ಗಂಗಾವತಿ ನಗರಸಭೆ ಮತ್ತೇ “ಕೈ” ವಶ; ಬಿಜೆಪಿಗೆ ಮುಖಭಂಗ; ಉಪಾಧ್ಯಕ್ಷೆ‌ ವಿರುದ್ಧ ತಿಂಗಳೊಳಗೆ ಕ್ರಮ; ಶಾಸಕ

ವಿಜಯಪರ್ವ ಸುದ್ದಿ, ಗಂಗಾವತಿ
ಕಾಂಗ್ರೆಸ್ ‌ನಿಂದ ಆಯ್ಕೆಯಾದ ನಗರಸಭೆ ಸದಸ್ಯನ ಅಪಹರಣದಿಂದ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಶಾಂತಿಯುತ ತೆರೆ ಬಿದ್ದಿದೆ.‌ ನಗರಸಭೆ ಅಧಿಕಾರ ಮತ್ತೇ ಕಾಂಗ್ರೆಸ್ ಪಾಲಾಗಿದ್ದು, ಅಧಿಕಾರ‌ ಹಿಡಿಯುವ ಕಮಲ ಪಾಳೆಕ್ಕೆ ಮುಖಭಂಗವಾಗಿದೆ.

ಕಳೆದ 15 ದಿನದಿಂದ ದಿನಕ್ಕೊಂದು ಹೈಡ್ರಾಮಾ ಸೃಷ್ಠಿಗೆ ಕಾರಣವಾಗಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಕಾಂಗ್ರೆಸ್- ಬಿಜೆಪಿಗೆ ಸವಾಲಾಗಿತ್ತು.‌… ..ಮುಂದೆ ಓದಿ

ಗೆಳೆಯನ ಲವ್‌ ಮಾಡು ಎಂದವನಿಗೆ ಮಹೂರ್ತ ಇಟ್ಟರು; 6 ತಿಂಗಳ ನಂತರ ಆರೋಪಿಗಳು ಅಂದರ್

ವಿಜಯಪರ್ವ ಸುದ್ದಿ, ಕೊಪ್ಪಳ
ಪ್ರೀತ್ಸೆ ಅಂತಾ ಪ್ರಾಣ ತಿನ್ನೋ‌ ಹುಡುಗರು ಆ ಹುಡುಗಿಯ ಅಣ್ಣ-ತಮ್ಮಂದಿರಿಂದ ಗೂಸ ತಿನ್ನೋದು ಸಾಮಾನ್ಯ. ಆದ್ರೆ,‌ ಇಲ್ಲಿ ತನ್ನ ಗೆಳೆಯನನ್ನು ಪ್ರೀತಿ ಮಾಡು ಅಂತಾ ಹಿಂದೆ ಬಿದ್ದವನಿಗೆ ಯುವತಿಯ ಸಹೋದರರು ಮೂಹರ್ತ ಇಟ್ಟು ಮುಗಿಸಿದ್ದಾರೆ. ಬರೋಬ್ಬರಿ 6 ತಿಂಗಳ ನಂತ್ರ ಪೊಲೀಸರು ಆರೋಪಿಗಳನ್ನು ಅಂದರ್ ಮಾಡಿದ್ದಾರೆ.

ಕಳೆದ ಏಪ್ರೀಲ್ 15 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಳ್ಳಾರಿ ಗ್ರಾಮದಲ್ಲಿ 18 ವರ್ಷದ ರಮೇಶ ಪೊಲೀಸ್ ಪಾಟೀಲ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.… ..ಮುಂದೆ ಓದಿ

ಕೊಲೆ ಪ್ರಕರಣದ ತನಿಖೆ ವೇಳೆ ದಾರಿ ತಪ್ಪಿದ ಪಿಎಸ್ಐ; ಅಮಾಯಕರಿಗೆ ಹಿಗ್ಗಾ- ಮುಗ್ಗ ಥಳಿತ!

ವಿಜಯಪರ್ವ ಸುದ್ದಿ,‌ ಕೊಪ್ಪಳ
ಜಿಲ್ಲೆಯ ಕಾರಟಗಿ ಪಿಎಸ್ಐ ಅವಿನಾಶ ಕಾಂಬ್ಲೆ ಕೊಲೆ ಆರೋಪಿಗಳ ಪತ್ತೆ ಮಾಡುವ ಭರದಲ್ಲಿ ಅಮಾಯಕರ‌ ಜೀವ ಹಿಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐಯಿಂದ ಥಳಿಸಿಕೊಂಡಿರೋ ಧಾರವಾಡ ಜಿಲ್ಲೆ ಮದಾರಮಡ್ಡಿ ಮೂಲದ ಇಬ್ಬರು ಗ್ಲಾಸ್ ಸ್ಟೀಮ್‌ ಜೋಡಿಸುವ ಕಾರ್ಮಿಕರು ಮಾನವ ಹಕ್ಕು ಆಯೋಗಕ್ಕೆ ದೂರು‌ ನೀಡಿದ್ದಾರೆ.

