ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಿಜಯಪರ್ವ ಸುದ್ದಿ ಕೊಪ್ಪಳ:

ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯವು 2020-21ನೇ ಸಾಲಿಗಾಗಿ ಕಲಾ, ಶಿಕ್ಷಣ, ವಾಣಿಜ್ಯ ಮತ್ತು ವಿಜ್ಞಾನ ತರಗತಿಗಳ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಕಾಲೇಜಿನ ವೆಬ್‍ಸೈಟ್ ವಿಳಾಸ-www.sgpucollegekoppal.com ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಹಾಗೂ ಇನ್ನಿತರ ಮಾಹಿತಿಗಳು ವೆಬ್‍ಸೈಟ್‍ನಲ್ಲಿ ಲಭ್ಯವಿವೆ.… ..ಮುಂದೆ ಓದಿ

ಮರಳು ಸಾಗಣೆಗೆ ನಕಲಿ ಪರ್ಮಿಟ್; ಗಣಿ & ಭೂ ವಿಜ್ಞಾನ ಇಲಾಖೆ ಸಾಥ್!

ವಿಜಯಪರ್ವ ಸುದ್ದಿ,ಕೊಪ್ಪಳ:
ಜಿಲ್ಲೆಯ ಕುಕನೂರು ತಾಲೂಕು ಬಳಗೇರ ಗ್ರಾಮದಲ್ಲಿನ ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದ್ದು, ಸರ್ಕಾರದ ನಿಯಮ ಉಲ್ಲಂಘಿಸಿ ಮರಳು ಮೈನಿಂಗ್ ನಡೆಸಲಾಗುತ್ತಿದೆ ಎಂದು ವಕೀಲ ಸೈಯದ್ ಹಕೀಮ್ ಹುಸೇನ್ ಹೇಳಿದರು. ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಕೆಲ ಫೋಟೊ ಬಿಡುಗಡೆ ಮಾಡಿ ಮಾತನಾಡಿದರು.
ಯಲಬುರ್ಗಾ ತಾಲೂಕಿನ ಬಳಗೇರ ಗ್ರಾಮದ ಸರ್ವೆ ನಂಬರ್ 220/1,2,3,5,6,7,8 ನ ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆ ಮಾಡಲು ಪರವಾನಗಿ ನೀಡಲಾಗಿದೆ.…
..ಮುಂದೆ ಓದಿ

ಕರೋನಾ ಕರಿನೆರಳು; ಕೊಪ್ಪಳ ಜಿಲ್ಲೆ ಆಗುತ್ತಾ ಲಾಕ್?

ವಿಜಯಪರ್ವ‌ ಸುದ್ದಿ, ಕೊಪ್ಪಳ:

ನಾಳೆ ರಾತ್ರಿಯಿಂದಲೇ ಬೆಂಗಳೂರು ಮಹಾನಗರವನ್ನು ‌ ಲಾಕ್‌ ಡೌನ್ ಮಾಡಲಾಗುತ್ತಿದ್ದು, ಉಳಿದ ಜಿಲ್ಲೆಗಳ ಲಾಕ್‌ ಡೌನ್ ಮಾಡುವುದರ ಕುರಿತು ಆಯಾ ಜಿಲ್ಲಾಧಿಕಾರಿಗಳು ನಿರ್ಣಯ ಮಾಡುತ್ತಾರೆ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ನಂತರ ಮಾಹಿತಿ ಮಾಧ್ಯಮಕ್ಕೆ ನೀಡಿದ್ದು,‌ ಸದ್ಯಕ್ಕೆ ಕೊಪ್ಪಳದಲ್ಲಿ ಲಾಕ್ ಡೌನ್ ಮಾಡುವ ಸಂಬಂಧ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ.… ..ಮುಂದೆ ಓದಿ

ಕೊಪ್ಪಳಕ್ಕೆ ಕರೋನ ಶಾಕ್; ಒಂದೇ ದಿನ 82 ಪ್ರಕರಣ ದೃಢ

ವಿಜಯಪರ್ವ ಸುದ್ದಿ, ಕೊಪ್ಪಳ:

