ಕೊಪ್ಪಳ: ಕೊರೊನಾಗೆ ಹೆದರಿ ಮನೆ ಖಾಲಿ ಮಾಡಿದ ಮ್ಯಾದರ ಓಣಿ ಜನ!
ಕೊಪ್ಪಳ: ನಗರದ 16ನೇ ವಾರ್ಡ್ ಮ್ಯಾದರ ಓಣಿಯಲ್ಲಿ ವೃದ್ದರೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರು ಮನೆಗಳನ್ನೇ ಖಾಲಿ ಮಾಡಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆ ದಾಖಲಾಗಿದ್ದ ವೃದ್ದರಿಗೆ ಶನಿವಾರ ರಾತ್ರಿ ಸೋಂಕು ಖಚಿತವಾಗಿದೆ. ಈ ಮಾಹಿತಿ ತಿಳಿದ ಓಣಿ ಜನರ ರಾತ್ರೋ ರಾತ್ರಿ ತಮ್ಮ ಮನೆಗಳನ್ನೇ ಖಾಲಿ ಮಾಡಿ ಬೇರೆಡೆ ಹೋಗಿದ್ದಾರೆ.