ಕಳೆದ ಅ.17 ರಂದು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿ, ಮಹಿಳೆ ಕೊಲೆ ಮಾಡಲಾಗಿತ್ತು.‌… ..ಮುಂದೆ ಓದಿ

ನಗದು, ಚಿನ್ನಾಭರಣ ಕಳ್ಳತನ; 24 ಗಂಟೆ ಒಳಗೆ ಆರೋಪಿಗಳ ಬಂಧನ

ವಿಜಯಪರ್ವ ಸುದ್ದಿ, ಕುಕನೂರು
ಜಿಲ್ಲೆಯ ಕುಕನೂರು ತಾಲೂಕು ತಳಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು 24 ಗಂಟೆ ಒಳಗೆ ಪತ್ತೆ ಮಾಡಿದ್ದಾರೆ.

ಆರೋಪಿಗಳು ಮನೆಯೊಂದರಲ್ಲಿ ಸುಮಾರು 3,16,500 ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದರು.‌ ಕುಕನೂರು ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಶಿವಯೋಗೆಪ್ಪ ಅಲಿಯಾಸ್ ಶಿವು ತಂದೆ ಶೇಖಪ್ಪ ಸುರತಾನಿ (25) ಎಂದು ಗುರುತಿಸಲಾಗಿದೆ.… ..ಮುಂದೆ ಓದಿ

ಅಕ್ರಮಕ್ಕೆ ಬ್ರೇಕ್ ಹಾಕಿ, ಇಲ್ಲವೇ ಶಿಸ್ತು ಕ್ರಮ ಎದುರಿಸಿ; ಎಸ್ಪಿ ಜಿ.ಸಂಗೀತ ಖಡಕ್ ಎಚ್ಚರಿಕೆ!

ವಿಜಯಪರ್ವ ಸುದ್ದಿ, ಕೊಪ್ಪಳ
ನಿಮ್ಮ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ರಮ, ಅನೈತಿಕ ಚಟುವಟಿಕೆ ನಿಯಂತ್ರಿಸಬೇಕು. ಒಂದೊಮ್ಮೆ ಈ ಬಗ್ಗೆ ನನಗೆ ಸಾರ್ವಜನಿಕರಿಂದ ದೂರು ಬಂದರೆ, ನಾನೇ ದಾಳಿ ಮಾಡಿ, ಆಯಾ ಠಾಣಾಧಿಕಾರಿಗಳನ್ನೇ ಹೊಣೆಯಾಗಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ!

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಅವರು ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ಖಡಕ್ ಎಚ್ಚರಿಕೆ ಇದು.… ..ಮುಂದೆ ಓದಿ

ಅಡ್ಡಪಲ್ಲಕ್ಕಿ ಉತ್ಸವ ಘರ್ಷಣೆ ಪ್ರಕರಣ; 50 ಭಕ್ತರು ನ್ಯಾಯಾಂಗ ಬಂಧನಕ್ಕೆ

ವಿಜಯಪರ್ವ ಸುದ್ದಿ, ಕೊಪ್ಪಳ
ಕೋವಿಡ್-19 ಮಾರ್ಗಸೂಚಿ ಲೆಕ್ಕಿಸದೇ ಪವಾಡ ಪುರುಷರ ಅಡ್ಡಪಲ್ಲಕ್ಕಿ ಉತ್ಸವ ನಡೆಸಿ, ಪೊಲೀಸ್ ಜೀಪ್ ಜಖಂ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಭಕ್ತರನ್ನು ಪೊಲೀಸರು ಬಂಧಿಸಿದ್ದಾರೆ.‌ ದೋಟಿಹಾಳ ಹಾಗೂ ಸುತ್ತಲಿನ ಗ್ರಾಮಗಳ 50 ಜನರ ವಿರುದ್ಧ ಕುಷ್ಟಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ದೋಟಿಹಾಳ ಗ್ರಾಮದ ಸುಕಮುನಿ ತಾತನವರ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ರಾತ್ರಿ ನಡೆಯಬೇಕಿತ್ತು.… ..ಮುಂದೆ ಓದಿ

2 ವರ್ಷದಿಂದ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ ದಾಳಿ

ವಿಜಯಪರ್ವ ಸುದ್ದಿ, ಕೊಪ್ಪಳ:
ಜಿಲ್ಲೆಯ ಕನಕಗಿರಿ ತಾಲೂಕು ವ್ಯಾಪ್ತಿಯ ವಿಠಲಾಪೂರ ಗ್ರಾಮದ ಸೀಮಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಇಸ್ಪೀಡ್ ಅಡ್ಡ ಮೇಲೆ ದಾಳಿ ಮಾಡಿರುವ ಪೊಲೀಸರು ನಗದು ಮತ್ತು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ನಾಲ್ವರು ಜೂಜುಕೋರರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ದಾಳಿ ವೇಳೆ 4 ಲಕ್ಷ 65 ಸಾವಿರದ ಮೂರು ನೂರು‌ ರೂಪಾಯಿ ನಗದು ಮತ್ತು ಸುಮಾರು 38 ಲಕ್ಷ ರೂಪಾಯಿ ಮೌಲ್ಯದ 17 ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.…
..ಮುಂದೆ ಓದಿ