ಜಿಲ್ಲೆಗೆ ಕೋವಿಡ್ 19 ಸೋಮವಾರ ಶಾಕ್ ನೀಡಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನಕ್ಕೆ 82 ಪ್ರಕರಣ ದೃಢಪಟ್ಟಿವೆ. ಈ ಮೂಲಕ ಕೊಪ್ಪಳ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 332ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಒಟ್ಟು 82 ಸೋಂಕಿತರ ಪೈಕಿ ಕುಷ್ಟಗಿ ತಾಲೂಕಿನ-18, ಕೊಪ್ಪಳ- 24, ಗಂಗಾವತಿ- 27 ಮತ್ತು ಯಲಬುರ್ಗಾ ತಾಲೂಕಿನ 13 ಪ್ರಕರಣ ಸೇರಿವೆ.… ..ಮುಂದೆ ಓದಿ

ಕೋವಿಡ್19ಗೆ ಮಗು ಸೇರಿ 3 ಬಲಿ, ಸಾವಿನ ಸಂಖ್ಯೆ 9ಕ್ಕೆ ಏರಿಕೆ?

ವಿಜಯಪರ್ವ ಸುದ್ದಿ,ಕೊಪ್ಪಳ:

ಕೋವಿಡ್ 19 ಸೋಂಕು ಇಂದು ಮತ್ತೇ ಕೊಪ್ಪಳ ಜಿಲ್ಲೆಗೆ ಶಾಕ್‌ ನೀಡಲಿದೆ. ಜಿಲ್ಲೆಯಲ್ಲಿ ಇಂದು‌‌ ಕೋವಿಡ್ 19 ಸೋಂಕಿತ ಮಗು ಸೇರಿ 3 ಜನ ಮೃತಪಟ್ಟಿದ್ದಾರೆ. ಈಗಾಗಲೇ ಕೊಪ್ಪಳದ‌ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮಗು ಹಾಗೂ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದ ವ್ಯಕ್ತಿ ಮೃತಪಟ್ಟಿದ್ದು,‌ ಮೃತ ಇನ್ನೊಬ್ಬ ವ್ಯಕ್ತಿಯ ಪರೀಕ್ಷಾ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.… ..ಮುಂದೆ ಓದಿ

ಕೆಲಸ ಬಹಿಷ್ಕರಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ವಿಜಯ ಪರ್ವ ಸುದ್ದಿ,ಕೊಪ್ಪಳ:

ಕನಿಷ್ಠ 12 ಸಾವಿರ ರೂಪಾಯಿ ಗೌರವ ಧನ ನೀಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕರೆ ನೀಡಿರುವ ಪ್ರತಿಭಟನೆಗೆ ಕೊಪ್ಪಳದಲ್ಲಿ ಬೆಂಬಲ ವ್ಯಕ್ತವಾಗಿದೆ.ಕೊಪ್ಪಳ ಜಿಲ್ಲೆಯ ಆಶಾ ಕಾರ್ಯಕರ್ತೆಯರೂ ಇಂದಿನಿಂದ ಕೋವಿಡ್ 19 ವಿಶೇಷ ಕೆಲಸ‌ ಸೇರಿ ತಮ್ಮ ಸಾಮಾನ್ಯ ಕರ್ತವ್ಯವನ್ನು ಬಹಿಷ್ಕರಿಸಿ ಮುಷ್ಕರ ಆರಂಭಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಸಂಘಟನೆಯ ಕೆಲ ಮುಖಂಡರು ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿನ ಡಿಎಚ್ ಒ ಕಚೇರಿಗೆ ಆಗಮಿಸಿ ತಾವು ಕರ್ತವ್ಯಕ್ಕೆ ಹಾಜರಾಗದಿರುವ ಬಗ್ಗೆ ಮಾಹಿತಿ ನೀಡಿದರು.… ..ಮುಂದೆ ಓದಿ

ಕೋವಿಡ್ 19ಗೆ ಕೊಪ್ಪಳದಲ್ಲಿ ಮತ್ತೋಂದು ಬಲಿ; ಸಾವಿನ ಸಂಖ್ಯೆ 5ಕ್ಕೆ ಏರಿಕೆ

ವಿಜಯ ಪರ್ವ ಸುದ್ದಿ, ಕೊಪ್ಪಳ
ನಗರದ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 42 ವರ್ಷದ ಕರೋನ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕೊಪ್ಪಳ ಸಮೀಪದ ಭಾಗ್ಯನಗರ ಪಟ್ಟಣದ 42 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದರಿಂದ ದಿನಾಂಕ: 09-07-2020ರಂದು ಮಧ್ಯಾಹ್ನ 2.51ಕ್ಕೆ ಚಿಕಿತ್ಸೆಗೆ ದಾಖಲಾಗಿದ್ದರು. ದಾಖಲಾದ 24 ಗಂಟೆಯೊಳಗೆ ವ್ಯಕ್ತಿ ಮೃತಪಟ್ಟಿದ್ದಾನೆ.…
..ಮುಂದೆ ಓದಿ

