀ ಸುದ್ದಿ ಮಾಡುತ್ತಿವೆ.

ಬಾರುಗಳಿಂದ ಅಕ್ರಮವಾಗಿ ಮಾಮೂಲು ವಸೂಲು ಮಾಡುವುದಕ್ಕೆ ಸಂಬಂಧಿಸಿದಂತೆ ಕಹಿಯಾದ ಬೆಳವಣಿಗೆಯೊಂದರ ಮೂಲ ಈ ಆಡಿಯೊಗಳಲ್ಲಿದೆ. ಅಬಕಾರಿ ಸಚಿವರು ಹಾಗೂ ಜಂಟಿ ಆಯುಕ್ತರ ಸೂಚನೆಯ ಮೇರೆಗೆ ಪ್ರತಿಯೊಂದು ಬಾರುಗಳು ನೀಡಬೇಕಾದ ಮಾಮೂಲು ಹೆಚ್ಚಬೇಕೆಂದು ಅಬಕಾರಿ ಡಿ.ಸಿ...ಮುಂದೆ ಓದಿ

ಎಲ್ಲಾ ನಿಯೋಜಿತ ಶಿಕ್ಷಕರ ವಿವರ ಕೇಳಿದ ಆಯುಕ್ತ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾನೂನುಬಾಹಿರ ಕ್ರಮಗಳಿಂದ ಬೇಸತ್ತಿರುವ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಳಿನ್‌ ಅತುಲ್‌ ಅವರು, ಬೋಧಕೇತರ ಕೆಲಸಕ್ಕೆ ನಿಯೋಜಿತರಾದ ಎಲ್ಲಾ ಶಿಕ್ಷಕರ ವಿವರಗಳನ್ನು ಸಲ್ಲಿಸುವಂತೆ ಡಿಡಿಪಿಐ ಅವರಿಗೆ ತಾಕೀತು ಮಾಡಿದ್ದಾರೆ.

ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಅಮಾನತಾದ ನಂತರ, ವಿಚಾರಣೆ ಬಾಕಿ ಇರಿಸಿ ʼಸಿʼ ವಲಯಕ್ಕೆ ವರ್ಗಾಯಿಸಬೇಕಿದ್ದ ಹುಲಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸೈಯದ್‌ ಅಬ್ದುಲ್‌ ರೆಹಮಾನ್‌ ಅವರನ್ನು ಕಾನೂನುಬಾಹಿರವಾಗಿ ʼಎʼ ವಲಯಕ್ಕೆ ಸೇರಿದ ಶಾಲೆಗೆ ವರ್ಗಾಯಿಸಲಾಗಿತ್ತು...ಮುಂದೆ ಓದಿ

ಸಿಪಿಐ ಉದಯರವಿ ವಿರುದ್ಧ ಮಾಜಿ ಸಚಿವ ತಂಗಡಗಿ ನೇರ ಆರೋಪ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕನಕಗಿರಿ ಕ್ಷೇತ್ರ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ; ಇದರಲ್ಲಿ ಶಾಸಕ ಬಸವರಾಜ ಧಡೆಸುಗೂರು, ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಗಂಗಾವತಿ ಗ್ರಾಮೀಣ ಠಾಣೆ ಸಿಪಿಐ ಉದಯರವಿ ಅವರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಮಾಜಿ ಶಾಸಕ ಶಿವರಾಜ ತಂಗಡಗಿ ಮಾಡಿದ್ದಾರೆ.