ಕರೋನ; ಕೊಪ್ಪಳದಲ್ಲಿಇಂದು 2 ಸಾವು-ಮೃತರ ಸಂಖ್ಯೆ 4ಕ್ಕೆ ಏರಿಕೆ

ವಿಜಯ ಪರ್ವ ಸುದ್ದಿ, ಕೊಪ್ಪಳ:ಕೊಪ್ಪಳ ಜಿಲ್ಲೆಯಲ್ಲಿ ಇಂದು ಕೋವಿಡ್ 19 ಸೋಂಕು ಅಟ್ಟಹಾಸ ಮೆರೆದಿದೆ. ಒಂದೇ ದಿನ ಕೋವಿಡ್ 19 ಸೋಂಕಿತ ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಗಂಗಾವತಿ ತಾಲೂಕು ಚಿಕ್ಕಜಂತಕಲ್ ಗ್ರಾಮದ 51 ವರ್ಷದ P 24910 ಹಾಗೂ ಕೊಪ್ಪಳ ತಾಲೂಕಿನ ಮುನಿರಾಬಾದ್ ನ 67 ವರ್ಷದ ಕೋವಿಡ್ 19 ಸೋಂಕಿತ‌ ವ್ಯಕ್ತಿ ಸಾವಿಗೀಡಾಗಿದ್ದಾನೆ.… ..ಮುಂದೆ ಓದಿ

ಒಂದೇ ಹಗ್ಗಕ್ಕೆ ನೇಣು ಹಾಕಿಕೊಂಡು ಪ್ರೇಮಿಗಳ ಸಾವು

ಕೊಪ್ಪಳ: ಕುಷ್ಟಗಿ ತಾಲೂಕು ತಾವರಗೇರ ಸಮೀಪದ ಜೆ‌. ರಾಂಪೂರ ಗ್ರಾಮದ ಸೀಮಾ ದಲ್ಲಿ ಪ್ರೇಮಿಗಳು ಒಂದೇ ಹಗ್ಗಕ್ಕೆ ನೇಣು ಬೀಗಿದುಕೊಂಡು ಮೃತಪಟ್ಟಿದ್ದಾರೆ.

ಪಂಚಾಮಶಾಲಿ ಸಮುದಾಯದ ವೀರುಪಾಕ್ಷಿಗೌಡ (20)ಕುರುಬ ಸಮುದಾಯದ ಯುವತಿ ಹುಲಿಗೆಮ್ಮ ಮೃತರು. ಕಳೆದ ನಾಲ್ಕು ವರ್ಷದಿಂದ ಇವರು ಪ್ರೀತಿಸುತ್ತಿದ್ದರು. ಮದುವೆಗೆ ಕುಟುಂಬದವರು ವಿರೋಧಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಯತ್ತಿದೆ. ಸ್ಥಳಕ್ಕೆ ಪಿಎಸ್ ಐ ಗೀತಾಂಜಲಿ, ಕುಷ್ಟಗಿ ಸಿಪಿಐ ಚಂದ್ರಶೇಖರ್ ಭೇಟಿ ನೀಡಿದ್ದಾರೆ.… ..ಮುಂದೆ ಓದಿ

ಪಾಲು ಪಡೆಯಲು ಸಂಸದ ಸಂಗಣ್ಣ ಕರಡಿ ಪತ್ರ: ಶಿವರಾಜ ತಂಗಡಗಿ ವ್ಯಂಗ್ಯ

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿ ಅಮೃತ ಸಿಟಿ ಯೋಜನೆಯ ಕಾಮಗಾರಿ ಕಳಪೆಯಾಗಿದೆ ಎಂದು ತಮ್ಮ ಪಾಲು ಪಡೆಯುವುದಕ್ಕಾಗಿ  ಸಂಸದ ಸಂಗಣ್ಣ ಕರಡಿ ಪತ್ರ ಬರೆದಿರಬಹುದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದ ಡಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ… ..ಮುಂದೆ ಓದಿ

error: Content is protected !!