(ಸುದ್ದಿಗೋಷ್ಠಿಯ ವಿಡಿಯೋ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ)

https://drive.google.com/file/d/1qrl9cEiI06LORKusyL7qa_t7uN7lCvpX/view?usp=sharing..ಮುಂದೆ ಓದಿ

ತಪ್ಪು ತಿದ್ದಿಕೊಂಡ ಕೊಪ್ಪಳ ಡಿಡಿಪಿಐ

ವಿಜಯ ಪರ್ವ ಫಲಶೃತಿ | ಕೊಪ್ಪಳ

ಅಮಾನತಾಗಿದ್ದ ಶಿಕ್ಷಕನೊಬ್ಬನನ್ನು ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020 ರ ಅಡಿ ʼಸಿʼವಲಯ ಬಿಟ್ಟು ʼಎʼ ವಲಯಕ್ಕೆ ವರ್ಗಾಯಿಸಿದ್ದ ಕೊಪ್ಪಳ ಡಿಡಿಪಿಐ ತಮ್ಮ ಆದೇಶ ಬದಲಿಸಿಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಹುಲಗಿಯ ಸರಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಸೈಯದ್‌ ಅಬ್ದುಲ್‌ ರೆಹಮಾನ್‌ ಅವರನ್ನು ಈಗ ʼಎʼ ವಲಯದಿಂದ ʼಸಿʼ ವಲಯಕ್ಕೆ ಮರು ವರ್ಗಾವಣೆ ಮಾಡಿದ್ದಾರೆ...ಮುಂದೆ ಓದಿ

ಸಿಪಿಐ ಉದಯರವಿ ದೂರವಾಣಿ ವಿವಾದ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆ ಗಂಗಾವತಿಯ ಗ್ರಾಮೀಣ ಸಿಪಿಐ ಉದಯರವಿ ಅವರು ಕೊಪ್ಪಳ ನಗರದ ನಿವಾಸಿ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಪೂಜಾರ ಅವರಿಗೆ ಮಾಡಿರುವ ದೂರವಾಣಿ ಕರೆ ಸಾಕಷ್ಟು ವಿವಾದ ಮೂಡಿಸಿದೆ.

ಜೂನ್‌ 1 ಮಧ್ಯಾಹ್ನ 1.03 ಕ್ಕೆ ಮಲ್ಲಿಕಾರ್ಜುನ ಪೂಜಾರ್‌ ಅವರಿಗೆ ಕರೆ ಮಾಡಿರುವ ಉದಯರವಿ ಅವರು ತಮ್ಮ ಪರಿಚಯ ಹೇಳಿಕೊಂಡು, ಗಂಗಾವತಿಯ ಗ್ರಾಮೀಣ ಸಿಪಿಐ ಠಾಣೆಗೆ ಬರುವಂತೆ ಸೂಚಿಸುತ್ತಾರೆ...ಮುಂದೆ ಓದಿ

ಶಿಕ್ಷಕರಿಗೆ ಜೀವಭೀತಿ ತಂದ ಮಕ್ಕಳ ಸಮೀಕ್ಷೆ ಕಾರ್ಯ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೋವಿಡ್‌ ಎರಡನೇ ಅಲೆಯಲ್ಲಿ ರಾಜ್ಯದ 268 ಶಿಕ್ಷಕರು ಜೀವ ಕಳೆದುಕೊಂಡಿದ್ದಾರೆ ಎನ್ನುತ್ತದೆ ಟೈಮ್ಸ್‌ ಆಫ್‌ ಇಂಡಿಯಾ ಆಂಗ್ಲಪತ್ರಿಕೆಯ ಮೇ 13 ರ ವರದಿ.

ಈ ಕುರಿತು ನಿಖರ ಅಂಕಿಅಂಶಗಳು ಈಗಲೂ ಲಭ್ಯವಿಲ್ಲ. ಇದರ ಮಧ್ಯೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ. ಪಾಟೀಲ್‌ ನಿರ್ದೇಶನದ ಮೇರೆಗೆ ಹೊರಡಿಸಲಾಗಿರುವ ಆದೇಶವೊಂದು ಜಿಲ್ಲೆಯ ಶಿಕ್ಷಕರ ಜೀವಕ್ಕೆ ಎರವಾಗುವ ಅಪಾಯ ತಂದಿದೆ...ಮುಂದೆ ಓದಿ